ಪಿಎಫ್‌ಐ ಕೊಪ್ಪಳ ಜಿಲ್ಲಾಧ್ಯಕ್ಷನ ಬ್ಯಾಂಕ್‌ ವ್ಯವಹಾರ ನೋಡಿ ಪೊಲೀಸರೇ ದಂಗು!

By Santosh Naik  |  First Published Sep 29, 2022, 3:05 PM IST

ದೇಶಾದ್ಯಂತ ಪಿಎಫ್‌ಐ ಹಾಗೂ ಅದರ ಅಡಿಯ 8 ವಿವಿಧ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಇದರ ಬೆನ್ನಲ್ಲಿಯೇ ಪಿಎಫ್‌ಐ ಸಂಘಟನೆಗೆ ಸೇರಿದ ವ್ಯಕ್ತಿಗಳ ವಿಚಾರಣೆ ಆರಂಭವಾಗಿದೆ. ಕೊಪ್ಪಳದಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷನ ಬ್ಯಾಂಕ್‌ ಖಾತೆಯ ವ್ಯವಹಾರಗಳನ್ನು ನೋಡ ಸ್ವತಃ ಪೊಲೀಸರೇ ದಂಗಾಗಿದ್ದಾರೆ.
 


ಕೊಪ್ಪಳ (ಸೆ. 29): ಕೇಂದ್ರ ಸರ್ಕಾರ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳು ಭಯೋತ್ಪಾದಕ ಕಾರಣಗಳಿಗಾಗಿ ಐದು ವರ್ಷಗಳ ಕಾಲ ಬ್ಯಾನ್‌ ಮಾಡಿದ ಬೆನ್ನಲ್ಲಿಯೇ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರ ಹದ್ದಿನ ಕಣ್ಣು ತೀವ್ರವಾಗಿದೆ. ಅದೇ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಅಬ್ದುಲ್‌ ಫಯಾಜ್‌ ಮೇಲೆ ದಾಳಿ ನಡೆದಿದ್ದು, ಆತನ ಬ್ಯಾಂಕ್‌ ಖಾತೆಯ ವ್ಯವಹಾರಗಳನ್ನು ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಈತನ ಬ್ಯಾಂಕ್‌ ಖಾತೆಯ ವ್ಯವಹಾರಗಳನ್ನು ನೋಡಿ ಅಕ್ಷರಶಃ ದಂಗಾಗಿ ಹೋಗಿದ್ದಾರೆ. ಒಟ್ಟು ಐದಾರು ಬ್ಯಾಂಕ್ ಗಳಲ್ಲಿ ಅಬ್ದುಲ್ ಫಯಾಜ್ ಖಾತೆಗಳನ್ನು ಹೊಂದಿದ್ದಾರೆ.  ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ ಹಾಗೂ ಇಂಡಿಯನ್ ಬ್ಯಾಂಕ್ ಗಳಲ್ಲಿ ಫಯಾಜ್ ಖಾತೆಯನ್ನು ಹೊಂದಿದ್ದಾರೆ. ಇದೇ ವೇಳೆ ಈತನ ಖಾತೆಯಿಂದ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿರೋದು ಬಹಿರಂಗವಾಗಿದೆ. ಹಣ ವರ್ಗಾವಣೆ ಕಂಡು ಪೊಲೀಸ್ ಇಲಾಖೆ ಕೂಡ ಅಚ್ಚರಿ ಪಟ್ಟಿದೆ. ಅಬ್ದುಲ್‌ ಫಯಾಜ್‌ ಬಜಾಜ್‌ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಜಾಜ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೂ, ಇಷ್ಟೊಂದು ಹಣ  ವರ್ಗಾವಣೆ ಆಗಿರೋದು ಹೇಗೆ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ

ಅನಾಮಧೇಯ ಕಡೆಗಳಿಂದ ಹಣ ವರ್ಗಾವಣೆ ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಕೆಜಿ ಹಳ್ಳಿ ಪೊಲೀಸರು ಅಬ್ದುಲ್ ಫಯಾಜ್‌ನನ್ನು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ 50ಕ್ಕೂ ಹೆಚ್ಚು ಬ್ಯಾಂಕ್ ಗಳಿಗೆ ನೋಟೀಸ್ ನೀಡಿದ್ದ ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ಈ ಕುರಿತಾಗಿ ಮಾಹಿತಿ ನೀಡುವಂತೆ ಹೇಳಿದ್ದಾರೆ. ಪೊಲೀಸ್ ಮೂಲಗಳು ಕೂಡ ಇದನ್ನು ಖಚಿತಪಡಿಸಿವೆ.
 

Tap to resize

Latest Videos

click me!