ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ, ಲವಿಂಗ್ ಅಮ್ಮ ರೋಹಿಣಿ ಸಿಂಧೂರಿ

First Published Jan 29, 2019, 2:18 PM IST

ಪ್ರಸ್ತುತ ಹಾಸನ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್.

ಪ್ರಸ್ತುತ ಹಾಸನ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್.
undefined
ಕರ್ನಾಟಕದ IAS ಆಫೀಸರ್ ರೋಹಿಣಿ UPSC ಪರೀಕ್ಷೆಯಲ್ಲಿ ಪಡೆದದ್ದು 43ನೇ ರ‍್ಯಾಂಕ್.
undefined

Latest Videos


ರೋಹಿಣಿ ಪತಿ ಸುಧೀರ್ ಸಾಫ್ಟ್‌ವೇರ್ ಎಂಜಿನಿಯರ್.
undefined
2011ರಿಂದ 2012ರವರೆಗೂ ತುಮಕೂರಿನ ಎಸಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲೇ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
undefined
ಅಜ್ಜನಗೊಂಡನಹಳ್ಳಿಯ 42 ಎಕರೆ ಕಾರ್ಪೊರೇಷನ್ ಜಾಗದಲ್ಲಿ ಗಣಕೀಕೃತ ತೆರಿಗೆ ಸಂಗ್ರಹ ಪದ್ಧತಿಯನ್ನು ಪರಿಚಯಿಸಿದ ಕೀರ್ತಿ ರೋಹಿಣಿಯವರದ್ದು.
undefined
ತುಮಕೂರಿನ ಎಂಜಿ ರಸ್ತೆಯ ಅತಿಕ್ರಮವನ್ನು ತೆರವುಗೊಳಿಸಿ, ಜನರಿಗೆ ತುಂಬಾ ಹತ್ತಿರವಾದರು.
undefined
2013ರಿಂದ 2014ವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ಹಾಗೂ ಸ್ವಯಂ ಉದ್ಯೋಗ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
undefined
2015ರಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದರು.
undefined
ಮಂಡ್ಯದಲ್ಲಿ ರೋಹಿಣಿ ಅವರು ಬಯಲು ಮುಕ್ತ ಶೌಚಾಲಯ ಮಾಡಲು ತೆಗೆದುಕೊಂಡ ಕ್ರಮ ಶ್ಲಾಘನೀಯ. 1 ಲಕ್ಷ ಶೌಚಾಲಯ ನಿರ್ಮಿಸಿ, ರಾಜ್ಯದ ಮೊದಲ ಬಯಲು ಮುಕ್ತ ಶೌಚ ಜಿಲ್ಲೆ ಎಂಬ ಕೀರ್ತಿಗೆ ಮಂಡ್ಯ ಪಾತ್ರವಾಗುವಂತೆ ಮಾಡುವಲ್ಲಿ ರೋಹಿಣಿಯವರ ಶ್ರಮವಿದೆ. ಜನರಲ್ಲಿ ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಅವರು ತೆಗೆದುಕೊಂಡ ಕ್ರಮವೂ ಅಮೋಘ.
undefined
ಇದೀಗ ಹಾಸನ ಡಿಸಿಯಾಗಿಯೂ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರುಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
undefined
click me!