ನಗರದಲ್ಲಿ ಇದೀಗ ದಿನಬಳಕೆ ವಸ್ತುಗಳ ದರ ಹೆಚ್ಚಳ ಜೊತೆಗೆ ಸೇವಾ ವಲಯದ ಶುಲ್ಕ ಹೆಚ್ಚುವ ಎಲ್ಲ ಸಾಧ್ಯತೆಗಳಿದ್ದು, ತಿಂಗಳ ಸಂಬಳ ಹೆಚ್ಚಿಸಲು ಕಾರ್ಮಿಕರು ಒತ್ತಾಯ ಮಾಡುತ್ತಿರುವುದು ಹೆಚ್ಚಾಗಿದೆ.
ಮಯೂರ್ ಹೆಗಡೆ
ಬೆಂಗಳೂರು ಜು.31): ನಗರದಲ್ಲಿ ಇದೀಗ ದಿನಬಳಕೆ ವಸ್ತುಗಳ ದರ ಹೆಚ್ಚಳ ಜೊತೆಗೆ ಸೇವಾ ವಲಯದ ಶುಲ್ಕ ಹೆಚ್ಚುವ ಎಲ್ಲ ಸಾಧ್ಯತೆಗಳಿದ್ದು, ತಿಂಗಳ ಸಂಬಳ ಹೆಚ್ಚಿಸಲು ಕಾರ್ಮಿಕರು ಒತ್ತಾಯ ಮಾಡುತ್ತಿರುವುದು ಹೆಚ್ಚಾಗಿದೆ.
ತರಕಾರಿ, ಬೇಳೆಕಾಳು, ವಿದ್ಯುತ್ ದರ ಹೆಚ್ಚಳ ಪರಿಣಾಮ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಸರಕುಗಳ ಚಿಲ್ಲರೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಲ್ಲಿ ಲಭ್ಯವಾಗುವ ದಿನಬಳಕೆ ಪರಿಕರಗಳು (ಎಫ್‌ಎಂಜಿಸಿ) ಬೆಲೆ ಹೆಚ್ಚಾಗುವ ಲಕ್ಷಣವಿದೆ. ಜೊತೆಗೆ ಕಾರ್ಮಿಕ ವಲಯದ ವಿವಿಧ ಸೇವೆಗಳು ಕೂಡ ದುಬಾರಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.
ದೈನಂದಿನ ಖರ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಹೆಚ್ಚಿನ ಸಂಬಳಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕೆಲಸದ ಸ್ಥಳಕ್ಕೆ ಬಂದು ಹೋಗುವ ವೆಚ್ಚ, ಊಟದ ಖರ್ಚನ್ನು ನಾವೇ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಳ ಏರಿಕೆ ಬಗ್ಗೆ ಜೋರಾಗಿ ಚರ್ಚೆ ನಡೆದಿದೆ. ಅಸಂಘಟಿತ ವಲಯದ ಎಲೆಕ್ಟ್ರಿಷಿಯನ್‌ಗಳು, ಕಟ್ಟಡ ಕಾರ್ಮಿಕರು, ಮನೆ ಸ್ವಚ್ಛಗೊಳಿಸುವ ಕಾರ್ಮಿಕರು ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಡುತ್ತಿದ್ದಾರೆ.
ದಿನಕ್ಕೆ .500-600 ರವರೆಗಿದ್ದ ಸಾಮಾನ್ಯ ಕೆಲಸಗಳ ದಿನದ ಸಂಬಳ ಇದೀಗ .700-800 ರವರೆಗೆ ತಲುಪುವ ಸಾಧ್ಯತೆ ಇದೆ. ಹೌಸ್ ಕೀಪಿಂಗ್‌ನ ವಿವಿಧ ಸವೀರ್‍ಸ್‌ಗಳು ಶೇಕಡ 10ರಿಂದ 15ರವರೆಗೆ ಹೆಚ್ಚುವ ಸಾಧ್ಯತೆಯಿದೆ ಎಂದು ಸವೀರ್‍ಸ್ ವಲಯದ ಸಂಸ್ಥೆಯೊಂದು ತಿಳಿಸಿದೆ. ಮುಖ್ಯ ಪ್ಲಂಬರ್‌ಗೆ ಈವರೆಗೆ .800-900 ಹಾಗೂ ಸಹಾಯಕನಿಗೆ .600-.700 ಇತ್ತು. ಇದನ್ನೀಗ .1100 ರವರೆಗೆ ಹೆಚ್ಚಿಸುವ ಬಗ್ಗೆ ಯೋಚಿಸಿದ್ದೇವೆ ಎಂದು ಆನ್‌ಲೈನ್ ಪ್ಲಂಬರ್ ಸವೀರ್‍ಸ್‌ನ ಮೂರ್ತಿ ತಿಳಿಸುತ್ತಾರೆ.
Tomato ಬೆಲೆ ಇಳಿಕೆಗೆ ಯುಪಿ ಸಚಿವರು ಕೊಟ್ರು ಬೆಸ್ಟ್ ಐಡಿಯಾ!
ಬೆಲೆ ಹೆಚ್ಚಳವಾದಂತೆ, ಮನೆ ಬಾಡಿಗೆ, ದಿನಬಳಕೆ ವಸ್ತುಗಳ ದರ ಸಹಜವಾಗಿ ಹೆಚ್ಚಾಗುತ್ತಿದೆ. ಸಹಜವಾಗಿ ದೈನಂದಿನ ಜೀವನವೆಚ್ಚವೂ ಏರಿಕೆಯಾಗುತ್ತಿದೆ. ಗಾರ್ಮೆಂಟ್ ನೌಕರ ಮಹಿಳೆಯರಿಗೆ ಗರಿಷ್ಠ ಎಂದರೆ .10-11 ಸಾವಿರ ತಿಂಗಳ ಸಂಬಳ ನೀಡಲಾಗುತ್ತದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಕನಿಷ್ಠ .26 ಸಾವಿರ ಸಂಬಳವನ್ನಾದರೂ ನೀಡಬೇಕು ಎಂದು ಹೋರಾಟಗಾರ್ತಿ ಸಿ.ಕುಮಾರಿ ಒತ್ತಾಯಿಸಿದ್ದಾರೆ. ಜೊತೆಗೆ ಸಂಬಳ ಹೆಚ್ಚಳಕ್ಕಾಗಿ ಮಹಿಳೆಯರು ಒಟ್ಟಾಗಿ ಹೋರಾಡುವುದೂ ಕಷ್ಟವಾಗಿದೆ. ಹೀಗಾಗಿ ಸರ್ಕಾರವೇ ತಕ್ಷಣ ಮಧ್ಯಪ್ರವೇಶಿಸಿ ಕಾರ್ಮಿಕರ ಸಂಬಳ ಹೆಚ್ಚಿಸಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರು ಲಭ್ಯರಿಲ್ಲ!
ಹಿಂದೆಲ್ಲ ಸ್ಥಳೀಯ ಯುವಕರು ಕಟ್ಟಡ, ಹೌಸ್‌ಕೀಪಿಂಗ್, ಪ್ಲಂಬರ್‌ನಂಥ ಕೆಲಸಕ್ಕೆ ಸಿಗುತ್ತಿದ್ದರು. ಆದರೆ ಈಗ ಇವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಈಗ ಹೆಚ್ಚಾಗಿ ಸ್ವಿಗ್ಗಿ, ಝೋಮೆಟೋ, ಅಮೆಜಾನ್‌ನಂತಹ ಆನ್‌ಲೈನ್ ಡಿಲಿವರಿ, ರಾರಯಪಿಡೋನಂತಹ ಕೆಲಸಕ್ಕೆ ಹೋಗುತ್ತಿದ್ದಾರೆ. ಒಂದು ವೇಳೆ ನಮ್ಮ ಕೆಲಸಕ್ಕೆ ಬಂದರೂ ಹೆಚ್ಚಿನ ಸಂಬಳಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪರ್ಯಾಯವಾಗಿ ಉತ್ತರ ಭಾರತದ ವಿಶೇಷವಾಗಿ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಕಡೆಯವರು ಹೆಚ್ಚಾಗಿ ಈ ಕೆಲಸಕ್ಕೆ ಸಿಗುತ್ತಿದ್ದಾರೆ. ಇವರೂ ಕಡಿಮೆ ಸಂಬಳಕ್ಕೆ ಬರುತ್ತಿಲ್ಲ ಎಂದು ಹೌಸ್ ಕೀಪಿಂಗ್ ಸಂಸ್ಥೆಯೊಂದು ತಿಳಿಸಿದೆ.
ಹೋಟೆಲ್ ತಿಂಡಿಗಳ ಹೊಸ ದರ, ಇಂದು ಸಂಜೆ ಮಹತ್ವದ ನಿರ್ಧಾರ
ಬೆಲೆ ಏರಿಕೆ ಹಾಗೂ ಕಾರ್ಮಿಕರ ಸಂಬಳದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಈಚೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಭೆ ಕರೆದಾಗ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕು. ಕನಿಷ್ಠ .36 ಸಾವಿರ ಸಂಬಳ ನೀಡಲು ಸರ್ಕಾರ ಸೂಚಿಸುವಂತೆ ಒತ್ತಾಯಿಸಿದ್ದೇವೆ.
-ಕೆ.ಮಹಾಂತೇಶ, ಸಿಐಟಿಯು ರಾಜ್ಯ ಕಾರ್ಯದರ್ಶಿ
ಬೆಲೆಯೇರಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೌಸ್‌ಕೀಪಿಂಗ್, ಪ್ಲಂಬರ್‌ನಂಥ ಕಾರ್ಮಿಕರ ದಿನದ ಸಂಬಳ ಹೆಚ್ಚಿಸಬೇಕಾಗಿದ್ದು ಅನಿವಾರ್ಯ. ಇಲ್ಲದಿದ್ದರೆ ಬಡ, ಮಧ್ಯಮ ವರ್ಗದ ಜನದ ಬದುಕು ಕಷ್ಟ.
-ಮೂರ್ತಿ, ಪ್ಲಂಬರ್