ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆ ಹಿನ್ನೆಲೆ; ಪ್ರಧಾನಿ ನರೇಂದ್ರ ಮೋದಿ ಟ್ವೀಟ್

By Ravi Janekal  |  First Published Feb 24, 2023, 2:38 PM IST

ಮಲೆನಾಡಿಗರು ಹಲವು ವರ್ಷಗಳ ಕನಸು ಈಡೇರಿದ ಖುಷಿಯಲ್ಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿರುವುದು ಇನ್ನಷ್ಟು ಜನರ ಖುಷಿ ಹೆಚ್ಚಿಸಿದೆ. 


ಶಿವಮೊಗ್ಗ (ಫೆ.24): ಮಲೆನಾಡಿಗರು ಹಲವು ವರ್ಷಗಳ ಕನಸು ಈಡೇರಿದ ಖುಷಿಯಲ್ಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿರುವುದು ಇನ್ನಷ್ಟು ಜನರ ಖುಷಿ ಹೆಚ್ಚಿಸಿದೆ. 

ಇದೇ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಉದ್ಘಾಟನೆ(Inauguration)ಗೆ ಆಗಮಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್(PM Narendra Modi tweet) ಮಾಡುವ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ದೆಹಲಿಯಿಂದ ಸೋಗಾನೆ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ ವಿಶೇಷ ಭದ್ರತಾ ಪಡೆ!

ಟ್ವೀಟ್‌ನಲ್ಲಿ ಏನಿದೆ?

ಶಿವಮೊಗ್ಗ ವಿಮಾಣ ನಿಲ್ದಾಣ(Shivamogga Airport)ದ ಮೇಲ್ನೋಟದ ವಿಡಿಯೋ ತುಣುಕನ್ನು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ(BY Raghavendra) ಟ್ವಿಟರ್‌(Twitter)ನಲ್ಲಿ ಹಂಚಿಕೊಂಡಿದ್ದರು. "ಶಿವಮೊಗ್ಗ ವಿಮಾನ ನಿಲ್ದಾಣದ ಕನಸು ಸಾಕಾರಗೊಳ್ಳುತ್ತಿದೆ. ಮಲೆನಾಡು ಭಾಗದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯಗಳಿಗೆ ವಿಮಾನ ನಿಲ್ದಾಣ ಸಹಕಾರಿ ಆಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು. ಇದೀಗ  ಬಿ.ವೈ.ರಾಘವೇಂದ್ರ ಅವರ ಟ್ವಿಟ್ ಲಿಂಕ್ ಗೆ   ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿಯವರು,

'ಶಿವಮೊಗ್ಗ ವಿಮಾನ ನಿಲ್ದಾಣವು ವಾಣಿಜ್ಯ, ಸಂಪರ್ಕ ವ್ಯವಸ್ಥೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಲಿದೆ'  ಎಂದು ಟ್ವಿಟ್ ಮಾಡಿದ್ದಾರೆ

Kuvempu Airport: ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಪ್ರಯೋಗಿಕ ಪರೀಕ್ಷೆ ಯಶಸ್ವಿ:

ಉದ್ಘಾಟನೆಗೆ ಮುನ್ನ ಶಿವಮೊಗ್ಗ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಸೇರಿದಂತೆ ಹಲವು ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ. ಈಗಾಗಲೇ ಪ್ರಧಾನಮಂತ್ರಿಗಳ ಭದ್ರತಾ ಹೊತ್ತ ವಾಯುಪಡೆಯ ವಿಮಾನ ಶಿವಮೊಗ್ಗದ ನೂತನ ವಿಮಾನದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡುವ ಬಗ್ಗೆ ನಿರ್ಧಾರವೂ ಅಂತಿಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕರ್ಪಣೆಗೊಳಿಸಲು ಮಲೆನಾಡು ಜನರು ಎದುರು ನೋಡುತ್ತಿದ್ದಾರೆ. 

click me!