ಅಯೋಧ್ಯೆ ಆದೇಶ: ಕನ್ನಡ ಪತ್ರಿಕೆಗಳ ಮುಖಪುಟವೇ ವಿಶೇಷ!

First Published Nov 10, 2019, 1:31 PM IST

ಅಯೋಧ್ಯೆ -ಬಾಬರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿಂತೆ ನಿನ್ನೆ(ನ.09) ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದು, ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇಡೀ ವಿಶ್ವದ ಗಮನ ಸೆಳೆದಿದ್ದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಕುರಿತು ನಾಡಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳು ಮುಖಪುಟದ ಲೇಖನ ಪ್ರಟಿಸಿವೆ. ವಿವಿಧ ದಿನಪತ್ರಿಕೆಗಳು ಹೇಗೆ ಅಯೋಧ್ಯೆ ತೀರ್ಪನ್ನು ಹೇಗೆ ವಿಶ್ಲೇಷಿಸಿವೆ  ಎಂಬುದನ್ನು ಇಲ್ಲಿ ಕಾಣಿ.

ನಾಡಿನ ಪ್ರಮುಖ ದಿನ ಪತ್ರಿಕೆಯಾದ ಕನ್ನಡಪ್ರಭ ಅತ್ಯಂತ ಆಕರ್ಷಕ ಶೀರ್ಷಿಕೆಯೊಂದಿಗೆ ಸುಪ್ರೀಂಕೋರ್ಟ್ ತೀರ್ಪನ್ನು ವಿಶ್ಲೇಷಿಸಿದ್ದು, ಶತಮಾನಗಳ ಅಯೋಧ್ಯೆ ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ ಎಂದು ಹೇಳಿದೆ.
undefined
ನಾಡಿನ ಪ್ರಸಿದ್ಧ ದಿನ ಪತ್ರಿಕೆ ಪ್ರಜಾವಾಣಿ ಕೂಡ ಅಯೋಧ್ಯೆ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಮುಖಪುಟದಲ್ಲಿ ವಿಶ್ಲೇಷಿಸಿದ್ದು, ತೀರ್ಪು ಸಮರಸದ ಸಂದೇಶ ಸಾರಿದೆ ಎಂದು ಅಭಿಪ್ರಾಯಪಟ್ಟಿದೆ.
undefined
ಪ್ರಮುಖ ಕನ್ನಡ ದಿನ ಪತ್ರಿಕೆಯಾಧ ವಿಜಯ ಕರ್ನಾಟಕ ಕೊನೆಗೂ ಪ್ರಭು ಶ್ರೀರಾಮನಿಗೆ ಜನ್ಮಭೂಮಿ ದೊರೆತಿದೆ ಎಂಬರ್ಥದಲ್ಲಿ ಶೀರ್ಷಿಕೆ ನೀಡಿ ಸುಪ್ರೀಂಕೋರ್ಟ್ ತೀರ್ಪನ್ನು ವಿಶೇಷವಾಗಿ ವಿಶ್ಲೇಷಿಸಿದೆ.
undefined
ಅಲ್ಲದೇ ವಿಜಯವಾಣಿ ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ವಿಶಿಷ್ಟವಾಗಿ ವಿಶ್ಲೇಷಿಸಿದ್ದು, ಶ್ರಿರಾಮನಿಗೆ ಸೇರಬೇಕಾಗಿದ್ದ ಭೂಮಿ ಆತನಿಗೆ ಸೇರಿದೆ ಎಂದು ಮಾರ್ಮಿಕವಾಗಿ ಮುಖಪುಟವನ್ನು ಮುದ್ರಿಸಿದೆ.
undefined
ಇನ್ನು ಉದಯವಾಣಿ ಕೂಡ ಸುಪ್ರೀಂಕೋರ್ಟ್ ತೀರ್ಪಿನ ಕರಾರುವಕ್ಕು ವಿಶ್ಲೇಷಣೆ ಮಾಡಿದ್ದು, ಅಯೋಧ್ಯೆ ಶ್ರೀರಾಮನಿಗೆ ಸೇರಿದ್ದು ಎಂಬರ್ಥದಲ್ಲಿ ವಿಶೇಷ ಶೀರ್ಷಿಕೆ ನೀಡಿ ಮುಖಪುಟ ಪ್ರಕಟಿಸಿದೆ.
undefined
ಅದರಂತೆ ವಿಶ್ವವಾಣಿ ಕೂಡ ಅಯೋಧ್ಯೆ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಮುಖಪುಟದಲ್ಲಿ ಪ್ರಕಟಿಸಿದ್ದು, ಕನ್ನಡ ಚಿತ್ರದ ಹಾಡೊಂದರ ಪ್ರಾರಂಭದ ಸಾಲನ್ನು ಶೀರ್ಷಿಕೆಯನ್ನಾಗಿ ನೀಡಿ ಮೆರಗು ನೀಡಿದೆ.
undefined
ಹೊಸ ದಿಗಂತ ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದು, ಸುಪ್ರೀಂಕೋರ್ಟ್ ಪ್ರಕರಣಕ್ಕೆ ಪೂರ್ಣ ವಿರಾಮ ನೀಡಿದ್ದು, ಭಕ್ತರು ಆರಾಮವಾಗಿದ್ದಾರೆ ಎಂದು ಮುಖಪುಟದಲ್ಲಿ ಪ್ರಕಟಿಸಿದೆ.
undefined
ಇನ್ನು ಕನ್ನಡದ ಸಾಯಂಕಾಲದ ಪತ್ರಿಕೆಯಾದ ಸಂಜೆವಾಣಿ ಕೂಡ ಆಕರ್ಷಕ ಮುಖಪುಟದೊಂದಿಗೆ ಅಯೋಧ್ಯೆ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿದೆ.
undefined
click me!