ಜಮೀರ್ ಒಬ್ಬ ನಾಲಾಯಕ್, ಮತಾಂಧ; ಪ್ರಮೋದ್ ಮುತಾಲಿಕ್ ವಾಗ್ದಾಳಿ | ಬಿಜೆಪಿ ವಿರುದ್ಧವೂ ಕಿಡಿ

Published : Dec 28, 2024, 04:58 PM IST
ಜಮೀರ್ ಒಬ್ಬ ನಾಲಾಯಕ್, ಮತಾಂಧ; ಪ್ರಮೋದ್ ಮುತಾಲಿಕ್ ವಾಗ್ದಾಳಿ | ಬಿಜೆಪಿ ವಿರುದ್ಧವೂ ಕಿಡಿ

ಸಾರಾಂಶ

ಜಮೀರ್ ಅಹ್ಮದ್ ನಾಲಾಯಕ್, ಮತಾಂಧ ವ್ಯಕ್ತಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ಬೋರ್ಡ್ ಭವಿಷ್ಯದ ಭಾರತಕ್ಕೆ ಅಪಾಯ ತಂದೊಡ್ಡಲಿದೆ ಮತ್ತು ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣಕ್ಕಾಗಿ ಈ ಕಾನೂನು ಮಾಡಿದೆ ಎಂದು ಆರೋಪಿಸಿದ್ದಾರೆ.

ಬಾಗಲಕೋಟೆ (ಡಿ.28): ಜಮೀರ್ ಅಹ್ಮದ್ ಒಬ್ಬ ನಾಲಾಯಕ, ನೂರಕ್ಕೆ ನೂರರಷ್ಟು ಮತಾಂಧ ವ್ಯಕ್ತಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿ ಕಬಳಿಕೆ ವಿಚಾರ ಸಂಬಂಧ ಇಂದು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ವಕ್ಫ್ ಬೋರ್ಡ್ ಇರೋದೇ ಮೋಸ್ಟ್ ಡೇಂಜರಸ್. ಭವಿಷ್ಯದ ಭಾರತಕ್ಕೆ ವಕ್ಫ್ ಬೋರ್ಡ್ ಅಪಾಯ ತಂದೊಡ್ಡಲಿದೆ. ಮುಸ್ಲಿಂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ವಕ್ಫ್ ಬೋರ್ಡ್ ಕಾನೂನು ಮಾಡಿದೆ. ಕಾಂಗ್ರೆಸ್ ತನ್ನ ಮತ ಬ್ಯಾಂಕ್ಗಾಗಿ ಕಾನೂನು ಸಂವಿಧಾನವನ್ನು ಮೀರಿ ವಕ್ಫ್ ಬೋರ್ಡ್‌ಗೆ ಹಕ್ಕುಗಳನ್ನು ಕೊಟ್ಟಿರುವುದು ಆತಂಕಕಾರಿ ವಿಚಾರ. 
ಮುಸ್ಲಿಂ ತುಷ್ಟಿಕರಣದ ಹಿನ್ನೆಲೆ,ಕೈ ಸರ್ಕಾರವೇ ಅದನ್ನ ನಿರ್ಮಾಣ ಮಾಡಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡನಿಂದ ಸ್ನೇಹಮಯಿ ಕೃಷ್ಣಗೆ ಜೀವ ಬೆದರಿಕೆ; ರಕ್ಷಣೆ ಕೋರಿ ಮೋದಿ, ಅಮಿತ್ ಶಾಗೆ ಪತ್ರ!

ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರಲ್ಲ ಜಮೀರ್ ಅಹ್ಮದ್‌ ಅವರೇ, ಅಲ್ಪಸಂಖ್ಯಾತರೆಂದು ಕೇವಲ ಮುಸ್ಲಿಂರಿಗೆ ಮಾತ್ರ ಬಳಸ್ತಾರೆ. ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿಯವರು ಸಹ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರೆಂದುಕೊಂಡಿದ್ದಾರೆ. ಆದ್ರೆ ಕ್ರಿಶ್ಚಿಯನ್,ಪಾರ್ಸಿಗಳು, ಸಿಖ್ಖರು,ಬೌದ್ಧರು ಎಲ್ಲರೂ ಅಲ್ಪಸಂಖ್ಯಾತರೇ ಅಲ್ಲವೇ? ಮುಸ್ಲಿಮರ ಜನಸಂಖ್ಯೆ ನೋಡಿದರೆ ಅವರು ಅಲ್ಪಸಂಖ್ಯಾತರನ್ನ ಸಾಧ್ಯವೇ ಇಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ಅಂತ ಬಂದಾಗ ಕಾಂಗ್ರೆಸ್ ಕೇವಲ ಮುಸ್ಲಿಮರ ಅಭಿವೃದ್ಧಿ ಬಗ್ಗೆ ಮಾತನಾಡುತ್ತೆ. ಉಳಿದ ಅಲ್ಪಸಂಖ್ಯಾತರ ಬಗ್ಗೆ ಈ ರೀತಿ ತುಷ್ಟೀಕರಣ ಮಾಡಿದ್ದು ನೋಡಿದ್ದೀರಾ? ಎಂದು ಪ್ರಶ್ನಿಸಿದರು 

ಮನಮೋಹನ್ ಸಿಂಗ್ ಅವರ ಈ ವಸ್ತುಗಳನ್ನು ಪಾಕಿಸ್ತಾನ ಇಂದಿಗೂ ಉಳಿಸಿಕೊಂಡಿದೆ!

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇರುವ ಆಯೋಗದಲ್ಲಿ ಅಧ್ಯಕ್ಷ ಮುಸ್ಲಿಮರೇ ಇದ್ದಾರೆ. ಇಲ್ಲಿವರಗೆ ಅಲ್ಪಸಂಖ್ಯಾತರ ಅಧ್ಯಕ್ಷರನ್ನಾಗಿ 6 ಪಂಗಡಗಳಲ್ಲಿ ಬೇರೆ ಯಾರನ್ನೂ ಮಾಡಿಲ್ಲ. ಕೇಂದ್ರದಿಂದ ಹಿಡಿದು ರಾಜ್ಯದವರೆಗೂ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಲ್ಲಿವರೆಗೆ ಒಬ್ಬ ಕ್ರಿಶ್ಚಿಯನ್, ಪಾರ್ಸಿ, ಜೈನ ಯಾರನ್ನೂ ಅಲ್ಪಸಂಖ್ಯಾತರ ಅಧ್ಯಕ್ಷರನ್ನಾಗಿ ಮಾಡಿಲ್ಲ. ಈ ರೀತಿಯ ಪರಿಣಾಮದಿಂದ ಹಿಂದೂ ವಿರೋಧಿ, ಮತಾಂಧ ಜಮೀರ್ ಅಹ್ಮದ್ ಎದ್ದು ಕುಳಿತಿದ್ದಾರೆ. ಜಮೀರ್ ಆ ಸ್ಥಾನದಲ್ಲಿರೋದೇ ಇಸ್ಲಾಂ ಗೋಸ್ಕರ, ವಕ್ಫ್ ಅಡಿಯಲ್ಲೇ ಅಪಾಯಕಾರಿ ಕೆಲಸ ಮಾಡ್ತಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೆಲಸ ಮಾಡುವುದಾದರೆ ಉಳಿದ ಬೋರ್ಡ್ಗಳು ಯಾಕಿಲ್ಲ? ಮುಸ್ಲಿಂ ಅಭಿವೃದ್ಧಿಗಾಗಿ ವಕ್ಫ್ ಬೋರ್ಡ್ ಮಾಡಿರುವ ಕಾಂಗ್ರೆಸ್, ಉಳಿದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾಕೆ ಅದೇ ರೀತಿ ಬೋರ್ಡ್ ಮಾಡಿಲ್ಲ? ಕಾಂಗ್ರೆಸ್ ಮಾಡಿದ ಮುರ್ಖತನದಿಂದ ವಕ್ಫ್ ಬೋರ್ಡ್ ನಿರ್ಮಾಣ ಆಗಿ ಭಾರತಕ್ಕೆ ಅಪಾಯಕಾರಿಯಾಗಿ ಬೆಳೆದಿದೆ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್