ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನಸ-3 ಯೋಜನೆ ಹಾಗೂ ಇಸ್ರೋ ಮಾದಿ ಅಧ್ಯಕ್ಷ ಕೆ.ಶಿವನ್ ಕುರಿತಾಗಿ ಲೇವಡಿ ಮಾಡಿ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ.
ಬೆಂಗಳೂರು (ಆ.22): ಚಂದ್ರಯಾನ-3 ಯೋಜನೆಯ ಬಗ್ಗೆ ಲೇವಡಿ ಮಾಡಿಸ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮಾಡಿದ್ದಕ್ಕಾಗಿ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈತನ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಚಂದ್ರಯಾನದ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಕಾಶ್ ರಾಜ್ ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದರು. ಈ ಕುರಿತಾಗಿ ಬನಹಟ್ಟಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಶ್ರೀರಾಮಸೇನೆ ಮುಖಂಡ ಶಿವಾನಂದ ಗಾಯಕವಾಡ್ ಅವರಿಂದ ದೂರು ದಾಖಲಾಗಿದೆ.ಇಸ್ರೋ ವಿಜ್ಞಾನಿಗಳ ಬಗ್ಗೆ ವ್ಯಂಗ್ಯಭರಿತ ಟ್ಚೀಟ್ ಮಾಡಿರುವ ಪ್ರಕಾಶ್ ರಾಜ್ ಅವರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. 'ಪ್ರಕಾಶ್ ರಾಜ್ ಯಾನೆ ಪ್ರಕಾಶ್ ರೈ ಎನ್ನುವ ಅರೆಹುಚ್ಚ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವರ ರೀತಿ ತನ್ನ ಅಧಿಕೃತ ಟ್ವಿಟರ್ ಐಡಿಯಲ್ಲಿ ನಮ್ಮ ವಿಜ್ಞಾನಿಗಳಿಗೆ ವ್ಯಂಗ್ಯ ಎನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದು, ತಕ್ಷಣ ಆತನನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ' ಎಂದು ದೂರಿನಲ್ಲಿ ಬರೆಯಲಾಗಿದೆ.
Chandrayaan-3 Updates: 70 ಕಿ.ಮೀ ದೂರದಿಂದ ಚಂದ್ರ ಕಾಣೋದು ಹೀಗೆ.. ಹೊಸ ಚಿತ್ರ ಕಳಿಸಿದ ವಿಕ್ರಮ್!
2023ರ ಜುಲೈ 14ರಂದು ನಮ್ಮ ದೇಶವೇ ಹೆಮ್ಮೆ ಪಡುವಂತ ಕೆಲಸವನ್ನ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಉಪಗ್ರಹ ಉಡಾವಣೆ ಮಾಡುವುದರ ಮೂಲಕ ಭಾರತದ ಶಕ್ತಿಯನ್ನು ಇಮ್ಮಡಿಗೊಳಿಸಿದ್ದರು. ಇನ್ನೇನು ಇದು ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿದು ಜಗತ್ತು ಭಾರತದ ವಿಜ್ಞಾನಿಗಳನ್ನು ಹೊಗಳುವ ಸಂದರ್ಭದಲ್ಲಿಅವರಿಗೆ ಅಪಮಾನವಾಗುವ ರೀತಿ, ಅವರಿಗೆ ಅಸಹ್ಯ ಅನಿಸುವ ರೀತಿಯಲ್ಲಿ ತನ್ನ ಟ್ವಿಟರ್ ಐಡಿಯಲ್ಲಿ ಟ್ವೀಟ್ ಮಾಡುವುದರ ಮೂಲಕ ವಿಕೃತಿ ಮೆರೆದಿದ್ದು, ತಕ್ಷಣವೇ ಈತನನ್ನು ಬಂಧಿಸಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಬೇಕು ಎನ್ನುವುದು ತಮ್ಮಲ್ಲಿ ವಿನಂತಿ' ಎಂದು ಬನಹಟ್ಟಿಯ ಸ್ಟೇಷನ್ ಆಫೀಸರ್‌ಗೆ ನೀಡಿದ ದೂರಿನಲ್ಲಿ ಬರೆಯಲಾಗಿದೆ.
Chandrayaan Mission: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!