90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!

Published : Sep 07, 2026, 08:44 AM IST
private bus terrible accident Gulbarga Vijayapura Route

ಸಾರಾಂಶ

ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಬೆಂಗಳೂರು (ಸೆ.7): ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಬಸ್ ವೇಗದಲ್ಲಿದ್ದಾಗ ಚಾಲಕ ಸೀಟಿನಿಂದ ಎದ್ದಿದ್ದೇಕೆ?

ಈ ಆಘಾತಕಾರಿ ಘಟನೆಯ ದೃಶ್ಯ ಖಾಸಗಿ ಬಸ್‌ನಲ್ಲಿನಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ದಾಖಲಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 90 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಚಾಲಕ ಎದ್ದು ನಿಂತಿದ್ದೇಕೆ? ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ನೆಟಿಜನ್ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಚಾಲಕನ ಕಿವಿಯಲ್ಲಿ ಬ್ಲೂಟೂತ್ ಹಿಯರ್ ಬಡ್‌!

ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವುದು ಬ್ಲ್ಯೂಟೂತ್ ಹಿಯರ್ ಬಡ್ ಬಳಸುವಂತಿಲ್ಲ, ಆದರೆ ಪ್ರಯಾಣಿಕರ ಸುರಕ್ಷತೆ ಮರೆತು ಚಾಲಕ ಕಿವಿಯಲ್ಲಿ ಹಿಯರ್ ಬಡ್ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹಾಡುಗಳನ್ನ ಕೇಳುತ್ತಾ ಮೈಮರೆತು ಸೀಟಿನಿಂದ ಎದ್ದಿರುವ ಸಾಧ್ಯತೆಯಿದೆ. ಚಾಲಕನನ್ನು ನಂಬಿ ಪ್ರಯಾಣಿಸುವ ಪ್ರಯಾಣಿಕರಿಗೆ ಅದೆಷ್ಟು ಅಪಾಯಕಾರಿ! ಬಸ್‌ನಲ್ಲಿ ಸುಮಾರು ನಲ್ವತ್ತು ಪ್ರಯಾಣಿಕರು ಚಾಲಕನ ನಂಬಿಕೆ ಇಟ್ಟು ಮಲಗಿರ್ತಾರೆ. ಆದರೆ ಬ್ಲ್ಯೂಟೂತ್‌ನಲ್ಲಿ ಹಾಡುವುದು ಕೇಳುವುದು, ಬಸ್ ವೇಗದಲ್ಲಿದ್ದಾಗಲೇ ಸೀಟಿನಿಂದ ಎದ್ದಿರುವುದು ಎಷ್ಟೊಂದು ನಿರ್ಲಕ್ಶ್ಯ! ಪ್ರಕರಣದ ಬಗ್ಗೆ ತನಿಖೆ ನಡೆಸಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: 90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!
ಹಣಕ್ಕಾಗಿ ಅಲ್ಲ... ಇನ್ನೊಂದು ಕಿಡ್ನಿ ದಾನ ಮಾಡಲು ಅನುಮತಿ ಕೋರಿ ಹೈಕೋರ್ಟ್‌ಗೆ ಬಂದ ವ್ಯಕ್ತಿ!