ಸಿಎಂ ಉದ್ಧವ್‌ ಹೇಳಿಕೆಗೆ ಸಚಿವ ಸುರೇಶ್‌ಕುಮಾರ್‌ ತಿರುಗೇಟು

By Kannadaprabha NewsFirst Published Jan 18, 2021, 8:45 AM IST
Highlights

ಶಿಕ್ಷಣ ಸಚಿವ ಸುರೇಶ್ ಕುಮಾರ್  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಜ.18):  ಗಡಿ ವಿವಾದ ಕೆದಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತಿರುಗೇಟು ನೀಡಿದ್ದಾರೆ. ಉದ್ದವ್‌ ಠಾಕ್ರೆ ಅವರು ರಾಜಕೀಯ ಮೇಲಾಟಕ್ಕೋಸ್ಕರ ಗಡಿಯ ವಿಚಾರವನ್ನು ಕೆದಕಿದ್ದಾರೆ. ಅವರು ಗಡಿಯ ವಿಚಾರವನ್ನು ಬಿಟ್ಟು ಕೊರೋನಾ ನಿಯಂತ್ರಣಕ್ಕೆ ಗಮನ ಹರಿಸಬೇಕು ಎಂದು ಸುರೇಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸುರೇಶ್‌ ಕುಮಾರ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಕೊರೋನಾ ನಿಯಂತ್ರಣ, ಅಭಿವೃದ್ಧಿ ಚಟುವಟಿಕೆಗಳು ಮತ್ತು ಇನ್ನಿತರ ವಿಷಯಗಳತ್ತ ಗಮನಹರಿಸಬೇಕೇ ಹೊರತು, ಈಗಾಗಲೆ ಇತ್ಯರ್ಥ ಆಗಿರುವ ಗಡಿಯ ವಿಚಾರವನ್ನು ಮತ್ತೆ ಕೆದಕುವುದಕ್ಕೆ ಹೋಗಬಾರದು. 

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲಬಸ್ , ಶುಲ್ಕ ಬಗ್ಗೆ ಸುರೇಶ್ ಕುಮಾರ್ ಮಹತ್ವದ ಹೇಳಿಕೆ ..

ಜನರ ಭಾವನೆಗಳನ್ನು ಕೆದಕುವುದರಿಂದ ಯಾವುದೇ ಪ್ರಯೋಜನ ಇಲ್ಲ. ಇಂದು ಜನರು ಸುಧಾರಣೆ ಮತ್ತು ಅಭಿವೃದ್ಧಿಯನ್ನು ಬಯಸಿದ್ದಾರೆ. ಗಡಿ ವಿಷಯವಾಗಿ ಮಾತನಾಡುವ ಬದಲು ಉದ್ಧವ್‌ ಠಾಕ್ರೆ ಅವರು ತಮ್ಮ ಸರ್ಕಾರ ಮತ್ತು ಮಿತ್ರ ಪಕ್ಷಗಳೊಂದಿಗೆ ಸಂಬಂಧವನ್ನು ಭದ್ರಪಡಿಸಿಕೊಳ್ಳಲು ಸಲಹೆ ನೀಡಿದರೆ ಒಳಿತು. ಗಡಿ ವಿಷಯ ಈಗಾಗಲೇ ಮುಗಿದ ಅಧ್ಯಾಯ. ಆದರೆ, ಅವರು ತಮ್ಮ ರಾಜಕೀಯ ಮೇಲಾಟಕ್ಕೋಸ್ಕರ ಗಡಿ ವಿಷಯವನ್ನು ಕೆದಕಿದ್ದಾರೆ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

click me!