ಬಡತನ ಮುಕ್ತ ಕರ್ನಾಟಕ ಹಾಗೂ ಬಡತನ ಮುಕ್ತ ಭಾರತ ನಮ್ಮ ಪರಿಕಲ್ಪನೆ ಆಗಿದ್ದು, ಅದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಪ್ರಮುಖ ಭಾಗವಾಗಿಯೇ ಒಂದು ದೇಶ- ರೇಷನ್ ಒಂದು ಪಡಿತರ ಚೀಟಿಯಂಥ ಯೋಜನೆ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೈಸೂರು (ಜೂ.21): ಬಡತನ ಮುಕ್ತ ಕರ್ನಾಟಕ ಹಾಗೂ ಬಡತನ ಮುಕ್ತ ಭಾರತ ನಮ್ಮ ಪರಿಕಲ್ಪನೆ ಆಗಿದ್ದು, ಅದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಪ್ರಮುಖ ಭಾಗವಾಗಿಯೇ ಒಂದು ದೇಶ- ರೇಷನ್ ಒಂದು ಪಡಿತರ ಚೀಟಿಯಂಥ ಯೋಜನೆ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ, ನಾಗನಹಳ್ಳಿ ಹೊಸ ಕೋಚಿಂಗ್ ಕಾಂಪ್ಲೆಕ್ಸ್, ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಗೆ ಶಂಕುಸ್ಥಾಪನೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಎಕ್ಸಲೆನ್ಸ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಗರೀಭಿ ಕಲ್ಯಾಣ ಯೋಜನೆ ಈ ಹಿಂದೆ ಸೀಮಿತ ಪರಿಮಿತಿಯಲ್ಲಿತ್ತು. ಆದರೆ, ಅದನ್ನು ದೇಶವ್ಯಾಪಿ ವಿಸ್ತರಿಸಲಾಗಿದೆ. ಇಂದು ಈ ಯೋಜನೆ ರಾಜ್ಯದ ಗಡಿ ದಾಟಿ ಎಲ್ಲಡೆ ಹರಡಿದೆ ಎಂದರು.
ಕನ್ನಡದಲ್ಲಿ ಮೋದಿ ಮಾತು, ಆತ್ಮನಿರ್ಭರ ಭಾರತ ಕಲ್ಪನೆಗೆ ಬೆಂಗಳೂರೇ ಆದರ್ಶ ಎಂದ ಪ್ರಧಾನಿ
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅನೇಕ ಸರ್ಕಾರಗಳು ಆಡಳಿತ ನಡೆಸಿ ಹೋಗಿವೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಹಳ್ಳಿ, ಮಹಿಳೆ, ರೈತ, ಬಡವ ಸೇರಿ ದೀನ ದಲಿತರ ಪರ ಸದಾ ಯೋಜನೆ ರೂಪಿಸುತ್ತಾ ಬಂದಿದೆ. ಸರ್ಕಾರಿ ಯೋಜನೆಗಳು ಅರ್ಹ ವ್ಯಕ್ತಿಗೆ ತಲುಪಲೇಬೇಕು ಎಂಬ ಸಂಕಲ್ಪ ನಮ್ಮದು ಎಂದರು. ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆ ಅತ್ಯಂತ ಯಶಸ್ವಿ ಯೋಜನೆ. ಯಾವ ವ್ಯಕ್ತಿಯೂ ಅನಾರೋಗ್ಯದಿಂದ ಸಾಯಬಾರದು, ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದಲೇ ಆ ಯೋಜನೆ ಜಾರಿಗೊಳಿಸಿದ್ದು, ಯಶಸ್ಸು ಕಂಡಿದೆ. ಎಲ್ಲರಿಗೂ ಈ ಯೋಜನೆ ಲಾಭ ಸಿಗಬೇಕೆಂಬುದು ನಮ್ಮ ಸರ್ಕಾರದ ಗುರಿ ಎಂದರು.
ಕಳೆದ ಎಂಟು ವರ್ಷಗಳಲ್ಲಿ ಜನರ ಭಾವನೆ ಅರ್ಥಮಾಡಿಕೊಂಡು ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ದೇಶದ ಪ್ರತಿಯೊಬ್ಬರ ಹಿತ ಕಾಯುವುದೇ ನಮ್ಮ ಉದ್ದೇಶ. ರೈತರಿಗಾಗಿ ಪಿಎಂ ಕಿಸಾನ್ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ಪ್ರತೀ ರೈತನ ಖಾತೆಗೆ ವರ್ಷಕ್ಕೆ .10 ಸಾವಿರ ಜಮೆ ಆಗಲಿದೆ. ಇದಕ್ಕಾಗಿ . 2 ಲಕ್ಷ ಕೋಟಿ ವಿನಿಯೋಗಿಸಲಾಗುತ್ತಿದೆ. ಕಿಸಾನ್ ಕ್ರಡಿಟ್ ಯೋಜನೆ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರೂ ನೆಮ್ಮದಿಯ ಬದುಕು ಸಾಗಿಸಬೇಕೆನ್ನುವುದು ನಮ್ಮ ಆಲೋಚನೆ ಎಂದು ಹೇಳಿದರು. ಮೈಸೂರು ಅಭಿವೃದ್ಧಿಗೆ ಸಹಕಾರ: ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬುದು ಮೈಸೂರಿನ ಈ ನೆಲದಲ್ಲಿ ಮೇಳೈಸಿದ್ದು, ಅದನ್ನು ನಾನು ಕಂಡಿದ್ದೇನೆ. ಆದ್ದರಿಂದ ಮೈಸೂರು ಅಭಿವೃದ್ಧಿಗೆ ಎಲ್ಲಾ ಬಗೆಯ ಸಹಕಾರ ನೀಡಲು ಸಿದ್ಧ ಎಂದು ಮೋದಿ ಹೇಳಿದರು.
ಮೋದಿ ಕಾರ್ಯಕ್ರಮದಲ್ಲಿ ಹಿಂದಿ ಹೇರಿಕೆಗೆ ಬ್ರೇಕ್, ಕನ್ನಡದಲ್ಲೇ ನಾಮಫಲಕಗಳು..!
ಕರ್ನಾಟಕ ಆರ್ಥಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಮೃದ್ಧವಾಗಿದೆ. ಆ ಕಾರಣಕ್ಕಾಗಿಯೇ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಮೈಸೂರಿನಲ್ಲೇ ಆಚರಿಸಬೇಕು ಎಂದು ನಿಶ್ಚಯಿಸಲಾಗಿತ್ತು. ದೇಶದ ಎಲ್ಲರ ಚಿತ್ತ ನಾಳೆಯ ಯೋಗ ದಿನಾಚರಣೆ ಮೇಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ, ಕುವೆಂಪು ಸೇರಿ ಮಹಾನ್ ವ್ಯಕ್ತಿಗಳು ಮೈಸೂರನ್ನು ಸಮೃದ್ಧಗೊಳಿಸಿದ್ದಾರೆ. ಅವರ ಅಸ್ಮಿತೆ ಇಂದಿಗೂ ಈ ನೆಲದಲ್ಲಿ ಜೀವಂತವಾಗಿದೆ. ಅವರು ನೀಡಿರುವ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದಲೇ ಸಾಮಾನ್ಯ ಜನರೂ ಇಲ್ಲಿ ಉತ್ತಮ ರೀತಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.