ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ ದೂರು, ಶಿಕ್ಷೆ ರದ್ದತಿಗೆ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಮೊರೆ

Published : Sep 29, 2025, 06:37 PM IST
Prajwal Revanna

ಸಾರಾಂಶ

ಲೈಂಗಿಕ ಹಗರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ ಸಾಕ್ಷ್ಯಗಳಲ್ಲಿ ಹಲವಾರು ವೈರುಧ್ಯಗಳಿವೆ  ವಾದಿಸಿದ್ದಾರೆ.

ಬೆಂಗಳೂರು: ಅತ್ಯಾ8ಚಾರ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ಜನತಾ ದಳ (ಎಸ್) ನಾಯಕ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು, ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳು ರಾಜಕೀಯ ದುರುದ್ದೇಶದಿಂದ ಮಾಡಲ್ಪಟ್ಟಿರುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ. 2023ರಲ್ಲಿ ಫಾರ್ಮ್ ಹೌಸ್‌ನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆ, ಮೂರು ವರ್ಷಗಳ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ದೂರುದಾರೆಯ ವರ್ತನೆ ಹಾಗೂ ಸಾಕ್ಷ್ಯಗಳ ವೈರುಧ್ಯವನ್ನು ಉಲ್ಲೇಖಿಸಿ ತೀರ್ಪನ್ನು ಪ್ರಶ್ನಿಸಲಾಗಿದೆ.

ದೂರು ಕುರಿತ ಪ್ರಶ್ನೆಗಳು

ಪ್ರಜ್ವಲ್ ಅವರ ವಕೀಲರು ತಮ್ಮ ಮೇಲ್ಮನವಿಯಲ್ಲಿ ಹಲವಾರು ಅಂಶಗಳನ್ನು ಹೈಲೈಟ್ ಮಾಡಿದ್ದಾರೆ:

ಗೃಹಪ್ರವೇಶ ಪಾಲ್ಗೊಂಡ ವಿಷಯ: ಅತ್ಯಾಚಾರಕ್ಕೆ ಒಳಗಾಗಿದ್ದರೆ ಮಹಿಳೆ ಗೃಹಪ್ರವೇಶ ಸಮಾರಂಭಕ್ಕೆ ಹೇಗೆ ಬಂದಿರಬಹುದು ಎಂದು ಪ್ರಶ್ನಿಸಲಾಗಿದೆ.

ಸ್ಟೋರ್ ರೂಮ್ ಸಾಕ್ಷ್ಯ: ಮಹಿಳೆ ಸ್ಟೋರ್ ರೂಮಿನಲ್ಲಿ ಬಟ್ಟೆ ಹಾಗೂ ಕೂದಲಿದ್ದ ಬ್ಯಾಗ್ ಇತ್ತು ಎಂದು ಹೇಳಿದರೂ, ಆ ವಸ್ತುಗಳನ್ನು ಗುರುತಿಸಲು ವಿಫಲರಾಗಿದ್ದಾರೆ.

ರೂಮ್ ಲಾಕ್ ಪ್ರಶ್ನೆ: ಲಾಕ್ ಆಗಿದ್ದ ರೂಮಿನಲ್ಲಿ ವೀರ್ಯಾಣು ಸೇರಿದ ಬಟ್ಟೆ ಸಿಕ್ಕಿರುವುದು ಸಂಶಯಾಸ್ಪದ ಎಂದು ವಾದಿಸಲಾಗಿದೆ.

ಕೂದಲು ಪತ್ತೆ ಪ್ರಶ್ನೆ: ಕೂದಲನ್ನು ಸುತ್ತಿ ಬ್ಯಾಗ್‌ನಲ್ಲಿ ಇಟ್ಟಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ ಎಂದು ತಿಳಿಸಲಾಗಿದೆ.

ಸಾಕ್ಷ್ಯ ನಿರ್ವಹಣೆ ವೈರುಧ್ಯ: ಮಹಿಳೆಯ ಸಿಆರ್‌ಪಿಸಿ 164 ಹೇಳಿಕೆಗಳನ್ನು ಕೋರ್ಟ್‌ಗೆ ಸಲ್ಲಿಸಿಲ್ಲ.

ಡಿಜಿಟಲ್ ಸಾಕ್ಷ್ಯ ಕೊರತೆ: ವಿಡಿಯೋ ಇತ್ತು ಎಂಬ ಆರೋಪವಿದ್ದರೂ, ಸಂಬಂಧಿತ ಮೊಬೈಲ್ ವಶಕ್ಕೆ ಪಡೆಯಲಾಗಿಲ್ಲ.

ಎಫ್‌ಎಸ್‌ಎಲ್ ವರದಿ: ವರದಿಯಲ್ಲಿ ವಿರೋಧಾಭಾಸಗಳಿವೆ ಎಂದು ವಾದಿಸಲಾಗಿದೆ.

ಈ ಎಲ್ಲಾ ಅಂಶಗಳನ್ನು ಆಧಾರ ಮಾಡಿಕೊಂಡು, ತಮಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸುವಂತೆ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣವು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಹೈಕೋರ್ಟ್ ತೀರ್ಪು ಏನೆಂಬುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!