ದಣಿದು ನಿದ್ದೆಗೆ ಜಾರಿದ ಬೆಂಗಳೂರು ಕ್ಯಾಬ್ ಚಾಲಕ, ಚಾಲಕನಿಗೆ ತಾನೇ ಡ್ರೈವರ್‌ ಆದ ರೋಡೀಸ್‌ ಶೋ ಹೀರೋ!

By Gowthami K  |  First Published Dec 28, 2024, 2:49 PM IST

ಕ್ಯಾಬ್ ಚಾಲಕನಿಗೆ ಚಾಲಕನಾದ IIM ಪದವೀಧರ ಮಿಲಿಂದ್ ಚಂದ್ವಾನಿ. ಬೆಂಗಳೂರು ವಿಮಾನ ನಿಲ್ದಾಣದಿಂದ ತಡರಾತ್ರಿ ಕ್ಯಾಬ್ ಹಿಡಿದು ತನ್ನ ನಿವಾಸಕ್ಕೆ ಹೊರಟಿದ್ದಾಗ ನಿದ್ದೆಗೆ ಜಾರಿದ ಚಾಲಕನಿಗೆ ಬದಲಾಗಿ ಕಾರನ್ನು ಓಡಿಸಿದರು.


IIM ಪದವೀಧರರು ಮತ್ತು ಕ್ಯಾಂಪ್ ಡೈರೀಸ್ ಬೆಂಗಳೂರು ಸಂಸ್ಥಾಪಕ, ಎಂಟಿವಿ ರೋಡೀಸ್‌ ರಿಯಲ್ ಹಿರೋ ಸ್ಪರ್ಧಿಯಾಗಿದ್ದ ಮಿಲಿಂದ್ ಚಂದ್ವಾನಿ ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. 

ಬೆಂಗಳೂರು ವಿಮಾನ ನಿಲ್ದಾಣದಿಂದ ತಡರಾತ್ರಿ ಕ್ಯಾಬ್ ಹಿಡಿದು ತನ್ನ ನಿವಾಸಕ್ಕೆ ಹೊರಟಿದ್ದರು. ಸವಾರಿಯ ಸಮಯದಲ್ಲಿ ಅಸಾಮಾನ್ಯ ಅನುಭವದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

undefined

ಇದರಲ್ಲಿ ಕ್ಯಾಬ್ ಚಾಲಕನು ಪ್ರಯಾಣಿಕರ ಸೀಟಿನಲ್ಲಿ ಮಲಗಿರುವಾಗ ಮಿಲಿಂದ್ ಕಾರನ್ನು ಓಡಿಸುತ್ತಿರುವ ವೀಡಿಯೊ ಸೆರೆಹಿಡಿದಿದ್ದಾರೆ ಮತ್ತು ಈ ಬಗ್ಗೆ ಬರೆದುಕೊಂಡಿದ್ದಾರೆ.

ಅಪ್ಪ-ಅಮ್ಮನನ್ನು ಬಿಟ್ಟು ಮಕ್ಕಳು ಒಬ್ಬಂಟಿಯಾಗಿ ಮಲಗಲು ಸರಿಯಾದ ವಯಸ್ಸು ಎಷ್ಟು?

ನಿನ್ನೆ ರಾತ್ರಿ 3 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ, ನಾನು ಅನಿರೀಕ್ಷಿತವಾಗಿ ಪಾತ್ರವೊಂದನ್ನು ಮಾಡಬೇಕಾಯ್ತು: ನನ್ನ ಕ್ಯಾಬ್ ಡ್ರೈವರ್ ಗೆ ನಾನು ಡ್ರೈವರ್ ಆದೆ. ಅವನು ತುಂಬಾ ನಿದ್ದೆ ಮಾಡುತ್ತಿದ್ದನು, ಅವನು ಚಹಾ ಮತ್ತು ಸಿಗರೇಟನ್ನು ಸಹ ನಿಲ್ಲಿಸಿದನು ಆದರೆ ಅವನು ನಿದ್ದೆಯಿಂದ ಕಣ್ಣುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ, ನಾನು ಚಾಲನೆ ಮಾಡಲು ಮುಂದಾದೆ, ಮತ್ತು ನನಗೆ ಆಶ್ಚರ್ಯವಾಗುವಂತೆ, ಡ್ರೈವರ್‌ "ಬೆಂಗಳೂರು ಟ್ರಾಫಿಕ್" ಗಿಂತ ವೇಗವಾಗಿ ತನ್ನ ಕಾರಿನ ಕೀಗಳನ್ನು ನನಗೆ ಕೊಟ್ಟರು.

 ತಕ್ಷಣವೇ ತಮ್ಮ ಸೀಟನ್ನು ಒರಗಿಸಿ, ಪಾಸ್ ಔಟ್ ಮಾಡಿದರು ಮತ್ತು ನನ್ನನ್ನು ಸಹ-ಪೈಲಟ್ ಆಗಿ ಗೂಗಲ್ ನಕ್ಷೆಗಳೊಂದಿಗೆ ನಗರವನ್ನು ನ್ಯಾವಿಗೇಟ್ ಮಾಡಲು ನನ್ನನ್ನು ಬಿಟ್ಟರು. ನಾವು ತಲುಪುವ ಐದು ನಿಮಿಷಗಳ ಮೊದಲು, ಅವರ ಬಾಸ್ ಕಾಲ್ ಮಾಡಿದರು ಮತ್ತು ಅವರಿಗೆ  ರಾತ್ರಿ ಪಾಳಿಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಇನ್ನು ಮುಂದೆ  ಡೇ ಶಿಫ್ಟ್ ಕೇಳಿ ಎಂದು ಸಲಹೆ ನೀಡಿದೆ.

ನಾನು ಮಿಶ್ರ  ಭಾವನೆಗಳ  ಅನುಭವಿಸಿದೆ: ಅವನು ನನ್ನನ್ನು ನಂಬಿದ್ದಕ್ಕೆ ಸಂತೋಷವಾಯಿತು, ಅವನು ತನ್ನನ್ನು ಎಷ್ಟು ಕಷ್ಟದಲ್ಲಿ ಜೀವಿಸುತ್ತಿದ್ದಾನೆಂದು ದುಃಖವಾಯಿತು ಮತ್ತು ನಾನು ಕೆಲಸಕ್ಕೆ ಅರ್ಹನಾಗಿದ್ದೇನೆ ಎಂದು ಅವರು ಎಷ್ಟು ಬೇಗನೆ ನಿರ್ಧರಿಸಿದರು ಎಂದು ಸ್ವಲ್ಪ ಖುಷಿಪಟ್ಟರು. ಅವರಿಗೆ ₹100 ಟಿಪ್ ಅನ್ನು ನೀಡಿದೆ ಮತ್ತು ಪ್ರತಿಯಾಗಿ 5-ಸ್ಟಾರ್ ರೇಟಿಂಗ್ ಕೇಳಿದರು-ನ್ಯಾಯಯುತ ವ್ಯಾಪಾರ, ಸರಿ?

ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆದ ಭವ್ಯಾ ಗೌಡ! ಮೋಸ ಮಾಡಿ ನಾಯಕಿಯಾದ್ರಾ?

ಕಥೆಯ ನೈತಿಕತೆ?: ಜೀವನವು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ. ದಯೆಯಿಂದಿರಿ, ಪರಾನುಭೂತಿಯಿಂದಿರಿ ಮತ್ತು ಬಹುಶಃ ನಿಮ್ಮ ಚಾಲನಾ ಕೌಶಲ್ಯವನ್ನು ಹೆಚ್ಚಿಸಿ. ಅವು ಯಾವಾಗ ಉಪಯೋಗಕ್ಕೆ ಬರುತ್ತವೆಯೋ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ

ಕಥೆಯ ಪ್ರಮುಖ ನೈತಿಕತೆ?: ನೀವು ಏನನ್ನಾದರೂ ಆಫರ್ ಮಾಡಿದಾಗ, ನಿಮ್ಮ ಕೊಡುಗೆಯನ್ನು ಇತರ ವ್ಯಕ್ತಿ ಸ್ವೀಕರಿಸಲು ಸಿದ್ಧರಾಗಿರಿ.

ಗಮನಿಸಿ, ನಾನು ಯಾವ ಕಂಪೆನಿ ಅಂತ  ಹೆಸರನ್ನು ಹಂಚಿಕೊಳ್ಳಲು ಬಯಸುವುದಿಲ್ಲ, ಏಕೆಂದರೆ ಅದು ಚಾಲಕನ ಮೇಲೆ ಪರಿಣಾಮ ಬೀರುತ್ತದೆ. ಎಂದು ಮಿಲಿಂದ್‌ ಬರೆದುಕೊಂಡಿದ್ದಾರೆ.

ಮಿಲಿಂದ್ ಓರ್ವ ಸೆಲೆಬ್ರಿಟಿ, ಸಮಾಜ ಸೇವಕ ಕ್ಯಾಬ್ ಚಾಲಕರು ನಿದ್ದೆ ಕೆಟ್ಟುಕೊಂಡು ಕಷ್ಟದ ಜೀವನ ನಡೆಸುವುದರ ರಿಯಾಲಿಟಿಯನ್ನು ತೋರಿಸಿದ್ದಾರೆ. ಬೆಂಗಳೂರಿನಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಕ್ಯಾಬ್‌ ಡ್ರೈವರುಗಳು ಆಟೋ ಚಾಲಕರದ್ದು ಇದುವೇ ಕಥೆ. ಒಂದು ಹೊತ್ತಿನ ಊಟಕ್ಕೆ ನಿದ್ದೆಗಳಿಲ್ಲದ ಜೀವನ ಕಳೆಯುತ್ತಾರೆ. ಕೆಲವೊಂದು ಕ್ಯಾಬ್‌ ಕಂಪೆನಿಗಳು ರಾತ್ರಿ ಹಗಲೆನ್ನದೆ ಚಾಲಕರಿಗೆ ವಿರಾಮ ನೀಡದೆ ದುಡಿಸಿಕೊಳ್ಳುತ್ತವೆ. ನೈಟ್‌ ಶಿಪ್ಟ್‌ಗಳನ್ನು ಕೂಡ ಹೆಚ್ಚಾಗಿ ಹಾಕುತ್ತದೆ. ಟಾರ್ಗೆಟ್‌ ಕೂಡ ನೀಡುತ್ತದೆ. ಟಾರ್ಗೆಟ್‌ ನೀಡಿದಾಗ ಅದನ್ನು ರೀಚ್‌ ಆಗಲು ಚಾಲಕರು ನಿದ್ದೆಗೆಟ್ಟು ಕೆಲಸ ಮಾಡುತ್ತಾರೆ. ಇದು ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

click me!