
ಉತ್ತರಕನ್ನಡ (ಅ.13): ಯೂಟ್ಯೂಬರ್ ಮುಕಳೆಪ್ಪ (ಕ್ವಾಜಾ ಶಿರಹಟ್ಟಿ) ಹಿಂದೂ ಯುವತಿ ಗಾಯತ್ರಿ ಜಾಲಿಹಾಳ್ ಅವರನ್ನು ಮದುವೆ ಮಾಡಿಕೊಂಡು ಬುರ್ಖಾ ಹಾಕಿಸುವ ನೀಚ ಕೃತ್ಯಕ್ಕೆ ಕೈ ಹಾಕಿದ್ದಾನೆ. ಸುಳ್ಳು ದಾಖಲೆಗಳನ್ನು ಕೊಟ್ಟ ಮದುವೆ ಮಾಡಿಕೊಂಡಿರುವ ಮುಕಳೆಪ್ಪ-ಗಾಯತ್ರಿ ರಿಜಿಸ್ಟರ್ ಮ್ಯಾರೇಜ್‌ನ ನೋಂದಣಿ ರದ್ದು ಮಾಡುವಂತೆ ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದರು.
ಯುವತಿ ಗಾಯತ್ರಿ ಅವರ ತಾಯಿ ಶಿವಕ್ಕ ದೂರು ನೀಡಿ ಒಂದು ತಿಂಗಳಾದರೂ ಯಾವುದೇ ಕ್ರಮವಾಗಿಲ್ಲ. ಬೋಗಸ್ ದಾಖಲೆಗಳನ್ನು ನೀಡಿ ರಿಜಿಸ್ಟರ್ ಮ್ಯಾರೇಜ್ ಮಾಡಲಾಗಿದೆ. ಈ ನಕಲಿ ದಾಖಲೆಗಳ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರನ್ನು ಭೇಟಿ ಮಾಡಲು ಕಾರವಾರಕ್ಕೆ ಬರಬೇಕಾಯಿತು. ನಮ್ಮ ಮನವಿಗಳು, ದಾಖಲೆಗಳಿಗೆ ಬೆಲೆ ಇಲ್ಲವೇ? ಹಾಗಾದರೆ ನಾವು ಹಿಂದೂ ಯುವತಿಯರ ರಕ್ಷಣೆಗಾಗಿ ಕೈಯಲ್ಲಿ ಕಲ್ಲು ತೆಗೆದುಕೊಂಡೇ ಓಡಾಡಬೇಕಾ? ಬೆಂಕಿ ಹಚ್ಚಬೇಕಾ? ಎಂದು ಮುತಾಲಿಕ್ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮುತಾಲಿಕ್ ನೇರವಾಗಿ ಆರೋಪಿಸಿದರು. 'ಮುಂಡಗೋಡಿನ ಉಪ ನೋಂದಣಾಧಿಕಾರಿ ಸಿಕ್ಕಾಪಟ್ಟೆ ಹಣ ತಿಂದು ಮೂರು ಅಂತಸ್ತಿನ ಮನೆ ನಿರ್ಮಾಣ ಮಾಡಿದ್ದಾರೆ. ಅವರು ಕೂಡಲೇ ಸಸ್ಪೆಂಡ್ ಆಗಬೇಕು. ಮುಂಡಗೋಡ ಸಿಪಿಐ ಉದ್ಧಟತನದಿಂದ ಮಾತನಾಡುತ್ತಿದ್ದು, ಅವರು ಹಣ ತೆಗೆದುಕೊಂಡಿರುವುದು ಸ್ಪಷ್ಟ. ಈ ಸಿಪಿಐಯನ್ನು ಬದಲಾಯಿಸಬೇಕು ಮತ್ತು ಮುಕುಳೆಪ್ಪನ ಮದುವೆ ನೋಂದಣಿಯನ್ನು ತಕ್ಷಣವೇ ರದ್ದು ಮಾಡಬೇಕು" ಎಂದು ಒತ್ತಾಯಿಸಿದರು.
ಬ್ಲ್ಯಾಕ್ ಮ್ಯಾಜಿಕ್ ಮತ್ತು ಪುಕ್ಕಟೆ ಬಿದ್ದಿದ್ದಾರಾ?
ಯೂಟ್ಯೂಬರ್ ಮುಕುಳೆಪ್ಪನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, 'ಮುಕುಳೆಪ್ಪ ಹಿಂದು ಯುವತಿಯರ ಬಗ್ಗೆ ಅಹಂಕಾರದಿಂದ ಮಾತಾಡುತ್ತಾನೆ. ನಮ್ಮ ಹಿಂದೂ ಯುವತಿಯರು ಏನು ಪುಕ್ಕಟೆ ಬಿದ್ದಿದ್ದಾರಾ? ಹಿಂದೂ ಯುವತಿಯರು ಹಣ ಕೊಟ್ಟರೆ ಬರುತ್ತಾರೆ ಎಂದು ಧಿಮಾಕಿನಿಂದ ಮಾತನಾಡುತ್ತಾನೆ. ಅಷ್ಟೇ ಅಲ್ಲ, ಮುಕುಳೆಪ್ಪ ಯುವತಿಯ ಮೇಲೆ ಆಮಿಷ, ಒತ್ತಾಯಗಳ ಜೊತೆಗೆ ಬ್ಲ್ಯಾಕ್ ಮ್ಯಾಜಿಕ್ (ಮಾಟ ಮಂತ್ರ) ಕೂಡ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಮುತಾಲಿಕ್ ಕಿಡಿಕಾರಿದರು. "ಯಾರದ್ದೋ ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋದಾಗ ನೀವು (ಪೊಲೀಸರು) ಮಜಾ ಮಾಡ್ತೀರಿ. ನಿಮ್ಮ ಮನೆಯ ಹೆಂಡತಿ, ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋದಾಗ, ಇಂತಹ ಮುಕುಳೆಪ್ಪಗಳು ನಿಮ್ಮ ಬೆನ್ನು ಹತ್ತಿದಾಗ ನಿಮಗೆ ಶ್ರೀರಾಮ ಸೇನೆ, ಹಿಂದೂ ಸಂಘಟನೆ ನೆನಪಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಮುಕುಳೆಪ್ಪ ಮುಸ್ಲಿಂ ಆಗಿರುವುದರಿಂದ ಆತನನ್ನು ಬಚಾವ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಯುವಕ ಹಿಂದೂ, ಯುವತಿ ಮುಸ್ಲಿಂ ಆಗಿದ್ದರೆ ಇಷ್ಟೊತ್ತಿಗೆ ಏನೇನು ಆಗುತ್ತಿತ್ತು? ನಮ್ಮ ಹಿಂದೂ ಯುವತಿಯರು ಬೀದಿಗೆ ಬಿದ್ದಿದ್ದಾರಾ? ತುತ್ತ ತುದಿಗೆ ಹೋಗಿ ಬೇಕಾದರೂ ನಾವು ಹಿಂದೂ ಯುವತಿಯರನ್ನು ರಕ್ಷಣೆ ಮಾಡುತ್ತೇವೆ ಎಂದು ಮುತಾಲಿಕ್ ಘೋಷಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಈ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ