ಬೆಂಗಳೂರು ಪ್ರೆಸ್‌ ಕ್ಲಬ್ 2020ರ ವಾರ್ಷಿಕ ಪ್ರಶಸ್ತಿ ಪ್ರಕಟ

By Suvarna News  |  First Published Jan 18, 2021, 3:51 PM IST

ಬೆಂಗಳೂರು ಪ್ರೆಸ್‌ ಕ್ಲಬ್ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಪ್ರಶಸ್ತಿ ಪುರಸ್ಕೃತರ ಹೆಸರುಗಳು ಈ ಕೆಳಗಿನಂತಿವೆ.


ಬೆಂಗಳೂರು, (ಜ.18) : ಬೆಂಗಳೂರು ಪ್ರೆಸ್ ಕ್ಲಬ್ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ವಿಪ್ರೋ ಸಂಸ್ಥಾಪಕ‌ ಅಧ್ಯಕ್ಷ ಅಜೀಂ ಪ್ರೇಮ್ ಜೀ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಪ್ರೆಸ್‌ ಕ್ಲಬ್‌ನ ವಿಶೇಷ ಪ್ರಶಸ್ತಿಗೆ ಚಿತ್ರನಟ ಸುದೀಪ್ ಮತ್ತು ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ ಶೆಟ್ಟಿ ಆಯ್ಕೆಯಾಗಿದ್ದಾರೆ.

Tap to resize

Latest Videos

ದಕ್ಷ, ಪ್ರಾಮಾಣಿಕ ಇನ್ಸ್‌ಪೆಕ್ಟರ್ ಕುಮಾರಸ್ವಾಮಿಗೆ ರಾಷ್ಟ್ರಪತಿ ಪದಕ ಪ್ರಧಾನ

ಇನ್ನು ಏಷ್ಯಾನೆಟ್ ಸುವರ್ಣನ್ಯೂಸ್‌.ಕಾಂ ಎಡಿಟರ್ ಎಸ್‌.ಕೆ. ಶಾಮ್ ಸುಂದರ್ ಸೇರಿದಂತೆ ಒಟ್ಟು  25 ಜನರು 2020ನೇ ಸಾಲಿನ ಬೆಂಗಳೂರು ಪ್ರೆಸ್‌ ಕ್ಲಬ್‌ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ಫೆಬ್ರವರಿ 3ನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ.

click me!