ಧರ್ಮ ದಂಗಲ್: ಹಿಂದೂಗಳ ಅಂಗಡಿಗಳಲ್ಲೇ ಚಿನ್ನ ಖರೀದಿಗಾಗಿ ಅಭಿಯಾನ

By Suvarna NewsFirst Published Apr 24, 2022, 7:07 PM IST
Highlights

* ಅಕ್ಷಯ ತೃತೀಯಕ್ಕೆ ಹಿಂದೂಗಳ ಅಂಗಡಿಯಲ್ಲೇ ಚಿನ್ನ ಖರೀದಿಸಿ...
* ಟ್ವೀಟರ್ ಅಭಿಯಾನಕ್ಕೆ ಶ್ರೀರಾಮ ಸೇನೆ ಸಂಪೂಣ೯ ಬೆಂಬಲ...
* ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ

ಬಾಗಲಕೋಟೆ, (ಏ.24):
ಈ ಬಾರಿಯ ಅಕ್ಷಯ ತೃತೀಯಕ್ಕೆ ಹಿಂದೂಗಳ ಜುವೇಲರಿಯಲ್ಲೆ ಚಿನ್ನ ಖರೀದಿಸಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು.  

ಬಾಗಲಕೋಟೆಯಲ್ಲಿ ಇಂದು(ಭಾನುವಾರ) ಮಾದ್ಯಮಗಳೊಂದಿಗೆ ಮಾತನಾಡಿದ ಅವರು,  ಅಕ್ಷಯ ತೃತೀಯ ಚಿನ್ನ ಖರೀದಿ ಸಂಭಂಧ ಆರಂಭವಾಗಿರೋ ಟ್ವೀಟರ್ ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣ ಬೆಂಬಲ ಇದೆ ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜ್ಯುವೆಲ್ಲರಿ ಕಡೆಗೆ ಖರೀದಿ ಮಾಡಿ ಎಂದು ಕರೆ ನೀಡಿದರು.

 ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಮರ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಖರೀದಿಸಬೇಡಿ. ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ ಪ್ರಾರಂಭಿಸಲಾಗಿದ್ದು, ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂ ರ ಜುವೇಲರ್ಸ್ ಮೇಜರ್  ಇದ್ದು,  ಹಿಂದೂಗಳು ಅಲ್ಲಿ ಬಂಗಾರ ಖರೀದಿ ಮಾಡಬೇಡಿ ಎಂದು ಹೇಳಿದರು.

ಮೈಸೂರು: ಮುಸ್ಲಿಮರಿಂದ ಹಿಂದೂ ಮಹಿಳೆ ಅಂತ್ಯ ಸಂಸ್ಕಾರ: ಧರ್ಮ ದಂಗಲ್‌ ನಡುವೆ ಸೌಹಾರ್ದತೆ ಸಂದೇಶ

ಈಗಾಗಲೇ ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಅಲ್ಲಿ ಖರೀದಿ ಮಾಡಿದ್ರೆ, ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ. ಹೀಗಾಗಿ ಹಿಂದೂಗಳ ಕೊಲೆ ಆಗುತ್ತಿದೆ, ದೌರ್ಜನ್ಯ ಆಗುತ್ತಿದೆ, ಮೇಲಾಗಿ ಲವ್ ಜಿಹಾದ್ ಆಗುತ್ತಿದೆ. ಇವುಗಳ ಮಧ್ಯೆ 12 ಸಾವಿರ ಹುಡುಗಿಯರನ್ನ ಮುಸ್ಲಿಂ ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದರೆ, ಅದೆಲ್ಲ ದುಡ್ಡು ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜ್ಯುವೆಲ್ಲರಿ ಕಡೆಗೆ ಖರೀದಿ ಮಾಡಿ ಎಂದು ಜಾಗೃತಿ ಮೂಡಿಸಿದರು.

2023ರ ಚುನಾವಣೆಗೆ ಶ್ರೀರಾಮಸೇನೆಯಿಂದ ಸ್ಫಧೆ೯ ಇಲ್ಲ
ಇದೇ ಸಂದರ್ಭದಲ್ಲಿ,2023 ರ ಚುನಾವಣೆಗೆ ಶ್ರೀರಾಮಸೇನೆ ಸ್ಫಧೆ೯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ, ರಾಜಕೀಯದಿಂದ ದೂರ ಇದ್ದೇವೆ, ನಾವೀಗ ರಾಜಕೀಯ ಬಾಗಿಲು ಹಾಕಿದ್ದೇವೆ. ರಾಜಕೀಯದಿಂದ ಯಾವುದೇ ಸ್ಫಧೆ೯ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಬಿಜೆಪಿಯವರು ಟಿಕೆಟ್ ನೀಡಿದ್ರೆ ಸ್ಫಧೆ೯ ಮಾಡುವ ವಿಚಾರ ಬಗ್ಗೆ ಮಾತನಾಡಿದ ಅವರು, ಇಲ್ಲ, ಬಿಜೆಪಿಯವರು ಟಿಕೆಟ್ ಕೊಡೋದೆ ಇಲ್ಲ.ನಮ್ಮಂತಹ ಪ್ರಾಮಾಣಿಕರಿಗೆ, ಹೋರಾಟಗಾರರಿಗೆ ಅವರು ಕೊಡೋದಿಲ್ಲ ಎಂದ ಮುತಾಲಿಕ್ ಹೇಳಿದರು.

ಎಂಬಿ ಪಾಟೀಲ್‌ಗೆ ಮುತಾಲಿಕೆ ತಿರುಗೇಟು
ಆರ್ ಎಸ್ಎಸ್ ಬ್ಯಾನ್ ಮಾಡಬೇಕು ಎಂಬ ಎಂ.ಬಿ. ಪಾಟೀಲ್ ಹೇಳಿಕೆಗೆ,ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ ತಿರುಗೇಟು ನೀಡಿದ್ದು,  ಆರ್ ಎಸ್ ಎಸ್, ಶ್ರೀರಾಮಸೇನೆ, ಹಿಂದೂ ಸಂಘಟನೆಗಳು ಮತ್ತು ಎಸ್ ಡಿ ಪಿ ಐ &  ಪಿಎಫ್ಐ ಸಂಘಟನೆಗಳಿಗೆ ಹೋಲಿಕೆ ಮಾಡುವುದು ಮೂರ್ಖತನ ಎಂದು ಕಿಡಿ ಕಾರಿದರು.

ನೀವು ಬಹಳ ದೊಡ್ಡ ಅಪರಾಧವನ್ನು ಮಾಡುತ್ತಿದ್ದೀರಿ. ನಮ್ಮ ಹಿಂದೂ ಸಂಘಟನೆಗಳು ಎಂದೂ ದೇಶವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ಬಾಂಬ್ ಮತ್ತು ಬಂದೂಕು ಗಳನ್ನ ಹಿಡಿದಿಲ್ಲ. ಎಸ್ ಡಿ ಪಿ ಐ & ಪಿಎಫ್ಐ ನವರು ಮಚ್ಚು, ಲಾಂಗು, ಕೊಲೆ.
ಭಯೋತ್ಪಾದನೆ ಸಂಘಟನೆಗಳ ಸಂಪರ್ಕ ಇದೆ ಅಂತ ನಾವು ಹೇಳುತ್ತಿಲ್ಲ, ಬದಲಾಗಿ ಸರಕಾರವೇ ಹೇಳುತ್ತಿದೆ, ಈ ಬಗ್ಗೆ ದಾಖಲೆಗಳು ಹೇಳುತ್ತಿವೆ. ಕೇರಳದ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು, ಈ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಇದೆ ಅಂತ ಹೇಳಿದ್ದಾರೆ ಎಂದು ತಿಳಿಸಿ, ಈ ಬಗ್ಗೆ ಬಿಜೆಪಿ ಪತ್ರ ಬರೆದಿಲ್ಲ, ಬದಲಾಗಿ ಕಮಿನಿಸ್ಟ್ ಮುಖ್ಯಮಂತ್ರಿ ಬರೆದಿದ್ದಾರೆ. ಇದೆಲ್ಲಾ ಅರ್ಥವಾಗದೆ ನೀವು ಎಸ್ ಡಿ ಪಿ ಐ & ಪಿಎಫ್ಐ ಜೊತೆ ಆರೆಸ್ಸೆಸ್, ಶ್ರೀರಾಮಸೇನೆ, ಹಿಂದೂ ಸಂಘಟನೆ ಹೋಲಿಸ್ತೀರಿ ಅಂತಂದ್ರೆ ನಿಮ್ಮಷ್ಟು ಮೂರ್ಖರು ಯಾರು ಇಲ್ಲ ಕಿಡಿಕಾರಿದರು.

ದೇಶದ್ರೋಹಿ, ದೇಶಭಕ್ತಿ ಯಾವುದು ಅಂತ ನಿಮಗೆ ಅರ್ಥ ಆಗ್ತಿಲ್ವಾ?
ಬಹಳ ದೊಡ್ಡದಾಗಿ ಮಾತನಾಡುತ್ತೀರಿ ನಾವು ಸ್ವತಂತ್ರ ಹೋರಾಟಗಾರರು ಎಂದು ಹೇಳುತ್ತೀರಿ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಅರ್ಥವಾಗುತ್ತಿಲ್ಲವಾ,ಆರೆಸ್ಸೆಸ್ಸನ್ನು ನಿಮ್ಮ ಪ್ರಧಾನಮಂತ್ರಿ ನೆಹರು ಅವರೇ ಜನವರಿ 26ರ ಪರೇಡ್ ಗೆ ಕರೆದಿದ್ದರು. ಎಸ್ ಡಿ ಪಿ ಐ ಹಾಗೂ ಎಂಐಎಂ ಕರೆದಿಲ್ಲ. ಇಷ್ಟೂ ನಿಮಗೆ ಅರ್ಥ ಆಗಲ್ಲ ಅಂದ್ರೆ,ಜನ ನಿಮ್ಮನ್ನ ನಂಬೋದಿಲ್ಲ, ಹಿಂದೂ ಸಮಾಜ ಜಾಗೃತವಾಗಿದೆ. ಹಿಂದೂಗಳಿಗೆ ಒಳ್ಳೆಯದು ಕೆಟ್ಟದ್ದು, ಶತ್ರು-ಮಿತ್ರರು ಯಾರು ಅಂತ ಗೊತ್ತಾಗುತ್ತಿದೆ ಎಂದು,ಎಂ.ಬಿ.ಪಾಟೀಲ್ ಮಾತನಾಡಬೇಕಾದರೆ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಮುತಾಲಿಕ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕೋಕಾ ಕೇಸ್ ಹಾಕಲು ಒತ್ತಾಯ...
ಇನ್ನು ಹುಬ್ಬಳ್ಳಿ ‌ಗಲಭೆ ವಿಚಾರವಾಗಿ  ಸಕಾ೯ರದ ತೆಗೆದುಕೊಂಡ  ಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಸಿಎಂ ಬೊಮ್ಮಾಯಿ ಯಾವುದನ್ನು ಹೇಳುತ್ತಿಲ್ಲ. ಬಿಜೆಪಿಯವರು ಬರೀ ಮಾತಲ್ಲಿ ಮಾತ್ರ ಹೇಳುತ್ತಾರೆ. ಸರ್ಕಾರ ಇನ್ನೂವರೆಗೂ ಗಟ್ಟಿಯಾದ ಕ್ರಮಕೈಗೊಳ್ಳುತ್ತಿಲ್ಲ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿಯೂ 300 ಜನರನ್ನು ಬಂಧಿಸಿದರು.ಅವರು ಬೇಲ್ ಮೇಲೆ ಹೊರಬಂದರು, ಇದೇ ಕ್ರಮವನ್ನು ಹುಬ್ಬಳ್ಳಿಯಲ್ಲಿ ತಗೋತಾರೆ. ಇದನ್ನು ಬಿಟ್ಟು ಏನೂ ಮಾಡೋದಿಲ್ಲ, ಉಗ್ರ ಕ್ರಮ, ಕಾನೂನು ಕ್ರಮ ಅಂತ ಮಾತ್ರ ಹೇಳುತ್ತಾರೆ ಎಂದರು,ಬಿಜೆಪಿ ಅವರು ಏನೇನು ಮಾಡುವುದಿಲ್ಲ, ಕೋಕಾ ಕಾಯ್ದೆ ಹಾಕಿ ಅಂದ್ರು ಕೇಳುತ್ತಿಲ್ಲ,ಅದು ಸಾಮೂಹಿಕ, ಸಂಘಟಿತ ಗಲಭೆ ಇದೆ. ಹೀಗಾಗಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ,ತಪ್ಪಿತಸ್ಥರು ಜೈಲು ಒಳಗಡೆ ಕೊಳೆಯುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಮುಂದೆ ಮಾಡುವವರಿಗೂ ಪಾಠವಾಗುತ್ತದೆ. ಇದ್ಯಾಕೆ ಬಿಜೆಪಿಗೆ ಗೊತ್ತಾಗುತ್ತಿಲ್ಲ ಎಂದರಲ್ಲದೆ,  ಕೋಕಾ ಕಾಯ್ದೆ ಇಲ್ಲ, ಗಡಿಪಾರು ಇಲ್ಲ, ಬೋಡೆ೯ಜರ್ ಸಹ ಇಲ್ಲ ಎಂದು ವ್ಯಂಗ್ಯವಾಡಿದರು.

ಯೋಗಿ ಮಾದರಿಯ ಅಧಿಕಾರ ಬೇಕು ಅಂತ ಜನಸಾಮಾನ್ಯರಲ್ಲಿ ಕೇಳಿಬರುತ್ತಿದೆ. ಹಾಗಾದರೆ ಉತ್ತರಪ್ರದೇಶ ಬೇರೆ, ಕರ್ನಾಟಕ ಬೇರೆಯೇ,ದಂಗೆಗಳು ಒಂದೇ, ಕಲ್ಲು ಒಂದೇ, ಹಾಗೆಯೇ  ಕಾನೂನು ಸಹ ಎಲ್ಲರಿಗೂ ಒಂದೇಯಾಗಿರೋ ಹಿನ್ನೆಲೆಯಲ್ಲಿ ನೀವು ಕ್ರಮವಹಿಸಿ.ನಿಮ್ಮಲ್ಲಿ ಯಾವುದೇ ರೀತಿಯ ಗಟ್ಸ್  ಇಲ್ಲ.ಹಿಂದೂಗಳ ಪರವಾಗಿ ನಿಲ್ಲುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾನೂನು ಮಾಡುತ್ತೆ ಅಂತ ಹೇಳಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಇಂದಲ್ಲ ನಾಳೆ ಇದೆ ಹುಬ್ಬಳ್ಳಿ ಗಲಭೆಕೋರರು ಜಾಮೀನು ಮೇಲೆ ಹೊರಗಡೆ ಬರುತ್ತಾರೆ.ಏನು ಸಾಧನೆ ಮಾಡಿದಂತಾಯಿತು.ನಿಜವಾಗಲೂ ಹುಬ್ಬಳ್ಳಿ ಘಟನೆ ಸಂಬಂಧ ಕೋಕಾ ಕಾಯ್ದೆ ಹಾಕಿದರೆ ಮಾತ್ರ ಜನರಿಗೂ ಸ್ಪಷ್ಟವಾಗಿ ತಿಳಿಯುತ್ತೆ ಎಂದರು.

click me!