
ಕೊಪ್ಪಳ (ಜೂ.16): ದೇಶದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ, ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ಹಿಂದೂಗಳು ಮೂರು ಮೂರು ಮಕ್ಕಳನ್ನ ಮಾಡಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ತೋಗಾಡಿಯಾ ಹೇಳಿದರು.
ಇಂದು ಕೊಪ್ಪಳದಲ್ಲಿ ನಡೆದ ಹಿಂದೂಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಒಂದೆಡೆ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆ. ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದ ಆತಂಕ ವ್ಯಕ್ತಪಡಿಸಿದರು.
ಯೋಜನಾಬದ್ಧವಾಗಿ ಹಿಂದೂ ಜನಸಂಖ್ಯೆ ಹೆಚ್ಚಿಸಬೇಕು:
ಹಿಂದೂಗಳ ಹ ತ್ಯೆ ನಿರಂತರವಾಗಿ ನಡೆಯುತ್ತಿದೆ. ಇನ್ನೊಂದೆಡೆ ಜನಸಂಖ್ಯೆ ಕಡಿಮೆಯಾಗುತ್ತಿದೆ. ಭಾರತದಲ್ಲಿ ಹಿಂದೂಗಳನ್ನು ಸುರಕ್ಷಿತವಾಗಿರಿಸಲು ಜನಸಂಖ್ಯೆಯನ್ನು ಹೆಚ್ಚಿಸಬೇಕು. ಅಯೋದ್ಯಾ ರಾಮಮಂದಿರವನ್ನು ಯೋಜನಾಬದ್ಧವಾಗಿ ನಿರ್ಮಿಸಿದಂತೆ, ಹಿಂದೂಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಪುನರುಚ್ಚರಿಸಿದರು.
ಹಿಂದೂಗಳು ಹನುಮಾನ್ ಚಾಲೀಸ್ ಪಠಣೆ:
ಅವರು ಪ್ರತಿ ಶನಿವಾರ ಹನುಮಾನ್ ಚಾಲಿಸ್ ಪಠಣೆಯ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಕರೆ ನೀಡಿದ ಅವರು, ಹಿಂದೂಗಳಾಗಿ ಹಿಂದೂಗಳ ಜೊತೆ ಮಾತ್ರ ವ್ಯಾಪಾರ ಮಾಡಿ, ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಿ ಎಂದು ಸಲಹೆ ನೀಡಿದರು.
ಹಿಂದೂ ಧರ್ಮದಲ್ಲಿ ಆರೋಗ್ಯ, ವಿಜ್ಞಾನ, ಮತ್ತು ಧ್ಯೇಯ ನಿರ್ವಹಣೆಯ ಅಂಶಗಳಿರುವುದಾಗಿ ಉಲ್ಲೇಖಿಸಿ ಅವರು, ನಿತ್ಯ ಬೆಳಿಗ್ಗೆ ಹಿಂದೂ ದೇವರ ಸ್ಮರಣೆ ಮಾಡಿ, ಪೋಷಕರ ಚರಣಗಳಿಗೆ ನಮಸ್ಕರಿಸಿ ಎಂದು ತಿಳಿಸಿದರು.
ಹಿಂದೂ ಧರ್ಮವೇ ನಮಗೆ ಅನಂತ ಕೋಟಿ ಬ್ರಹ್ಮಾಂಡದಷ್ಟು ಶಕ್ತಿ ನೀಡಿದೆ. 2000 ವರ್ಷಗಳ ಹಿಂದೆ ಭಾರತದಲ್ಲಿ ಸಂಪೂರ್ಣವಾಗಿ ಹಿಂದೂಗಳೇ ಇದ್ದರು, ಈಗ ಆ ಸಂಖ್ಯೆ ಕುಸಿದಿದೆ. ಸುರಕ್ಷಿತ ಮತ್ತು ಸಮೃದ್ಧ ಹಿಂದೂಗಾಗಿ ಧರ್ಮವನ್ನು ಬೆಳೆಸಬೇಕು, ಎಂದು ಅವರು ಕರೆ ನೀಡಿದರು.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿವಾದವನ್ನು ಹುಟ್ಟುಹಾಕಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ