* ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಪರೀಕ್ಷೆ ನಡೆದ ಕೇಂದ್ರ ಯಾರದು?
* ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು
* ಕಾಂಗ್ರಸ್‌ನವರ ಮೇಲೆ ಆರೋಪ ವಿಚಾರ ಬಿಜೆಪಿಯವರ ಸಂಸ್ಥೆಯಲ್ಲಿ ಕಾಂಗ್ರೆಸ್‌ನವರದು ನಡೆಯುತ್ತಾ?
ಶಿವಮೊಗ್ಗ(ಏ.24): ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ(PSI Recruitment Scam) ಪರೀಕ್ಷೆ ನಡೆದ ಕೇಂದ್ರ ಯಾರದು?. ಈ ಆಕ್ರಮದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಕಾಂಗ್ರಸ್‌ನವರ ಮೇಲೆ ಆರೋಪ ವಿಚಾರ ಬಿಜೆಪಿಯವರ ಸಂಸ್ಥೆಯಲ್ಲಿ ಕಾಂಗ್ರೆಸ್‌ನವರದು ನಡೆಯುತ್ತಾ? ಅಂತ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹರಿಹಾಯ್ದಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ(Karnataka) ಹಿಜಾಬ್(Hijab), ಹಲಾಲ್(Halal) ವಿವಾದವನ್ನ ಹುಟ್ಟು ಹಾಕಿದ್ದು ಯಾರು?, ಸಂಘ ಪರಿವಾರದವರು ಅಲ್ವಾ? ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಿದ್ದು ಬಿಜೆಪಿ(BJP), ಆರ್‌ಎಸ್‌ಎಸ್(RSS), ಭಜರಂಗದಳ ಅಲ್ವಾ?. ಎಸ್‌ಡಿಪಿಐ, ಸಿಎಫ್ಐ, ಆರ್‌ಎಸ್‌ಎಸ್, ಭಜರಂಗದಳ ಯಾರೇ ತಪ್ಪು ಮಾಡಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿ. ಶಿವಮೊಗ್ಗದಲ್ಲಿ ಹರ್ಷನ ಕೊಲೆ(Harsha Murder) ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದಿದ್ದೇನೆ ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯಗೆ ಮುಸ್ಲಿಮ್ ಮತ ಕಳೆದುಕೊಳ್ಳುವ ಭೀತಿ, ಆರ್‌ಎಸ್ಎಸ್ ಬ್ಯಾನ್ ಹೇಳಿಕೆಗೆ ಜೋಶಿ ಗರಂ!
ಹರ್ಷನ ಕುಟುಂಬಕ್ಕೆ25 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದೀರಾ?, ಆದರೆ ನರಗುಂದದಲ್ಲಿ ಸಾವನ್ನಪ್ಪಿದವನಿಗೆ , ಬೆಳ್ತಂಗಡಿ ದಿನೇಶ್, ಶ್ರೀರಾಮ ಸೇನೆಯ ಕಾರ್ಯಕರ್ತನಿಗೆ ಅಷ್ಯ್ಟಾಕೆ ಪರಿಹಾರ ಕೊಡಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣನಾ?. ನನ್ನ ಅಧಿಕಾರಾವಧಿಯಲ್ಲಿ 22 ಕೊಲೆ ಆಯ್ತು ಅಂದರೇ ವಿಪಕ್ಷ ಸ್ಥಾನದಲ್ಲಿ ಇದ್ದ ಬಿಜೆಪಿ ಕಡ್ಲೆಪುರಿ ತಿಂತಾ ಇದ್ದೀರಾ? ಅವಾಗ್ಯಾಕೆ ಕೇಳಿಲ್ಲ ಅಂತ ಬಿಜೆಪಿಗರ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಮುಂಬರುವ ಚುನಾವಣೆಯಲ್ಲಿ(Karnataka Assembly Election) ಬಿಜೆಪಿ ವಿರುದ್ಧ 40% ವಿಚಾರ ಇದೆ. ಅದು ಬ್ರಹ್ಮಾಂಡ ಭ್ರಷ್ಟಾಚಾರ, ಈಶ್ವರಪ್ಪ ಸುಮ್ ಸುಮ್ಮನೆ ಖುಷಿಗೆ ರಾಜೀನಾಮೆ ಕೊಟ್ಟರಾ?. ಬುಲ್ಡೋಜರ್ ಕಾನೂನು ಜಾರಿಗೆ ತಂದರೇ ಅದನ್ನು ಆರ್‌ಎಸ್‌ಎಸ್, ಶ್ರೀರಾಮ ಸೇನೆ, ಭಜರಂಗದಳ ಇವರ ಮೇಲೆ ಮಾಡಲಿ ಅಂತ ಹೇಳಿದ್ದಾರೆ.
150 ಸೀಟು ಗೆಲ್ಲಲೇ ಬೇಕು ಅಂತ ರಾಹುಲ್ ಹೇಳಿದ್ದಾರೆ:
ದಾವಣಗೆರೆ: ರಾಜ್ಯದಲ್ಲಿ ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಚುನಾವಣೆಗೆ 6 ತಿಂಗಳ ಮುಂಚೆಯೇ ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇಬೇಕೆಂದು ರಾಹುಲ್ ಗಾಂಧಿ(Rahul Gandhi) ನಮಗೂ ಹೇಳಿದ್ದಾರೆ ಎಂದು ತಿಳಿಸಿದ್ದರು. ಕಾಂಗ್ರೆಸ್ಸಿನಿಂದ(Congress) ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷದ ಹೈಕಮಾಂಡ್ ಹಾಗೂ ನಮ್ಮ ಶಾಸಕರು ನಿರ್ಧಾರ ಮಾಡುತ್ತಾರೆ. ಚುನಾವಣೆಗೆ 6 ತಿಂಗಳ ಮುಂಚೆ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.