
ಮೈಸೂರು: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ (Former MP Pratap Simha) ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರ ದಸರಾ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿದ್ದು, ಬೂಕರ್ ಪ್ರಶಸ್ತಿ (Banu Mushtaq) ವಿಜೇತರು ಒಪ್ಪಿಕೊಂಡಿದ್ದಾರೆ. ನಿಮ್ಮ ಸಾಹಿತ್ಯ ಕೊಡುಗೆ ಬಗ್ಗೆ ಬಹಳ ಅಭಿಮಾನದ ಜೊತೆಯಲ್ಲಿ ಗೌರವ ಇದೆ. ದಸರಾ (Mysuru Dasara-2025) ನಾಡ ಹಬ್ಬ ಜಾತ್ಯಾತೀತ ಪ್ರತೀಕ ಅಲ್ಲ, ಅದು ಧಾರ್ಮಿಕ ಆಚರಣೆಯಾಗಿದೆ. ಬಾನು ಮುಷ್ತಾಕ್ ಅವರ ಧರ್ಮ ಆಚರಣೆ ನಿಮ್ಮ ವೈಯಕ್ತಿಕ. ಆ ವಿಷಯದ ಬಗ್ಗೆ ನಾನು ಮಾತನಾಡಲ್ಲ. ದಸರಾ ಧಾರ್ಮಿಕತೆಯ ಪ್ರತೀಕ, ನಮ್ಮ ಹಬ್ಬ , ದುರ್ಗಾ ಪೂಜೆ , ನವರಾತ್ರಿ, ಏನು ಬೇಕಾದರೂ ಕರೆಯಿರಿ. ದಸರಾ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಯದುವಂಶ ಮುಂದುವರೆಸಿಕೊಂಡು ಬಂದಿದೆ. ಇದು ಜಾತ್ಯಾತೀತ ಅಲ್ಲ ನಮ್ಮ ಧಾರ್ಮಿಕ ಆಚರಣೆ ಎಂದು ಪ್ರತಾಪ್ ಸಿಂಹ ಹೇಳಿದರು.
ಬಾನು ಮುಸ್ತಾಕ್ ಅವರಿಗೆ ತಾಯಿ ಚಾಮುಂಡಿ ಬಗ್ಗೆ ನಂಬಿಕೆ ಇದೆಯಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಭಕ್ತೆಯಾಗಿ ಎಲ್ಲಾದರೂ ತೋರಿಸಿದ್ದೀರಾ? ಅದಿ ದೇವತೆ ಚಾಮುಂಡಿ, ದಸರಾ ಭಕ್ತಿ ಭಾವದಿಂದ ಮಾಡುವುದು. ಇದು ಸರ್ಕಾರಿ ಕಾರ್ಯಕ್ರಮವಲ್ಲ. ಇದಕ್ಕೆ ಬಾನು ಮುಷ್ತಾಕ್ ಸೂಕ್ತವಾದ ವ್ಯಕ್ತಿ ಆಗ್ತಾರಾ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಬಾನು ಮುಷ್ತಾಕ್ ರವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿ ಅಪಾರ ಗೌರವ ಕೊಡಿ. ಧಾರ್ಮಿಕ ಆಚರಣೆಗೂ ಬಾನು ಮುಷ್ತಾಕ್ ಅವರಿಗೆ ಏನು ಸಂಬಂಧ? ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಹ ದಸರಾ ಉದ್ಘಾಟನೆ ಸಮಯದಲ್ಲಿ ದೇವಸ್ಥಾನಕ್ಕೆ ಬರಲ್ಲ ಅಂದರು. ಸದಾ ಹಿಂದೂ ಧರ್ಮದ ಬಗ್ಗೆ ಬೈಯುತ್ತಿದ್ದ ಗಿರೀಶ್ ಕಾರ್ನಾಡ್ ಕರೆದಿದ್ದೀರಿ. ಸಿದ್ದರಾಮಯ್ಯರವರೇ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮ ಎಂದು ಹೇಳಿದರು.
ಬಾನು ಮುಷ್ತಾಕ್ ಅವರು ಮುಸ್ಲಿಂ ಧರ್ಮದವರು. ಅಲ್ಲಾಹೂ ಹೊರತು ಯಾರೂ ದೇವರಿಲ್ಲ ಎಂದು ಇಸ್ಲಾಂ ಧರ್ಮದಲ್ಲಿ ಹೇಳುತ್ತದೆ. ಹಾಗಾದರೆ ಚಾಮುಂಡಿ ದೇವರನ್ನು ನಂಬುತ್ತೀರಾ ? ಸಿದ್ದರಾಮಯ್ಯ ಅನಿಷ್ಠ ಮಹಿಷ ದಸರಾ ಉದ್ಘಾಟನೆ ಮಾಡಿದ ಪರಂಪರೆ ನಿಮ್ಮದು. ದಸರಾ ಉದ್ಘಾಟಕರ ಹೆಸರಿನ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಪ್ರತಾಪ್ ಸಿಂಹ ಒತ್ತಾಯಿಸಿದರು.
ಕಳೆದ ಒಂದು ತಿಂಗಳಿನಿಂದ ಮೀಡಿಯಾ, ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ್ದೇ ಚರ್ಚೆ ಆಗಿದೆ.ಆದರೆ ಒಂದೂ ಕಡೆಯೂ ಸಣ್ಣ ಮೂಳೆಯೂ ಸಿಗಲಿಲ್ಲ. ಇದೆಲ್ಲ ವ್ಯವಸ್ಥಿತ ಪಿತೂರಿ ಅಂತ ಸ್ಪಷ್ಟವಾಗ್ತಿದೆ. ಅವರೇ ತಮ್ಮನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಒಪ್ಪಿಕೊಂಡಿದ್ದಾರೆ. ತಮಿಳುನಾಡು, ಕೇರಳದವರೂ ಕಂಡ್ರು, ಹೈದ್ರಾಬಾದ್ ಪ್ರತಿಭಟನೆ, ಅಂತರರಾಷ್ಟ್ರೀಯ ಸುದ್ದಿ ನೋಡಿದಾಗ ದೊಡ್ಡ ಷಡ್ಯಂತ್ರ ಎಂದು ಅನ್ನಿಸಿತು. ಇದಕ್ಕಾಗಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.
ಇದನ್ನೂ ಓದಿ: ದಸರಾ ಉದ್ಘಾಟನೆಗೂ ಮುನ್ನ ಬಾನು ಮುಸ್ತಾಕ್ ಇಸ್ಲಾಂ ಕುರಿತು ಸ್ಪಷ್ಟನೆ ನೀಡಲಿ: ಶಾಸಕ ಯತ್ನಾಳ್
ಸಾಬರಿಗೂ ಮತ್ತು ಧರ್ಮಸ್ಥಳ ಪ್ರಕರಣಕ್ಕೆ ಏನು ಸಂಬಂಧ? ಎಸ್‌ಡಿಪಿಐಗೂ ಧರ್ಮಸ್ಥಳಕ್ಕೂ ಏನು ಸಂಬಂಧ? ಯಾಕಾಗಿ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ? ಒಬ್ಬೊಬ್ಬರೂ ಕ್ರಮೇಣ ಬೆತ್ತಲಾಗುತ್ತಿದ್ದಾರೆ. ಹಾಗಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಪ್ರಕರಣವನ್ನ ಎನ್‌ಐಎಗೆ ವಹಿಸಬೇಕು ಎಂದು ತಮ್ಮ ಮಾತನ್ನು ಪುನರುಚ್ಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ