ಜಮೀರ್, ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿ ಮೇ ಸಿದ್ದರಾಮಯ್ಯ ಹೂಂ ಅಂದಿದ್ರೆ 10 ಗುಂಡು ಹೊಡಿತಿದ್ರು; ಮುತಾಲಿಕ್

Published : Apr 29, 2025, 11:06 PM ISTUpdated : Apr 29, 2025, 11:53 PM IST
ಜಮೀರ್, ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿ ಮೇ ಸಿದ್ದರಾಮಯ್ಯ ಹೂಂ ಅಂದಿದ್ರೆ 10 ಗುಂಡು ಹೊಡಿತಿದ್ರು; ಮುತಾಲಿಕ್

ಸಾರಾಂಶ

ಪ್ರಮೋದ್ ಮುತಾಲಿಕ್, ಹಿಂದೂಗಳಿಗೆ ಅಪಮಾನ, ಅಪ್ರಚಾರ ಆಗುತ್ತಿದೆ, ಹೇಡಿತನ ಬಿಟ್ಟು ಧೈರ್ಯ ತಾಳಬೇಕು ಎಂದರು. ಭಯೋತ್ಪಾದನೆಗೆ ಧರ್ಮ, ದೇಶವಿಲ್ಲ ಎನ್ನುವ ರಾಜಕಾರಣಿಗಳನ್ನು ಟೀಕಿಸಿದರು. ಸಿದ್ದರಾಮಯ್ಯ ಪೆಹಲ್ಗಾಮ್‌ನಲ್ಲಿದ್ದರೆ ಗುಂಡಿಕ್ಕುತ್ತಿದ್ದರು ಎಂದೂ, ಹಿಂದೂಗಳ ರಕ್ಷಣೆಗೆ ಕೊಡಲಿ ಹಿಡಿಯಬೇಕಾಗುತ್ತದೆ ಎಂದೂ ಹೇಳಿದರು. ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಿದ ಪ್ರಭಾಕರ್ ಭಟ್ ಹೇಳಿಕೆಗೆ ಬೆಂಬಲ ಸೂಚಿಸಿದರು.

ಬೆಂಗಳೂರು (ಏ.29): ಪಾಕಿಸ್ತಾನದ ಮೇಲೆ ಯುದ್ಧ ಬೇಡ ಅಂತೀರಲ್ಲ ಸಿದ್ದರಾಮಯ್ಯನವರೇ..? ನೀವು ರೆಸ್ಟ್ ಮಾಡೋಣ ಅಂತಾ ಜಮೀರ್, ಯುಟಿ. ಖಾದರ್ ಜೊತೆಗೆ ಪೆಹಲ್ಗಾಮ್‌ಗೆ ಹೋಗಿದ್ದರೆ ಮೊದಲು ಜಮೀರ್, ನಂತರ ಖಾದರ್ ಹೆಸರು ಕೇಳಿ ಬಿಟ್ಟುಬಿಡುತ್ತಿದ್ದರು. ಆದರೆ, ನಿಮ್ಮನ್ನ ಕೇಳಿದಾಗ 'ಮೇ ಸಿದ್ದರಾಮಯ್ಯ ಹೂಂ' ಅಂದಿದ್ರೆ 10 ಗುಂಡು ಹೊಡೆಯುತ್ತಿದ್ದರು. ನೀವು ಎಷ್ಟೇ ಮಸೀದಿ ಕಟ್ಟಿ, ಎಷ್ಟು ಜನರನ್ನು ಹಜ್ ಯಾತ್ರೆಗೆ ಕಳಿಸಿದ್ದರೂ ಹಿಂದೂ ಅನ್ನೋ ಕಾರಣಕ್ಕೆ ನಿಮ್ಮನ್ನ ಗುಂಡಿಕ್ಕುತ್ತಿದ್ದರು. ಇದನ್ನೆಲ್ಲ ಮಾಡಿದ್ದು ಇಸ್ಲಾಮಿಕ್ ಟೆರರಿಸಮ್. ಭಯೋತ್ಪಾದನೆಗೆ ಧರ್ಮ ಇಲ್ಲ, ದೇಶ ಇಲ್ಲ ಅನ್ನೋ ರಾಜಕಾರಣಿಗಳ ಬಾಯಿಗೆ ಬೂಟು ಇಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಮಂಗಳವಾರ ನಡೆಸಲಾದ ಶೋಭಾಯತ್ರೆ ನಂತರ ರಾಮಮಂದಿರ ಬಳಿಯ ಬಿಬಿಎಂಪಿ ಮೈದಾನದಲ್ಲಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಹಿಂದೂ ಎಂಬ ವ್ಯಕ್ತಿಗೆ ಅಪಮಾನ, ಅಪ್ರಚಾರ ಆಗುತ್ತಲೇ ಇದೆ. ನಮ್ಮ‌ ಭೂಮಿಯಲ್ಲಿ ನಮಗೆ ಅವಮಾನ. ಇದಕ್ಕೆ ಕಾರಣ ನಾವೇ. ನಾವೇ ದುರ್ಬಲರು, ಅಸಂಘಟಿತ ವಾಗಿದ್ದೇವೆ, ಹೇಡಿಗಳಾಗಿದ್ದೇವೆ. ಧೈರ್ಯ, ಸ್ಥೈರ್ಯ ಬರಬೇಕು ಅನ್ನೋದಕ್ಕೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸ್ವಾತಂತ್ರ್ಯದ ಮುಂಚೆ 'ಬ್ರಿಟಿಷರೇ ಭಾರತ ಬಿಟ್ಟು ಹೋಗಿ' ಅನ್ನೋ ಘೋಷಣೆ ಇತ್ತು. ಈಗ ನಾವು ಭಾರತ ಅಪಾಯದಲ್ಲಿದೆ, ಹಿಂದೂ ಅಪಾಯದಲ್ಲಿದ್ದಾನೆ, ಹಿಂದೂ ಧರ್ಮ ಅಪಾಯದಲ್ಲಿದೆ ಅಂತ ಘೋಷಣೆಯೊಂದಿಗೆ ಜೀವಿಸಬೇಕಿದೆ ಎಂದು ಹೇಳಿದರು.

ನಮ್ಮ ಭಾರತ ದೇಶ, ಹಿಂದೂ ಧರ್ಮ ಉಳಿಸಬೇಕಿದೆ. ಎಷ್ಟೋ ಜನರು ಧರ್ಮ ಅವಹೇಳನ ಮಾಡಿದ್ದಾರೆ. ಎಷ್ಟೋ ಭೂಮಿ ಕಳೆದುಕೊಂಡಿದ್ದೇವೆ. ಇದರ ಬಗ್ಗೆ ನಾವು ಅವಲೋಕನ ಮಾಡಿಕೊಳ್ಳಬೇಕಿದೆ. ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವು ನಮ್ಮವು. ಇದೀಗ ಧರ್ಮ ಸಹಿಷ್ಣುತಾ ಭಾವದಿಂದ ಎಲ್ಲವನ್ನ ಕಳೆದುಕೊಂಡಿದ್ದೇವೆ. ಯಾರೋ ಮಿಲ್ಟ್ರಿ ಪೊಲೀಸ್, ರಾಜಕಾರಣಿಗಳು ರಕ್ಷಣೆ ಮಾಡ್ತಾರೆ ಅನ್ನೋದನ್ನ ಬಿಟ್ಟು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶ ಇದ್ದರೆ ನಾನು, ನನ್ನ ಹೆಂಡ್ತಿ-ಮಕ್ಕಳು, ವ್ಯಾಪಾರ ಎಲ್ಲಾವು ಉಳಿಯುತ್ತವೆ. ದೇಶ ಮೊದಲು ಅನ್ನೋ ಸಂಕಲ್ಪ‌‌ ಮಾಡಲೇಬೇಕು. ಇಲ್ಲದಿದ್ದರೆ ಇರಾನ್, ಇರಾಕ್, ಪಾಕಿಸ್ತಾನದ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಎಂದವನ್ನು ಗುಂಪು ಹತ್ಯೆ ಮಾಡಲಾಗಿದೆ: ಡಾ.ಜಿ ಪರಮೇಶ್ವರ್‌

ಇತ್ತೀಚೆಗೆ ಹಿಂದೂಗಳ ನರಮೇಧ ನಡೆಸಿದ ಪೆಹಲ್ಗಾಮ್ ಉಗ್ರರ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳೋಣ. ಇದನ್ನೆಲ್ಲ ಮಾಡಿದ್ದು ಇಸ್ಲಾಮಿಕ್ ಟೆರರಿಸಮ್. ಆದರೆ, ಭಯೋತ್ಪಾದನೆಗೆ ಧರ್ಮ ಇಲ್ಲ, ದೇಶ ಇಲ್ಲ, ಅನ್ನೋ ರಾಜಕಾರಣಿಗಳ ಬಾಯಿಗೆ ಬೂಟು ಇಡಬೇಕು. ಪೆಹಲ್ಗಾಮ್‌ನಲ್ಲಿಯೇ ಸ್ವತಂತ್ರವಾಗಿ ಓಡಾಡಿಕೊಂಡಿದ್ದ, ಮುಸ್ಲಿಂ ವ್ಯಾಪಾರಿಗಳಿಗೆ ಏನು ಮಾಡಿಲ್ಲ. ಅಲ್ಲಿದ್ದ ಪ್ರವಾಸಿಗರ ಪೈಕಿ ಧರ್ಮ ಕೇಳಿ ಹೊಡೆದಿದ್ದಾರೆ. ರಾಜಕಾರಣಿಗಳದ್ದು ಬಾಯಲ್ಲ ಬಚ್ಚಲು. ಮುಖ್ಯಮಂತ್ರಿ ಹಿಡಿದು ಬೇರೆ ಬೇರೆ ನಾಯಕರು ಏನೇನೋ ಮಾತಾನಾಡುತ್ತಿದ್ದಾರೆ. ಅಲ್ಲಿದ್ದ 27 ಅಮಾಯಕರು ಮುಸ್ಲಿಮರನ್ನು ಬೈಲಿಲ್ಲ. ಯಾವುದೇ ರಾಜಕಾರಣಿಗಳನ್ನೂ ಬೈದಿಲ್ಲ. ಪ್ರವಾಸಕ್ಕೆ ಹೋದವರು ಸತ್ತರು. ಅವರ ಪರಿಸ್ಥಿತಿ ತಿಳಿಯಲು ರಾಜಕಾರಣಿಗಳು ಸತ್ತವರ ಮನೆಗೆ ಹೋಗಿ ಬನ್ನಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯಗೆ 10 ಗುಂಡು ಹೊಡಿತಿದ್ರು: 

ಸಿದ್ದರಾಮಯ್ಯ ಸ್ವಲ್ಪ ರೆಸ್ಟ್ ಮಾಡೋಣ ಅಂತ ಜಮೀರ್, ಯುಟಿ ಖಾದರ್ ಜೊತೆ ಪೆಹಲ್ಗಾಮ್‌ಗೆ ಹೋಗಿದ್ದರೆ, ಮೊದಲು ಜಮೀರ್‌ನ ಹೆಸರು ಕೇಳಿ ಬಿಟ್ಟು ಬಿಡುತ್ತಿದ್ದರು. ಬಳಿಕ ಯು.ಟಿ ಖಾದರ್ ಹೆಸರು ಕೇಳಿ ಬಿಟ್ಟುಬಿಡುತ್ತಿದ್ದರು. ಆದರೆ, ನಿಮ್ಮನ್ನ ಕೇಳಿದರೆ 'ಮೇ ಸಿದ್ದರಾಮಯ್ಯ ಹೂ' ಅಂದಿದ್ದರೆ 10 ಗುಂಡು ಹೊಡೆಯುತ್ತಿದ್ದರು. ನೀವು ಎಷ್ಟೇ ಮಸೀದಿ ಕಟ್ಟಿ, ಹಜ್ ಯಾತ್ರೆಗೆ ಕಳಿಸಿದ್ರು ಹಿಂದೂ ಅನ್ನೋ ಕಾರಣಕ್ಕೆ ನಿಮ್ಮನ್ನ ಗುಂಡಿಕ್ಕುತ್ತಿದ್ದರು. ನೀವು ಸೆಕ್ಯುರಿಟಿ ಲ್ಯಾಪ್ಸ್ ಬಗ್ಗೆ ಮಾತನಾಡುತ್ತೀರಿ. ಮುಂದೇನು? ಹೀಗೆ ಮಾತಾನಡುತ್ತಲೇ ಇರುತ್ತೀರಾ? ಮುಸ್ಲಿಮರಿಗಾಗಿ ಮೋದಿಯನ್ನ ಬೈಯುತ್ತಲೇ ಇರುತ್ತೀರಾ? ಕೇಂದ್ರ ಸರ್ಕಾರದ ಜೊತೆ ಇರ್ತಿವಿ ಅನ್ನೋದು ಬಿಟ್ಟು ಬೈಯುತ್ತಲೇ ಇದ್ದಾರೆ. ಪಾಕಿಸ್ತಾನ ನಿರ್ಮಾಣ ಮಾಡಿದ್ದು ಕಾಂಗ್ರೆಸ್. ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕರ್ನಾಟಕ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಮೌಸೀನ್ ಅರೆಸ್ಟ್; 6 ವರ್ಷ ತಲೆಮರೆಸಿಕೊಂಡು 5 ಮಕ್ಕಳ ಅಪ್ಪನಾದ!

ನಮ್ಮ ಪ್ರಧಾನಿಗಳ ಮೇಲೆ ನಂಬಿಕೆ ವಿಶ್ವಾಸ ಇದೆ. ನೀವು ಅದೇ ಹಾಡನ್ನ ಹಾಡುತ್ತ ಕುಳಿತರೇ, ಹಿಂದೂಗಳು ನಮ್ಮತನವನ್ನ ಉಳಿಸಬೇಕಾದರೆ ಪ್ರತಿ ಮನೆಯಿಂದ ಕೊಡಲಿ ಹಿಡಿದು ಬರಬೇಕಾಗುತ್ತದೆ. ನಿಮ್ಮ ಆಯ್ಕೆ ಮಾಡಿದ್ದು, 32 ಲಕ್ಷ ಕಿಟ್ ಹಂಚೋಕೆ ಅಲ್ಲ, ಅಜ್ಮೀರ್  ದರ್ಗಾಕ್ಕೆ ಛಾವಿ ಹೊದಿಸೋಕೆ ಅಲ್ಲ. ಪಾಕಿಸ್ತಾನ ನಾಶ ಮಾಡಿ ನಾವು ನಿಮ್ಮೊಂದಿಗಿದ್ದೇವೆ. ನಾವು ಪೂಜೆ ಮಾಡುವ ಗೋ ಮಾತೆಯನ್ನ ಇವತ್ತೀಗೂ ಭಕ್ಷಿಸುತ್ತಿದ್ದಾರೆ. ನಾವು ಪೆಹಲ್ಗಾಮ್‌ನಲ್ಲಿ ಅವರು ಮಾಡಿದ ಹಾಗೇ, ಇಲ್ಲಿನ ವ್ಯಾಪಾರದಲ್ಲಿ ಹೆಸರು ಕೇಳಿ ವ್ಯವಹಾರ ಮಾಡಬೇಕು ಎಂದು ಹೇಳಿದರು.

ಇನ್ನು ಪ್ರಭಾಕರ್ ಭಟ್ ಹೇಳಿಕೆಗೆ ನಮ್ಮ ಒಪ್ಪಿಗೆ ಇದೆ. ನಮ್ಮ ಬೆಂಬಲವನ್ನು ನಾವು ಸೂಚಿಸುತ್ತಾ ಇದ್ದೇವೆ. ಹುಬ್ಬಳಿಯಲ್ಲಿ ನೇಹ ಹಿರೇಮಠ್ ಕೊಲೆಯಾದ 1 ವರ್ಷದ ವಾರ್ಷಿಕ ಶ್ರಂದಾಜಲಿಯಲ್ಲಿ‌ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಿದ್ದೇವೆ. 1,000 ಹೆಣ್ಣು ಮಕ್ಕಳಿಗೆ  ತ್ರಿಶೂಲವನ್ನು ನೀಡಿದ್ದೇವೆ. ನೇಹ ಹಿರೇಮಠ್ ಗೆ ನ್ಯಾಯ ಕೊಡಿಸುವಲ್ಲಿ ಕೋರ್ಟ್ , ಪೊಲೀಸ್, ರಾಜಕಾರಣಿಗಳು ಎಲ್ಲರು ವಿಫಲವಾಗಿದ್ದಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ, ನಾವೇ ಹೆಣ್ಣು ಮಕ್ಕಳಿಗೆ ತ್ರಿಶೂಲ ನೀಡಿದ್ದೇವೆ. ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ ಅವಶ್ಯಕತೆ ಬಂದರೆ ಬಳಸಿ ಎಂದು ಕಲಡ್ಕ ಪ್ರಭಾಕರ್ ಭಟ್ ಹೇಳಿದ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಪ್ರತಿ‌ ಮಹಿಳೆಯರು ತಮ್ಮ ರಕ್ಷಣೆಗಾಗಿ ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಳ್ಳಿ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಇದನ್ನೂ ಓದಿ: ಪ್ಲೀಸ್​ ನಂಬಿ... ಪಾಕ್​ಗೆ ಸಹಾಯ ಮಾಡಲ್ಲ ಎಂದ ಟರ್ಕಿ! ಭಾರತ ಕೊಟ್ಟ ಶಾಕ್​ಗೆ ಮುಸ್ಲಿಂ ದೇಶ ಶೇಕ್​...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!