ದಿಲ್ಲಿ ಚಲೋಗೆ ಹೊರಟ ಕರ್ನಾಟಕ ರೈತರ ಬಂಧಿಸಿದ ಭೋಪಾಲ್ ಪೊಲೀಸರು; ಕುರುಬೂರು ಶಾಂತಕುಮಾರ್ ಪತ್ನಿ ತಲೆಗೆ ಗಾಯ!

By Sathish Kumar KH  |  First Published Feb 12, 2024, 1:08 PM IST

ಕರ್ನಾಟಕದಿಂದ ದಿಲ್ಲಿ ಚಲೋ ಪ್ರತಿಭಟನೆಗೆ ಕರ್ನಾಟಕದಿಂದ ಹೊರಟ ರೈತರನ್ನು ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ಪೊಲೀಸರು ಎಳೆದಾಡಿ ಬಂಧಿಸಿದ್ದಾರೆ. ಈ ವೇಳೆ ಪದ್ಮಾ ಶಾಂತಕುಮಾರ್ ಅವರ ತಲೆಗೆ ಪೆಟ್ಟು ಬಿದ್ದಿದೆ.


ನವದೆಹಲಿ  (ಫೆ.12): ಕೇಂದ್ರ ಸರ್ಕಾರದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಡೆಲ್ಲಿ ಚಲೋ ಪ್ರತಿಭಟನೆಗೆ ಹೊರಟಿದ್ದ ಕರ್ನಾಟಕದ ರೈತರ ಗುಂಪಿನ ಮೇಲೆ ಮಧ್ಯಪ್ರದೇಶ ದಾಳಿ ಮಾಡಿ ಅವರನ್ನು ಬಂಧಿಸಿದ್ದಾರೆ. ಪೊಲೀಸರ ರಾಕ್ಷಸಿ ಕೃತ್ಯದಿಂದ ರೈತ ಮಹಿಳೆಯರಿಗೆ ಗಾಯಗಳಾಗಿದ್ದು, ಇದರಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮಾ ಶಾಂತಕುಮಾರ್ ಅವರ ಪತ್ನಿ ತಲೆಗೆ ಗಾಯವಾಗಿದೆ. ಈ ಕುರಿತು ರೈತರು ಪತ್ರಿಕಾ ಪ್ರಕಟಣೆಯ ಮೂಲಕ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೇಶಾದ್ಯಂತ  ಬೀದಿಗಳಿಯಲು ಸಜ್ಜಾಗಿರುವುದನ್ನು ಗಮನಿಸಿ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲವನ್ನ ಬಳಸಿ ಬಳಸಿಕೊಳ್ಳುತಿದೆ ಇದು ಖಂಡನೀಯ. ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದಾಗ, ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ 2 ಗಂಟೆ ವೇಳೆ ರೈಲಿನೊಳಗೆ ನುಗ್ಗಿ ಪೊಲೀಸರು  ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿದ್ದಾರೆ.  ರೈಲಿನ ಒಳಗೆ ರೈತರನ್ನು ಎಳೆದಾಡಿದ್ದು, ಈ ವೇಳೆ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರೈತ ಮಹಿಳೆ ಪದ್ಮಾ ಶಾಂತಕುಮಾರ್ ಅವರ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿಯೂ ಸರಿಯಾದ ಚಿಕಿತ್ಸೆ ಕೊಡಿಸದೆ ಡಿಸ್ಚಾರ್ಜ್ ಮಾಡಿಸಿ, ಬಂಧಿತ ರೈತರ ಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.

Tap to resize

Latest Videos

ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಕೈ ಹಿಡಿದ ನಾರಿಯರು; 8 ತಿಂಗಳಲ್ಲಿ 151 ಕೋಟಿ ಮಹಿಳೆಯರ ಸಂಚಾರ

ಕರ್ನಾಟಕದಿಂದ ಮಹಿಳೆಯರು ಸೇರಿ ನೂರಾರು ರೈತರು ರೈಲಿನ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರದೇಶದ  ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ನೂರಾರು ಪೊಲೀಸರು ನಿದ್ರೆಯಲ್ಲಿದ್ದ ರೈತರನ್ನು  ಬಂಧಿಸಲು ಮುಂದಾದರು. ನಾವು ವಿರೋಧ ವ್ಯಕ್ತಪಡಿಸಿದಾಗ ಪೊಲೀಸರು ಎಲ್ಲಾ ಭೋಗಿಗಳಿಗೂ ಬಂದು ಮಹಿಳೆಯರನ್ನು ದನಗಳಂತೆ ಎಳೆದುಕೊಂಡು ಬಂದಿಸಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧವನ್ನು ಖಂಡಿಸಿ ಕರ್ನಾಟಕದ ರೈತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ರೈತ ವಿರೋಧ ನೀತಿಯನ್ನು ಖಂಡಿಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರ ಕಳೆದ  ವರ್ಷ ಹಿಂದೆ ದೆಹಲಿಯಲ್ಲಿ ನಡೆದ ಒಂದು ವರ್ಷಗಳ ಕಾಲ ಚಳುವಳಿಯನ್ನು ಮಾಡಿದಾಗ ಪ್ರಧಾನಿ ಮೋದಿಯವರು  ಮಧ್ಯಪ್ರವೇಶ ಮಾಡಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಇಲ್ಲಿಯವರೆಗೂ ಕೊಟ್ಟ ಬರವಸೆಯನ್ನು ಈಡೇರಿಸಿಲ್ಲ. ಸ್ವಾಮಿನಾಥನ್ ವರದಿ ಜಾರಿ ಹಾಗೂ ದೇಶದ ರೈತರ ಸಂಪೂರ್ಣ ಸಾಲಮನ್ನಾ ಇನ್ನು ಹಲವು ಬೇಡಿಕೆಗಳನ್ನು ಇಟ್ಟು ಇದೇ ಫೆಬ್ರವರಿ 13ನೇ ತಾರೀಕು ರೈತರ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯಪಾಲ ಭಾಷಣದಲ್ಲಿ ಕೇಂದ್ರದ ವಿರುದ್ಧ ಟಾಕ್‌ಫೈಟ್‌, ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಉಲ್ಲೇಖ

ಈ ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯಗಳ ರೈತರು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇತ್ತು. ಇದನ್ನು ಹರಿತ ಕೇಂದ್ರ ಸರ್ಕಾರ ದಿಲ್ಲಿ ಚಲೋ ಕಾರ್ಯಕ್ರಮವನ್ನು ಹತ್ತಿಕಲು ಹಲವಾರು ಕಡೆ ಕರ್ನಾಟಕದ ನಮ್ಮ ರೈತರನ್ನು ಸೇರಿ ಬಂಧಿಸಿರುವುದು ರೈತ ವಿರೋಧಿ ನೀತಿ ಆಗಿರುತ್ತದೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ದೇಶದ  ಬಂಡವಾಳಶಾಹಿಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಅದೇ ರೀತಿ ಸಂಕಷ್ಟದಲ್ಲಿರುವ ರೈತರ  ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ ವಹಿಸಿ ಇಬ್ಬಗೆ ನೀತಿ ಅನುಸರಿಸುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಯ ಜಿ ರೈತ ಮುಖಂಡರ ಬಂಧನ ಕೊಳ್ಳಗಾಗಿರುವ  ಆಗಿರುವವರು ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ ಧಾರವಾಡ ಜಿಲ್ಲೆಯ ಪರಶುರಾಮ್ , ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್,ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು, ಮಂಜೇಶ್ ಸೇರಿ ಹಲವು ರೈತ ಮಹಿಳೆಯರು ಹಾಗೂ ರೈತ ಮುಖಂಡರು ಇದ್ದರು.

click me!