ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ 16 ಕಡೆ NIA ಅಧಿಕಾರಿಗಳು ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ದಾಳಿ ನಡೆಸಿದ್ದಾರೆ.
ಮಂಗಳೂರು (ಮೇ 31, 2023): ಬಿಹಾರದ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಕೇಸ್ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಎನ್‌ಐಎ ದಾಳಿ ನಡೆದಿದೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ 16 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ದಾಳಿ ನಡೆಸುತ್ತಿದ್ದು, 16 ಕಡೆ ಎನ್‌ಐಎ ಅಧಿಕಾರಿಗಳು ದಾಖಲೆ ಪರಿಶೀಲನೆ ಡನೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ 16 ಕಡೆ NIA ಅಧಿಕಾರಿಗಳು ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಈ ದಾಳಿ ನಡೆದಿದ್ದು, ದಕ್ಷಿಣ ಭಾರತದ ಪಿಎಫ್‌ಐ ಹವಾಲಾ ಹಣದ ಜಾಲವನ್ನು ಎನ್‌ಐಎ ಭೇದಿಸುತ್ತಿದೆ.
ಇದನ್ನು ಓದಿ: ತಮಿಳುನಾಡಿನ 6 ಕಡೆ ಎನ್‌ಐಎ ದಾಳಿ 5 ಪಿಎಫ್‌ಐ ಕಾರ್ಯಕರ್ತರ ಸೆರೆ
ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆಯಾಗಿದ್ದು, ಈ ಹಿನ್ನೆಲೆ ದಕ್ಷಿಣ ಕನ್ನಡದಲ್ಲೂ ಈ ನೆಟ್ವರ್ಕ್ ಇರುವ ಸಾಧ್ಯತೆ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ. ಇದೇ ರೀತಿ, ಕೇರಳ ಹಾಗೂ ಬಿಹಾರದ ಹಲವು ಕಡೆಯೂ ಎನ್‌ಐಎ ದಾಳಿ ನಡೆಸಿದೆ.
National Investigation Agency is conducting raids at about 25 locations in Karnataka, Kerala and Bihar in the Popular Front of India Phulwarisharif case. pic.twitter.com/kh8exI1CJb
— ANI (@ANI)ಬಿಹಾರದಲ್ಲಿ 2021 ಜುಲೈ 12ರಂದು ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಹಿನ್ನೆಲೆ ಎನ್‌ಐಎ ಅಧಿಕಾರಿಗಳು ಈ ರೇಡ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನ ಆರೋಪ ಹಿನ್ನೆಲೆ ಪ್ರಕರಣ ತನಿಖೆಯ ಜಾಡು ಹಿಡಿದು NIA ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೈಬರ್ ಕ್ರಿಮಿನಲ್ಸ್ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ
ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿದ್ದ NIA ಅಧಿಕಾರಿಗಳು ಇತ್ತೀಚೆಗೆ ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಅವರನ್ನು ಬಂಧಿಸಿದ್ದರು. ಅಲ್ಲದೆ, ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನೂ NIA ಅಧಿಕಾರಿಗಳು ಬಂಧಿಸಿದ್ದರು.
ಆ ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ NIA ದಾಖಲೆ ಪತ್ತೆಹಚ್ಚಿತ್ತು. ಅದೇ ಆಧಾರದಲ್ಲಿ ಮತ್ತಷ್ಟು ಪೂರಕ ಸಾಕ್ಷ್ಯ ಆಧರಿಸಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಶಾರುಖ್ ಜಾಹೀರಾತು ನೀಡುವ ಬೈಜುಸ್ ಮೇಲೆ ಇಡಿ ರೇಡ್: 28,000 ಕೋಟಿ ಮೌಲ್ಯದ ವಿದೇಶಿ ಹೂಡಿಕೆ ಮೇಲೆ ಹದ್ದಿನ ಕಣ್ಣು