ಒಬ್ಬರಿಗೆ ದೇವರು, ಇನ್ನೊಬ್ಬರಿಗೆ ಗುರು.. ಮತ್ತೊಬ್ಬನಿಗೆ ಮಹಾತ್ಮ.. ಅವರವರ ಭಾವಕ್ಕೆ ಮೋದಿ ಕಂಡು ಧನ್ಯರಾದರು!

Published : May 06, 2023, 05:48 PM ISTUpdated : May 06, 2023, 06:40 PM IST
ಒಬ್ಬರಿಗೆ ದೇವರು, ಇನ್ನೊಬ್ಬರಿಗೆ ಗುರು.. ಮತ್ತೊಬ್ಬನಿಗೆ ಮಹಾತ್ಮ.. ಅವರವರ ಭಾವಕ್ಕೆ ಮೋದಿ ಕಂಡು ಧನ್ಯರಾದರು!

ಸಾರಾಂಶ

ಬಹುಶಃ ಜನರಿಗೆ ಮೋದಿ ಅಂದರೇನು ಅಷ್ಟೇಕೆ ಪ್ರೀತಿ ಅನ್ನೋದು ಗೊತ್ತಿಲ್ಲ. ಮೋದಿ ಅಂದರೆ ದ್ವೇಷಿಸುವವರೂ ಕೂಡ ಅವರ ತೇಜಸ್ವಿ ವ್ಯಕ್ತಿತ್ವಕ್ಕೆ ಮರಳಾಗುತ್ತಾರೆ. ಬಹುಶಃ ರಾಜ್ಯ ಸರ್ಕಾರದ ಮೇಲೆ ಆರೋಪಗಳೇ ಇಲ್ಲದೇ ಇದ್ದರೆ, ಮೋದಿ ಕೂಡ ಇಂಥದ್ದೊಂದು ರೋಡ್‌ ಶೋ ಮಾಡುವ ಅಗತ್ಯ ಕಾಣುತ್ತಿರಲಿಲ್ಲ. ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋಗೆ ಜನರ ಅಭಿಪ್ರಾಯಗಳು ಇಲ್ಲಿವೆ. ಇದು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಅವರ ಅಭಿಪ್ರಾಯ ಮಾತ್ರ ಏಷ್ಯಾನೆಟ್‌ ಸುವರ್ಣಸ್ಯೂಸ್‌ದಲ್ಲ.  

ಬೆಂಗಳೂರು (ಮೇ.6): ದೇಶದಲ್ಲಿ ಇಷ್ಟೆಲ್ಲಾ ಜನನಾಯಕರಿದ್ದಾರೆ. ರಾಜಕೀಯ ಮುತ್ಸದ್ದಿಗಳಿದ್ದಾರೆ. ಅವರೆಲ್ಲರ ನಡುವೆಯೂ ಪ್ರಧಾನಿ ನರೇಂದ್ರ ಮೋದಿಗೆ ಈ ಪರಿಯ ಕ್ರೇಜ್‌ ಯಾಕೆ ಅನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಕಾರಣ ಮೋದಿಗೆ ಜನರನ್ನು ಸೆಳೆಯುವ ತಂತ್ರ ಗೊತ್ತಿದೆ. ಹೇಗಿದ್ದರೆ, ಜನ ಮರುಳಾಗುತ್ತಾರೆ ಅನ್ನೋದು ಪಕ್ಕಾ ತಿಳಿದಿದೆ. ಇಲ್ಲದೇ ಹೋದಲ್ಲಿ ಇಷ್ಟು ವರ್ಷಗಳ ಕಾಲ ಒಂದೇ ಒಂದು ಭ್ರಷ್ಟಾಚಾರವಿಲ್ಲದೆ, ಎದುರಾಳಿಗಳ ಆರೋಪ, ಆಕ್ಷೇಪಗಳನ್ನೆಲ್ಲಾ ನುಂಗಿಕೊಂಡು ಇಷ್ಟು ಜನರ ಪ್ರೀತಿ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಶನಿವಾರ ಮೊದಲ ರೋಡ್‌ ಶೋ ನಡೆಸಿದರು. ಭಾನುವಾರ ಇನ್ನೊಂದು ರೋಡ್‌ಶೋ ಇದೆ. ದೇಶದ ಪ್ರೀತಿಯ ಪ್ರಧಾನಿಯನ್ನು ನೇರವಾಗಿ ನೋಡಿದ ಸಂಭ್ರಮದಲ್ಲಿರುವ ಬೆಂಗಳೂರಿಗರು ಈ ಬಗ್ಗೆ ಫೇಸ್‌ಬುಕ್‌ನ ವಾಲ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಾಗಂತ ಮೋದಿ ರೋಡ್‌ ಶೋಗೆ ಬೈದಾಡಿಕೊಂಡವರು ಇಲ್ಲವೆಂದಲ್ಲ. ಅವರ ಸಂಖ್ಯೆಯೂ ಇದೆ. ಜನನಾಯಕನನ್ನು ಒಂದು ಕ್ಷಣ ಕಣ್ತುಂಬಿಕೊಂಡವರು ತಮ್ಮ ಅಭಿಪ್ರಾಯವನ್ನು ಇಲ್ಲಿ ಬರೆದಿದ್ದಾರೆ.

ರುಕ್ಮಿಣಿ ಜಯರಾಮ್‌ ರಾವ್‌ ಅವರ ವಾಲ್‌ನಿಂದ: ಸ್ನೇಹಿತರೇ , ಇಂದು ನನ್ನ ಜೀವಮಾನದ ಬಹುದೊಡ್ಡ ಕನಸು ಆಸೆ ನನಸಾದ ದಿನ. ನನ್ನ ಅಚ್ಚುಮೆಚ್ಚಿನ ಹೆಮ್ಮೆಯ ಪ್ರಧಾನಿಯವರನ್ನು ಕಣ್ಮುಂದೆ ಕಂಡ ಸುದಿನ. ಮನೆಯ ಹತ್ತಿರದ ನವರಂಗ್ ವೃತ್ತದ ಹತ್ತಿರ ಬಂದರೂ ಮೋದೀಜಿ ಯವರನ್ನು ಹೋಗಿ ಕಾಣೋಕೆ ಸಾಧ್ಯವಿಲ್ಲವಲ್ಲ ಎಂದು ಬೇಸರದಿಂದ ಕುಳಿತ ನನಗೆ, ಮಗಳು ಭಾರತಿ, 'ಅಮ್ಮಾ ರೆಡಿಯಾಗಿರು ಬಂದು ಕರೆದೊಯ್ಯುತ್ತೇನೆ..' ಎಂದಾಗ ಹೇಗಿದ್ದೆನೋ ಹಾಗೇ ಅವಳ ಜೊತೆ ಹೋದೆ. ಮಗಳು ಜೊತೆಯಲ್ಲಿ ಕುಳಿತುಕೊಳ್ಳಲು ಒಂದು ಸ್ಟೂಲ್ ಕೂಡಾ ತಂದು ಅಲ್ಲಿ ಹಿರಿಯನಾಗರಿಕರಿಗೇ ಕುಳಿತು ಕಾಯುವ ಸುವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಕೂಡಿಸಿದಳು!  ಅಷ್ಟರಲ್ಲಿ ಕುಮುದವಲ್ಲಿಯೂ ಬಂದು ಜೊತೆ ಸೇರಿದಳು - ನಾವು ಕಾಯುತ್ತಿದ್ದ ಸವಿಘಳಿಗೆ ಬಂದೇಬಿಡ್ತು. ಎದ್ದುನಿಂತು ಬಾವುಟ ಬೀಸುತ್ತಾ  ಮೋದಿ ಮೋದಿ ಮೋದಿ , ಭಾರತ್ ಮಾತಾ ಕಿ ಜೈ ಎಂದು ಕೂಗುತ್ತಾ ನಿಂತಾಗ " ದೇವರೇ ಪ್ರತ್ಯಕ್ಷವಾದಂತೆ ! ಮಿಂಚೊಂದು ಬೆಳಗಿದಂತೆ ! ಮೋದೀಜಿ ಹತ್ತಿರ ಬಂದೇಬಿಟ್ಟರು ನಗುತ್ತಾ ಕೈಬೀಸೇಬಿಟ್ಟರು !!! ಅಬ್ಬಾ ! ಮೈಯೆಲ್ಲಾ ರೋಮಾಂಚನ ! ನಿಜವಾಗಿಯೂ ಅವರು " ದೇವಮಾನವರೇ " !!! ಅವರು ಮಿಂಚಿಮಾಯವಾದ ಮೇಲೇ ತಡೆಯಲಾಗದ ಆನಂದಭಾಷ್ಪ ನನಗೆ !! ಎಲ್ಲರೂ ಸಮಾಧಾನಿಸಿ ನೀರು ಕುಡಿಸಿದಾಗಲೇ ಎಚ್ಚರ !!!  ಈ ಸಂತಸದ ಕ್ಷಣವನ್ನು ನಮ್ಮಂತಹ ಸಾಮಾನ್ಯರಿಗಾಗಿ ಒದಗಿಸಿಕೊಟ್ಟ ಮಹಾನ್ ಶಕ್ತಿಗೆ ಭಗವಂತ ದೇಶ ಕಾಯಲು ಹೆಚ್ಚಿನ ಆಯುರಾರೋಗ್ಯವಿತ್ತು ಸದಾ ಕಾಪಾಡಲಿ ಎಂದು ಮನದುಂಬಿ ಹರಸಿಹಾರೈಸುವೆನು.

ಶೋಭಾ ರಾವ್‌ ಅವರ ವಾಲ್‌ನಿಂದ: ಅಹಿ ಮೋದಿ ರೋಡ್ ಶೋ ಮನೆ ಹತ್ತಿರದಿಂದಲೇ  ಶುರು ಅಂತೆ ಕಣೆ ಅಂದೇ excite ಆಗಿದ್ದೆ. ಹಂಗಾದ್ರೆ ಬೆಂಗಳೂರಿಗೆ ಹೋಗಿ ಮೋದಿ ನೋಡಿಕೊಂಡು ಊರಿಗೆ ಹೋಗೋಣ ಅಂದಳು ಖುಷಿಯಿಂದ. ರಾತ್ರಿಯಿಂದಲೇ ಸಡಗರ. ಬೆಳಿಗ್ಗೆ ಬೇಗ ಎದ್ದು ಜಾಗ ಸಿಗದಿದ್ದರೆ ಅಂತ ಮುಂಚೆಯೇ ಹೋಗಿ ಸರಿಯಾದ ಜಾಗ ಹುಡುಕಿ ನಿಂತು ಒಂದು ಗಂಟೆ ಕಾದು ಬದುಕಿನ ಅಪೂರ್ವ ಕ್ಷಣಗಳಲ್ಲಿ ಒಂದನ್ನು ದಾಖಲಿಸಿ ಕೊಳ್ಳಲಾಯಿತು.  ಇಷ್ಟು ಹತ್ತಿರದಿಂದ ಮತ್ತೊಮ್ಮೆ ಅವರನ್ನು ನೋಡುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರ ತನಕ ಬಂದ ಜನ ಸಮೂಹ, ಹೊರಡುವಾಗ ಎಲ್ಲರ ಮುಖದಲ್ಲಿ ಏನೋ ಹೆಮ್ಮೆ ಇದೆಯಲ್ಲ ಅದು ಮಾತ್ರ ಮರೆಯಲಾಗದ್ದು. ಈ ಮನುಷ್ಯ ಗಳಿಸಿದ ಜನರ ಪ್ರೀತಿಯಿದೆಯಲ್ಲ ಅದು ಮಾತ್ರ ಅನೂಹ್ಯ. .0000 % ಆದರೂ ನಾವು ಗಳಿಸುವ ಹಾಗಿದ್ದರೆ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.  ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿ ಬರುವಾಗ ಇನ್ನೊಂದು ಚೂರು ನಿಧಾನ ಹೋಗಬಹುದಿತ್ತು ಅವರ ಅನ್ನುವ ಮಾತುಗಳು ಕಿವಿಯ ಮೇಲೆ ಬೀಳುತಿತ್ತು. ಇಷ್ಟೊಂದು ರಿಸ್ಕ್ ಬೇಕಿತ್ತಾ ಅನ್ನಿಸಿತ್ತು ಇವತ್ತಿನ ಬೆಳಗ್ಗಿನವರೆಗೂ.. ಇಷ್ಟೊಂದು ಜನರಿಗೆ ಇಷ್ಟು ಹತ್ತಿರದಿಂದ ಮತ್ತೆ ನೋಡುವ ಅವಕಾಶ ಯಾವಾಗಲೋ ಅನ್ನಿಸಿ ಸಮಾಧಾನವಾಯಿತು. ಆದರೂ ಈ ಮನುಷ್ಯ ಒಂದು ರೀತಿಯ ಅದ್ಭುತವೇ.  ಪ್ರೀತಿಯೋ, ದ್ವೇಷವೋ ಇವರನ್ನು ನೆನೆಯದ ಯಾವ ಜೀವವೂ ಇಲ್ಲ. ಅಷ್ಟರಮಟ್ಟಿಗೆ ಎಲ್ಲರ ಮನಸ್ಸಿನಲ್ಲಿ ಇವರು ಜೀವಂತ.

ರಘುಚರಣ್ ತಿಪಟೂರು ಅವರ ವಾಲ್‌ನಿಂದ: ಜಾದೂಗಾರರನ್ನು ನೋಡುವ ಆಸೆಯಿತ್ತು..ಮೋದಿಯನ್ನು ನೋಡಿದೆ.. ಕೊಹಿನೂರು ಮೀರಿದ ವಜ್ರ ಯಾವುದೆಂದು ಕೇಳ್ತಿದ್ದೆ, ಮೋದಿಯನ್ನು ನೋಡಿದೆ..ಖಡ್ಗ ಎತ್ತದ ಚಕ್ರವರ್ತಿ ಯಾರೆಂದು ಹುಡುಕಿದ್ದೆ.. ಮೋದಿಯನ್ನು ನೋಡಿದೆ..ಮಹಾತ್ಮರ ದರ್ಶನ ಸಿಕ್ಕಿರಲಿಲ್ಲ ನನಗೆ, ಮೋದಿಯನ್ನು ನೋಡಿದೆ. ದೇವರು ಹೇಗಿದ್ದಾನೋ ಗೊತ್ತಿಲ್ಲ..ಮೋದಿಯನ್ನು ನೋಡಿದೆ. ಧನ್ಯತೆಯ ಕ್ಷಣವನ್ನು ಅನುಭವಿಸಿರಲಿಲ್ಲ.. ಮೋದಿಯನ್ನು ನೋಡಿದೆ ಎಂದು ಬರೆದುಕೊಂಡಿದ್ದಾರೆ.

ಎಂಪಿಎಂ ನಟರಾಜಯ್ಯ ಅವರ ವಾಲ್‌ನಿಂದ: "ಮೋದಿ ರೋಡ್ ಶೋ   ತಿರುಪತಿ ತಿಮ್ಮಪ್ಪನ ದರ್ಶನದಂತೆ ಕೆಲವೇ ಸೆಕೆಂಡುಗಳ ದರ್ಶನ ತಿಮ್ಮಪ್ಪನಿಗಾದರೂ ಕೆಲವು ಕ್ಷಣ ಹೆಚ್ಚು ಬಗ್ಗಿ ಬಗ್ಗಿ ನೋಡಬಹುದು ಮೋದಿಜಿಯವರದು ಚಲಿಸುವ ಗಾಡಿಯ ಸವಾರಿ ದೃಷ್ಟಿಗೆ ದೊರಕಿದಷ್ಟೆ ಭಾಗ್ಯ" ಆದರೂ ಜನ ಉತ್ಸವದಂತೆ ಬೆಳಗಿನ ಜಾವದಿಂದ ಕಾದಿದ್ದು ನೋಡಿ ಕಣ್ತುಂಬಿಕೊಂಡು  ಪುಳಕಿತರಾಗುತ್ತಿರುವುದು ಇದು ಮೋದಿ ಯುಗವೆನ್ನುವದಕ್ಕೆ ಇನ್ನೇನೋ ಬೇಕು ಸಾಕ್ಷಿ. ನಾನು ಕಾದಿದ್ದು ನೋಡಿದ ಮಹಾನ್ ವ್ಯಕ್ತಿಗಳಲ್ಲಿ ಡಾ॥ರಾಜ್ , ಮತ್ತು ಮೂರಾರ್ಜಿ ದೇಸಾಯಿ. ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ. ಮೋದಿಯವರನ್ನು ಅದು ಎರಡು ರಾಜಕೀಯ  ಸಭೆಗಳಲ್ಲಿ ವಿವಿಐಪಿ ಪಾಸ್ ದೊರಕಿದ್ದರೂ ದೂರದಿಂದ ಕಂಡಿದ್ದು  , ಈಗಾ ಮೂರನೇ ಭಾರಿ ರೋಡ್ ಶೊನಲ್ಲಿ. ನಾವು ಚಿಕ್ಕವರಿದ್ದಾಗ ಗೋಕಾಕ ಚಳುವಳಿಯಲ್ಲಿ ಡಾ।।ರಾಜ್'ರನ್ನು ನೊಡಲು ನಾಲ್ಕು ಐದು ತಾಸು ಕಾದಿದ್ದು ನೆನಪಿದೆ, ಹಾಗೆ ಅಟಲ್ ಬಿಹಾರಿ  ವಾಜಪೇಯಿಯವರು ,ಅಡ್ವಾಣಿಯವರು ಟ್ರಾಕ್ಟರ್ನಲ್ಲಿ  ನಿಂತು ಕೊಂಡು ಬೀದಿ ಬೀದಿಗಳಲ್ಲಿ ಸಂಚರಿಸಿದಾಗ ಆಗಲೂ ಜನ ಸ್ವಇಚ್ಛೆಯಿಂದ ಸೇರುತ್ತಿದ್ದರು. ಈಗಾ ಅದೇ ಹುರುಪಿನಲ್ಲಿ ಮಕ್ಕಳು ಮರಿಯನ್ನದೆ ಮೋದಿಯವರನ್ನು ಕಾಣಲು ಜನ ಮುಗಿಬೀಳುತ್ತಿರುವುದು ಅವರ ಶುದ್ಧ ಸ್ಪಟಿಕದಂತಹ ರಾಜಕೀಯ ಜೀವನವೆ ಸಾಕ್ಷಿ.

ರೂಪಾ ರಾಜೀವ್‌ ಅವರ ವಾಲ್‌ನಿಂದ: ಈ ಮೈಕೇಲ್ ಜಾಕ್ಸನ್ ನ ಕೆಲವು ಅಭಿಮಾನಿಗಳು ಆತನ ಲೈವ್ ಶೋಗಳಲ್ಲಿ ಭಾಗವಹಿಸಿ, ಆತನನ್ನು ನೋಡಿ  ಹಾರ್ಟ್ ಅಟಾಕ್ ಆಗಿ ಸತ್ತಿದ್ದು, ಕೆಲವರು ಹಿಸ್ಟೀರಿಕ್ ಆಗಿ ಕಿರುಚೋದು ಇವೆಲ್ಲಾ ವಿಡಿಯೋಗಳನ್ನು ನೋಡಿ, ಹೀಗೂ ಇರುತ್ತಾ? ಅಂತಾ ಆಶ್ಚರ್ಯ ಪಡ್ತಿದ್ಧೆ.  ಜನರನ್ನು ನೋಡೋಕೋ? (ಜನರನ್ನು ಓದೋದು ಬಹಳ Interesting ಆಗಿರುತ್ತೆ) ಅಥವಾ ಮೋದಿಯವರನ್ನು ನೋಡೋಕೋ? ಅನ್ನೋ ಗೊಂದಲದಲ್ಲಿಯೇ ಮೋದಿಯವರ ರೋಡ್ ಶೋ ನೋಡೋಕೆ ಹೋಗಿದ್ದಾಯಿತು. ಒಂದು ಸೆಕಂಡ್ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಮೋದಿಯವರ ವಾಹನ ಮುಂದೆ ಹೋಗಿರ್ತಾ ಇತ್ತು. ಅಂದರೆ ಅಷ್ಟು ಫಾಸ್ಟಾಗಿ ಹೋಗ್ತಿತ್ತು.  ಆದರೂ ನೆರೆದಿದ್ದ ಜನರು ಕಿರುಚುತ್ತಿದ್ದ ರೀತಿ ನೋಡಿದರೆ, ಮೈಕೇಲ್ ಜಾಕ್ಸನ್ ನ ಅಭಿಮಾನಿಗಳೇ ನೆನಪಾಗ್ತಾ ಇದ್ದರು! ಆ ವಾತಾವರಣದಲ್ಲಿದ್ದ ಎಂತಹವರಿಗಾದರೂ ಒಂದು ರೀತಿಯ adrenaline rush ಆಗಿಯೇ ಆಗುತ್ತೆ.  ನಮ್ಮ ಜನರ ಈಗಿನ ಇನ್ನೊಂದು ಹುಚ್ಚೆಂದರೆ ಎಲ್ಲರ ಬಳಿ  ಮೊಬೈಲ್ ಇರೋದ್ರಿಂದ, ಎಷ್ಟು ಬೇಗ ನಾವು ಇವನ್ನೆಲ್ಲಾ capture ಮಾಡಿ, ಹೊರಪ್ರಪಂಚಕ್ಕೆ ತಿಳಿಸ್ತೀವಿ, ನಮ್ಮಲ್ಲೇ ಮೊದಲು ಅನ್ನೋ ತವಕ ಪ್ರತಿಯೊಬ್ಬರಿಗೂ! ಎಲ್ಲರೂ ಕ್ಯಾಮೆರ ಮ್ಯಾನ್ ಗಳೇ, ಎಲ್ಲರೂ ವರದಿಗಾರರೇ! ಹಾಗಾಗಿ ಮೋದಿಯವರನ್ನು ಕಣ್ಣಲ್ಲಿ ನೋಡಿದ್ದಕ್ಕಿಂತ ಹೆಚ್ಚಾಗಿ ಕ್ಯಾಮೆರಾದಲ್ಲಿ ನೋಡಿದವರೇ ಜಾಸ್ತಿ!

ರಾಜಭವನ ರಸ್ತೆಯಿಂದ ಟ್ರಿನಿಟಿ ವರೆಗೆ ಮೋದಿ ರೋಡ್ ಶೋ, ನಾಳೆ ಬೆಂಗಳೂರಿನ ಈ ರಸ್ತೆಗಳು ಬಂದ್!

ಇಷ್ಟೆಲ್ಲಾ ರೋಮಾಂಚನ ಅನುಭವಿಸಿದ ಮೇಲೂ, ನಂಗನ್ನಿಸಿದ್ದು ಈ ರೋಡ್ ಶೋ ಯಾತಕ್ಕಾಗಿ? ಯಾರಿಗಾಗಿ? ಯಾಕಂದ್ರೆ ನಮ್ಮ ಪ್ರಧಾನಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಈ ರೋಡ್ ಶೋ (ಈ ಮಟ್ಟಿಗಿನ ವಿಜೃಂಭಣೆ) ಬೇಕಿಲ್ಲ. ಎಷ್ಟೊಂದು ಪ್ರೊಟೋಕಾಲ್ ಗಳನ್ನು ಫಾಲೋ ಮಾಡಬೇಕು, ಚುನಾವಣೆ ಹತ್ತಿರದಲ್ಲಿರುವಾಗ, ಪೊಲೀಸರಿಗೆ ಅನೇಕ ಕೆಲಸಗಳಿರುವಾಗ, ಈ ಟೆನ್ಷನ್ ಬೇಕಾ?  ನಮ್ಮ ಕರ್ನಾಟಕ ಬಿಜೆಪಿ ಅಧಿಕಾರದಲ್ಲಿದ್ದಾಗ ಸರಿಯಾಗಿ ಕೆಲಸ ಮಾಡಿದ್ದರೆ, ಇಷ್ಟೆಲ್ಲಾ ಟೆನ್ಷನ್ ಮೋದಿಯವರಿಗೂ ಇರ್ತಿರಲಿಲ್ಲ. ಅಭಿವೃದ್ಧಿಯ ಕಾರ್ಡ್ ತೋರಿಸಿ, ಮತಗಳನ್ನು ಡಿಮ್ಯಾಂಡ್ ಮಾಡಬಹುದಿತ್ತು.  ಈ ರೋಡ್ ಶೋ ನಿಜವಾಗಲೂ ಮತಗಳನ್ನು ಗಳಿಸಲು ಸಹಾಯ ಮಾಡುತ್ತಾ?  ಅನ್ನೋದು ದೊಡ್ಡ ಪ್ರಶ್ನೆ.

ಬರೋಬ್ಬರಿ 3 ಗಂಟೆ, 26 ಕಿ.ಮೀ ನಾನ್ ಸ್ಟಾಪ್ ರೋಡ್ ಶೋ, ಜನರ ಪ್ರತಿಕ್ರಿಯೆಗೆ ಮೋದಿ ಉತ್ಸಾಹ ಡಬಲ್!

ಮೋದಿ ನಮ್ಮ ಬೀದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ನಮ್ಮ ಎಲ್ಲಾ ಅಪಾರ್ಟ್‌ಮೆಂಟ್‌ಗಳನ್ನು ದಿಗ್ಬಂಧನ ಮಾಡಿದ್ದಾರೆ. ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ, ಆಟೋಗಳಿಲ್ಲ, ಬಸ್‌ಗಳಿಲ್ಲ, ರಸ್ತೆಯಲ್ಲಿ ವಾಹನಗಳಿಲ್ಲ.ಇಂಥ ದೇಶದಿಂದ ನಾನು ಬಂದಿದ್ದೇನೆ. ಇಲ್ಲಾಗಿರುವ ಆರ್ಥಿಕ ನಷ್ಟದ ಬಗ್ಗೆ ಯೋಚಿಸಿ... ಎಂದು ಮೋದಿ ರೋಡ್‌ ಶೋಗೆ ಆಕ್ರೋಶ ವ್ಯಕ್ತಪಡಿಸಿ ಕಾರ್ತಿಕ್‌ ಶೇಷನ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ