
ಬಾಗಲಕೋಟೆ, (ಸೆ.29): ಮನಸಿಗೆ ಬಂದಂತೆ ಮಾತಾಡೋದಲ್ಲ. ಇದೇ ಸ್ವಾಮಿಗಳನ್ನ ಕರೆದುಕೊಂಡು ಟಿಕೆಟ್‌ಗಾಗಿ ಅಡ್ಡಾಡಿದರಲ್ಲ. ಈಗ ಸ್ವಾಮೀಜಿಗಳ ಬಗ್ಗೆ ಇಲ್ಲಸಲ್ಲದ ಮಾತನಾಡ್ತಾರೆ ಎಂದು ವಿಜಯಾನಂದ ಕಾಶಪ್ಪನವರ ವಿರುದ್ಧ ಮಾಜಿ ಸಿಸಿ ಪಾಟೀಲ್ ಕಿಡಿಕಾರಿದರು.
ಬಸವ ಜಯಮೃತ್ಯುಂಜಯ ಶ್ರೀಗಳು ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ, ಎಲ್ಲೆಲ್ಲಿ ಸಿಡಿಗಳಿವೆ ಸಮಯ ಬಂದಾಗ ಎಲ್ಲ ಬಯಲು ಮಾಡುವೆ ಎಂದು ಕಾಶಪ್ಪನವರ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದ ಸಾಮಾಜಿಕ ಸಭೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿಸಿ ಪಾಟೀಲ್, ಬೇಕಿದ್ದಾಗ ಅವರನ್ನ ಕರೆದುಕೊಂಡು ಸುತ್ತಾಡಿ ಈಗ ಅವರ ಬಗ್ಗೆ ಮನಸಿಗೆ ಬಂದಂತೆ ಮಾತಾಡಬಾರದು ಎಂದು ತಿವಿದರು.
ಇದನ್ನೂ ಓದಿ: Bagalkote: ಕೆಲವು ಮಠಾಧೀಶರಿಗೆ ಬಿಜೆಪಿ, ಆರ್‌ಎಸ್‌ಎಸ್ ಫಂಡಿಂಗ್ ಆಗಿದೆ: ವಿಜಯಾನಂದ ಕಾಶೆಪ್ಪನವರ್
ನೋಡ್ರಿ ಯಾವುದೇ ಒಬ್ಬ ಸಮಾಜದ ವ್ಯಕ್ತಿಯ ಗೌರವ ಕಳೆಯುವಂತ ಕೆಲಸವನ್ನು ಯಾರೂ ಮಾಡಬಾರದು. ನಾವು ಯಾರ ಗೌರವ ಕಡಿಮೆ ಮಾಡೋದಕ್ಕೆ ಹೋಗ್ತೀವೋ ಅವರ ಗೌರವವೇ ಕಡಿಮೆಯಾಗುತ್ತೆ. ಒಬ್ಬ ವ್ಯಕ್ತಿಯನ್ನ ಯಾಕೆ ಕಾನ್ಸಂಟ್ರೇಶನ್ ಮಾಡ್ತಿದ್ದೀರಿ? ಸಮಾಜ ಒಬ್ಬ ವ್ಯಕ್ತಿಗಿಂತ ಮೇಲು, ಬಹಳ ದೊಡ್ಡದು. ಸಮಾಜದಿಂದ ನಾನು ಹೊರತು ನನ್ನಿಂದ ಸಮಾಜ ಅಲ್ಲ ಈ ವಿಷಯ ತಿಳಿದಿರಬೇಕು ಎಂದು ಪರೋಕ್ಷವಾಗಿ ವಿಜಯಾನಂದ ಕಾಶಪ್ಪನವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: Panchamasali Reservation: ಹೋರಾಟ: ಸರ್ಕಾರ ಬದಲಾದಂತೆ ಕೆಲವರ ಮೀಸಲಾತಿ ಧ್ವನಿಯೂ ಬದಲಾಗಿದೆ ಎಂದ ಶಾಸಕ ಸಿಸಿ ಪಾಟೀಲ್
ಸ್ವಾಮೀಜಿಯ ಪರಂಪರೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸುತ್ತಿದ್ದಾರೆ. ಈ ವಿವಾದವು ಚುನಾವಣಾ ರಾಜಕೀಯಕ್ಕೆ ಹೊಸ ತಿರುವು ನೀಡುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ