ಬಳ್ಳಾರಿ ಜೈಲಲ್ಲಿ ದರ್ಶನ್‌ ಇರೋ ಕೋಣೆಯಲ್ಲೇ ಫೋನ್‌ ವ್ಯವಸ್ಥೆ: ಟೀವಿ ರಿಪೇರಿ ಮಾಡಿಸಿ ಕೊಡಲು ದಾಸ ಅಳಲು..!

By Kannadaprabha News  |  First Published Sep 11, 2024, 11:46 AM IST

ಸಾಮಾನ್ಯ ಕೈದಿಗಳು ಇರುವ ಬ್ಯಾರಕ್ ಪಕ್ಕದಲ್ಲಿಯೇ ಫೋನ್ ವ್ಯವಸ್ಥೆಯಿತ್ತು. ಇತರೆ ಕೈದಿಗಳನ್ನು ಭೇಟಿಯಾಗಲು ಆಗಮಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಕಿರಿಕಿರಿಯಾಗುತ್ತಿದೆ ಎಂಬ ಕಾರಣಕ್ಕೆ ಫೋನ್ ವ್ಯವಸ್ಥೆ ಹೈಸೆಕ್ಯೂರಿಟಿ ಸೆಲ್‌ನಲ್ಲಿಯೇ ಫೋನ್‌ ಕಲ್ಪಿಸಲಾಗಿದೆ. 
 


ಬಳ್ಳಾರಿ(ಸೆ.11):  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಕುಟುಂಬ ಸದಸ್ಯರ ಜೊತೆ ಮಾತನಾಡಲು ಅವರ ಕೋಣೆಗೆ ಫೋನ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪತ್ನಿ ವಿಜಯಲಕ್ಷ್ಮೀ ಜೊತೆ ದರ್ಶನ್ ಕೆಲ ಹೊತ್ತು ಮಾತನಾಡಿದ್ದಾರೆ. 

ಈ ಹಿಂದೆ ಜೈಲು ಸಭಾಂಗಣಕ್ಕೆ ನಟ ದರ್ಶನ್ ಆಗಮಿಸಿ ಕರೆ ಮಾಡಬೇಕಿತ್ತು. ಸಾಮಾನ್ಯ ಕೈದಿಗಳು ಇರುವ ಬ್ಯಾರಕ್ ಪಕ್ಕದಲ್ಲಿಯೇ ಫೋನ್ ವ್ಯವಸ್ಥೆಯಿತ್ತು. ಇತರೆ ಕೈದಿಗಳನ್ನು ಭೇಟಿಯಾಗಲು ಆಗಮಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಕಿರಿಕಿರಿಯಾಗುತ್ತಿದೆ ಎಂಬ ಕಾರಣಕ್ಕೆ ಫೋನ್ ವ್ಯವಸ್ಥೆ ಹೈಸೆಕ್ಯೂರಿಟಿ ಸೆಲ್‌ನಲ್ಲಿಯೇ ಕಲ್ಪಿಸಲಾಗಿದೆ. 

Tap to resize

Latest Videos

undefined

ಕಂಬಿ ಹಿಂದೆ 90 ದಿನ ಪೂರೈಸಿದ ಡೆವಿಲ್ ಹೀರೋ! ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ ಈಗ ಎಷ್ಟಿದೆ ಹಣ?

ದರ್ಶನ್ ಕೊಲೆ ಆರೋಪದ ಜಾಮೀನು ಕುರಿತು ವಕೀಲರ ಜೊತೆ ಚರ್ಚಿಸಲು ಹಾಗೂ ಕುಟುಂಬ ಸದಸ್ಯರ ಜೊತೆ ಮಾತನಾಡಲು ಅನುಕೂಲ ವಾದಂತಾಗಿದೆ. ಮಂಗಳವಾರ ಪತ್ನಿ ವಿಜಯಲಕ್ಷ್ಮೀ ಜತೆ ಮಾತನಾಡಿದ ನಟ ದರ್ಶನ್, ಕಾನೂನು ಹೋರಾಟ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜೈಲು ಸೇರಿದ ಕೆಲ ದಿನ ಊಟ ಹಾಗೂ ಉಪಹಾರ ಸರಿಯಾಗಿ ಸೇವಿಸದೆ ಮಂಕಾ ಗಿದ್ದ ದರ್ಶನ್ ಇದೀಗ ಸಾಮಾನ್ಯ ಕೈದಿ ಗಳಂತೆಯೇ ಊಟ ಹಾಗೂ ಉಪಹಾರ ಸೇವಿಸುತ್ತಿದ್ದಾರೆ. 

ಟೀವಿ ರಿಪೇರಿ ಮಾಡಿಸಿ- ದರ್ಶನ್ ಅಳಲು: 

ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ಟಿವಿಯನ್ನು ದುರಸ್ತಿಗೆ ಕಳಿಸಲಾಗಿದೆ. ಬೇಗ ಟೀವಿ ವ್ಯವಸ್ಥೆ ಮಾಡಿ. ಸಮಯ ಕಳೆಯಲು ಕಷ್ಟವಾಗುತ್ತಿದೆ ಎಂದು ನಟ ದರ್ಶನ್ ಮನವಿ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಟೀವಿ ಅಳವಡಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

click me!