
ಕಲಬುರಗಿ (ಜೂ.22): ನಮ್ಮ ಬಾಯಲ್ಲಿ ಅವರುಗಳ ಬಗ್ಗೆ ಮಾತು ಬೇಡ ಮಾಡಿದವರ ಪಾಪ ಆಡಿದವರ ಬಾಯಿಗೇಕೆ ಎಂದು ಪ್ರಜ್ವಲ್ ರೇವಣ್ಣ ಸಹೋದರ ಸೂರಜ್ ರೇವಣ್ಣನಿಂದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ವೈದ್ಯಕೀಯ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಬಗ್ಗೆ ಕೇಳಿ ನಾವು ಮಾತಾಡ್ತೇವೆ. ನಾನು ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತಾಡ್ತೇವೆ. ನಾವು ತಪ್ಪು ಮಾಡಿದ್ರೆ ನಮ್ಮ ಬಗ್ಗೆ ಸುದ್ದಿ ಮಾಡಿ ನಾವು ತಿದ್ದಿಕೊಳ್ತೇವೆ. ಅದುಬಿಟ್ಟು ರಾಜಕಾರಣ ಬಗ್ಗೆ ನಾವು ಮಾತಾಡೊಲ್ಲ ಎಂದರು.
ಇನ್ನು ಸಮುದಾಯವರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾವ್ಯಾರೂ ಡಿಸಿಎಂ ಆಕಾಂಕ್ಷಿಗಳಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಅಂತಾ ಇದೆ. ಅವರ ಬಳಿ ಕೇಳಲು ಅವಕಾಶ ಇದೆ. ಡಿಸಿಎಂ ವಿಚಾರ ಹೈಕಮಾಂಡ್‌ಗೆ ಬಿ್ಟ್ಟ ವಿಚಾರ. ಅವರು ಏನು ತೀರ್ಮಾನ ಮಾಡ್ತಾರೋ ಅದನ್ನ ಎಲ್ಲರೂ ಪಾಲಿಸಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ