
ಬೆಂಗಳೂರು(ಜ.05): ಊರಿನಲ್ಲಿ ಇಲ್ಲದ್ದಿದ್ದರೂ ತಮ್ಮ ವಾಹನಗಳಿಗೆ ದಂಡ ವಿಧಿಸಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸರ ವಿರುದ್ಧ ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.
ಬಾಣಸವಾಡಿ ಹತ್ತಿರದ ಆಯಿಲ್ ಮಿಲ್ ರಸ್ತೆಯಲ್ಲಿ ಆಸ್ಪತ್ರೆ ಬಳಿ ಖಾಸಗಿ ಕಂಪನಿ ಉದ್ಯೋಗಿ ಆಶೀಶ್ ಶ್ರೀವಾಸ್ತವ್ ಎಂಬುವರ ಬೈಕ್ ನಿಲುಗಡೆ ಮಾಡಿದ ತಪ್ಪಿಗೆ ದಂಡ ವಿಧಿಸಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಸಾಲ ಆಯ್ತು, ಈಗ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ಟೋಪಿ
ಆದರೆ ಆ ದಿನ ತಾವು ತಮಿಳುನಾಡಿನ ಊಟಿಗೆ ಪ್ರವಾಸ ಹೋಗಿದ್ದಾಗಿ ಫೋಟೋ ಸಮೇತ ಫೇಸ್‌ಬುಕ್‌ನಲ್ಲಿ ಸಂಚಾರ ಪೊಲೀಸರಿಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೀವ್ ಜ್ಯೋತ್ ಸಿಂಗ್, ತಮ್ಮ ದಂಡ ಪ್ರಯಾಸವನ್ನು ಬಿಚ್ಚಿಟ್ಟು ಪೊಲೀಸರಿಗೆ ಜಾಡಿಸಿದ್ದಾರೆ.
2019ರ ಜೂ.1ರಂದು ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಬೈಕ್‌ನಲ್ಲಿ ಊಟಿಗೆ ಪ್ರವಾಸ ಹೋಗಿದ್ದೆ. ಆದರೆ ನಾನು ಸಂಚಾರ ನಿಯಮ ಉಲ್ಲಂಘಿಸಿದ್ದೇನೆ ಎಂದು ಹೇಳಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ನಾನು ಪ್ರವಾಸ ಹೋಗಿರುವ ಬಗ್ಗೆ ಫೋಟೋಗಳು ಸಹ ಇವೆ ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿ ಆಶೀಶ್ ಶ್ರೀವಾಸ್ತವ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಬಾಣಸವಾಡಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಸೋಮವಾರ ಒಂದೇ ದಿನ ರಾಜ್ಯದ 23 ಶಿಕ್ಷಕರಿಗೆ ಕೊರೋನಾ: 5 ವಿದ್ಯಾರ್ಥಿಗಳಿಗೂ ಸೋಂಕು ದೃಢ!
2017ರಲ್ಲಿ ನಾನು ವಿದೇಶದಲ್ಲಿದ್ದೆ. ನನ್ನ ಬೈಕ್ ಉತ್ತರಾಕಾಂಡ್‌ನಲ್ಲಿತ್ತು. ಆದರೆ ಪೊಲೀಸರು ನನ್ನ ಬೈಕ್‌ಗೆ ದಂಡ ವಿಧಿಸಿದ್ದಾರೆ. ನನಗೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡುವಂತೆ ಪೊಲೀಸರಿಗೆ ದೀವ್ ಜ್ಯೋತ್ ಸಿಂಗ್ ಕಾಲೆಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ