ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಿದ ಹೈಕೋರ್ಟ್!

By Sathish Kumar KH  |  First Published Jun 22, 2024, 1:04 PM IST

ಬೆಂಗಳೂರಿನ ಟರ್ಪ್‌ ಕ್ಲಬ್‌ನಲ್ಲಿ ಆಯೋಜನೆ ಮಾಡಲಾಗುತ್ತಿದ್ದ ಕುದುರೆ ರೇಸ್‌ಗಳ ಪಂದ್ಯಾವಳಿ ನಡೆಸಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಲಾಗಿದೆ.


ಬೆಂಗಳೂರು (ಜೂ.22): ಬೆಂಗಳೂರಿನ ಟರ್ಪ್‌ ಕ್ಲಬ್‌ನಲ್ಲಿ ಆಯೋಜನೆ ಮಾಡಲಾಗುತ್ತಿದ್ದ ಕುದುರೆ ರೇಸ್‌ಗಳ ಪಂದ್ಯಾವಳಿ ನಡೆಸಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಕುದುರೆ ರೇಸ್ ನಡೆಸುವುದಕ್ಕೆ ತಾತ್ಕಾಲಿಕ ತಡೆಯುಂಟಾಗಿದೆ.

ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಪಂದ್ಯಗಳ ಆಯೋಜನೆಗೆ ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಅನುಮತಿ ನೀಡಲಾಗಿತ್ತು. ಆದರೆ, ಏಕಸದಸ್ಯ ಪೀಠದ ಅನುಮತಿ ಆದೇಶಕ್ಕೆ ವಿಭಾಗೀಯ ಪೀಠದಿಂದ ಮಧ್ಯಂತರ ತಡೆ ನೀಡಲಾಗಿದೆ. ಇನ್ನು ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠದ ಆದೇಶದ ಬೆನ್ನಲ್ಲಿಯೇ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಸುತ್ತಿದ್ದ ರೇಸ್ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇನ್ನು ಅರ್ಜಿ ಸುಧೀರ್ಘ ವಿಚಾರಣೆ ಬಳಿಕ ನಿರ್ಧಾರ ಮುಖ್ಯ ನ್ಯಾಯಮೂರರ್ತಿಗಳಾದ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಲಾಗಿದೆ.

Tap to resize

Latest Videos

ಷರತ್ತು ಬದ್ಧ ಕುದುರೆ ರೇಸ್‌ಗೆ ರಾಜ್ಯ ಹೈಕೋರ್ಟ್‌ ಮಧ್ಯಂತರ ಒಪ್ಪಿಗೆ, 3 ತಿಂಗಳ ಬಳಿಕ ರೇಸ್‌ ಕೋರ್ಸ್ ಓಪನ್

ಕುದುರೆ ಪಂದ್ಯಗಳ ಆಯೋಜನೆ ಅನುಮತಿ ನಿರಾಕರಿಸಿ ರಾಜ್ಯ ಸರ್ಕಾರ 2024ರ ಜೂ.6ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿ), ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠದಿಂದ, 2024ರ ಮಾರ್ಚ್‌ ತಿಂಗಳಲ್ಲಿ ಆನ್‌ ಕೋರ್ಸ್‌ ಮತ್ತು ಆಫ್‌ ಕೋರ್ಸ್‌ ಕುದುರೆ ಪಂದ್ಯ ಮತ್ತು ಬೆಟ್ಟಿಂಗ್‌ ಚಟುವಟಿಕೆಗಳನ್ನು ನಡೆಸಲು ಸರ್ಕಾರ ನೀಡಿದ್ದ ಪರವಾನಗಿಯ ಷರತ್ತಿನಂತೆ ಕುದುರೆ ಪಂದ್ಯ ಆಯೋಜಿಸಬಹುದು ಎಂದು ಮಧ್ಯಂತರ ಆದೇಶ ನೀಡಿದ್ದರು. ಇದರ ಬೆನ್ನಲ್ಲಿಯೇ ಈಗ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಲಾಗಿದೆ.

ದರ್ಶನ್ ಪ್ರಕರಣ ಸೇರಿ ಸಾಲು ಸಾಲು ಘಟನೆ ಉಲ್ಲೇಖಿಸಿ ರಮ್ಯಾ ಟ್ವೀಟ್, ನೊಂದವರ ಪರ ನಿಂತ ನಟಿ!

ಪ್ರಕರಣದ ಹಿನ್ನೆಲೆಯೇನು: ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ 2024ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಆನ್‌ ಕೋರ್ಸ್‌-ಆಫ್‌ ಕೋರ್ಸ್‌ ಕುದುರೆ ಪಂದ್ಯಗಳು ಹಾಗೂ ಬೆಟ್ಟಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಕೋರಿ ಬಿಟಿಸಿ 2024ರ ಮಾ.21ರಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಕುದುರೆ ರೇಸ್ ಪಂದ್ಯಾವಳಿ ಆಯೋಜನೆಗೆ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಟಿಸಿ ಮತ್ತಿತರರು ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಜೂ.6ರವರೆಗೆ ಕಾಲಾವಕಾಶ ನೀಡಿ ಹೈಕೋರ್ಟ್‌ ಮೇ 21 ಹಾಗೂ 23ರಂದು ಆದೇಶಿಸಿತ್ತು. ಅದರಂತೆ, ಬಿಟಿಸಿಯ ಮನವಿ ಪರಿಶೀಲಿಸಿದ್ದ ರಾಜ್ಯ ಸರ್ಕಾರ, ತೆರಿಗೆ ವಂಚನೆ ಹಾಗೂ ಬೆಟ್ಟಿಂಗ್‌ ಅಕ್ರಮ ಸೇರಿದಂತೆ ವಿವಿಧ ಅವ್ಯವಹಾರಗಳನ್ನು ಮುಂದಿಟ್ಟುಕೊಂಡು ಕುದುರೆ ಪಂದ್ಯ ಆಯೋಜಿಸಲು ಅನುಮತಿ ನಿರಾಕರಿಸಿ ಜೂ.6ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ತಿದ್ದುಪಡಿ ಅರ್ಜಿ ಸಲ್ಲಿಸಿದ್ದರು.

click me!