Farmers: ರೈತರಿಗೆ ಗುಡ್‌ನ್ಯೂಸ್, ಉಚಿತವಾಗಿ ಉಳುಮೆ ಮಾಡಿಕೊಡಲು ಮುಂದಾದ ಸರ್ಕಾರ! ಯಾರಿಗೆ ಅನ್ವಯಿಸುತ್ತೆ? ಪೂರ್ಣ ಮಾಹಿತಿ ಇಲ್ಲಿದೆ

Kannadaprabha News   | Kannada Prabha
Published : Sep 07, 2026, 05:38 AM IST
Farmers

ಸಾರಾಂಶ

ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ. ಯಾವ ರೈತರಿಗೆ ಇದು ಅನುಕೂಲವಾಗುತ್ತೆ, ಜಮೀನು ಎಷ್ಟು ಇರಬೇಕು? ಇಲ್ಲಿದೆ ವಿವರ.

ಏಕೆ ಈ ಯೋಜನೆ?

  • ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ ಬರ. ರೈತರು ಜಮೀನಿನಲ್ಲಿ ಬಿತ್ತನೆಯನ್ನೇ ಮಾಡುತ್ತಿಲ್ಲ
  • ಉಚಿತವಾಗಿ ಉಳುಮೆ ಮಾಡಿ ಜಮೀನು ಹದ ಮಾಡಿಕೊಟ್ಟು ಅರೆ ಖುಷ್ಕಿ ಬೆಳೆ ಬೆಳೆಯಲು ಉತ್ತೇಜನ
  • ಇದರಿಂದ ಹಿಂಗಾರು ಅವಧಿಯಲ್ಲಾದರೂ ರೈತರಿಗೆ ಅನುಕೂಲವಾಗಬಹುದೆಂಬ ನಿರೀಕ್ಷೆ: ಕೃಷಿ ಸಚಿವ

ಮಂಡ್ಯ (ಸೆ.7): ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ರೈತರು ಸಂಕಷ್ಟದಲ್ಲಿದ್ದಾರೆ:

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬರದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭೂಮಿ ಉಳುಮೆ ಮಾಡುವುದಕ್ಕೂ ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಮೂರು ಎಕರೆವರೆಗೆ ಜಮೀನು ಹೊಂದಿರುವ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರವೇ ರೈತರ ಭೂಮಿ ಉಳುಮೆ ಮಾಡಿಕೊಡಲು ಚಿಂತನೆ

ಬರ ಪರಿಸ್ಥಿತಿಯಿಂದ ಬಿತ್ತನೆ ಚಟುವಟಿಕೆ ಕುಂಠಿತಗೊಂಡಿದೆ. ಆಗಸದಲ್ಲಿ ಮಳೆಯ ಮೋಡಗಳೇ ಮಾಯವಾಗಿವೆ. ರೈತರು ಭೂಮಿಯನ್ನು ಉಳುಮೆ ಮಾಡಲಾಗದೆ ತೆಕ್ಕಲು ಬಿಟ್ಟಿದ್ದಾರೆ. ಬರ ವೀಕ್ಷಣೆ ಸಮಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ರೈತರ ಜಮೀನನ್ನು ಹದಗೊಳಿಸಿಕೊಟ್ಟರೆ ಅರೆಖುಷ್ಕಿ ಬೆಳೆಗಳನ್ನಾದರೂ ಬಿತ್ತನೆ ಮಾಡಿ ಬೆಳೆಯುವರೆಂಬ ಉದ್ದೇಶದಿಂದ ಮೂರು ಎಕರೆವರೆಗೆ ಜಮೀನು ಹೊಂದಿರುವವರಿಗೆ ಸರ್ಕಾರದಿಂದಲೇ ಭೂಮಿಯನ್ನು ಉಳುಮೆ ಮಾಡಿಕೊಡುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ತಂದು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದ ಬಳಿಕ ರಾಜ್ಯದ 31 ತಾಲೂಕುಗಳಲ್ಲೂ ಈ ಯೋಜನೆಯನ್ನು ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಮೋಡ ಬಿತ್ತನೆಗೆ ಚಾಲನೆ

ಮೋಡ ಬಿತ್ತನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪರಿಸ್ಥಿತಿ ಆಶಾದಾಯಕವಾಗಿ ಮೂಡಿಬಂದು ಶೇ.30ರಷ್ಟು ಮಳೆಯಾದರೆ ಮತ್ತು ಹಿಂಗಾರು ಮಳೆ ಕೈಹಿಡಿದರೆ ರೈತರಿಗೆ ಅನುಕೂಲಕರವಾಗಬಹುದೆಂಬ ದೃಷ್ಟಿಯಿಂದ ರೈತರ ಜಮೀನನ್ನು ಉಳುಮೆ ಮಾಡಿಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆಸಿ, ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.

ಪ್ರಸ್ತುತ ರಾಜ್ಯ ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ಅಂತರ್ಜಲದ ಮಟ್ಟ ಪಾತಾಳಕ್ಕೆ ಸೇರಿದೆ. ಬಹಳ ಗಂಭೀರ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಬಿತ್ತನೆ ಬೀಜ ತೆಗೆದುಕೊಳ್ಳುವುದಕ್ಕೆ ರೈತರು ಮುಂದಾಗುತ್ತಿಲ್ಲ. ಗೊಬ್ಬರವನ್ನು ಕೇಳುವವರೇ ಇಲ್ಲದಂತಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವಂತಹ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಆಲೋಚಿಸುತ್ತಿದೆ. ಅದಕ್ಕಾಗಿ ಜಮೀನನ್ನು ಉಳುಮೆ ಮಾಡಿಕೊಡುವ ಚಿಂತನೆ ಮೂಡಿದೆ. ಮೋಡ ಬಿತ್ತನೆಯಿಂದಾಗಬಹುದಾದ ಮಳೆ, ಹಿಂಗಾರು ಮಳೆಯ ನಿರೀಕ್ಷೆಯೊಂದಿಗೆ ಈ ಕಾರ್ಯಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: 'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್' - ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!
Dr ಹಾಗೂ Profಗೆ ಇದೀಗ Tr ಹೊಸ ಸೇರ್ಪಡೆ, ರಾಜ್ಯದ ಶಿಕ್ಷಕರಿಗೆ ಇನ್ನು Tr ವಿಶೇಷಣದ ಗೌರವ