ಬೆಂಗಳೂರಿನ ಪಿಇಎಸ್‌ ವಿವಿ 5 ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸ್‌

By Kannadaprabha NewsFirst Published Aug 9, 2020, 8:13 AM IST
Highlights

ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಉತ್ತೀರ್ಣ| ಪಿಇಎಸ್‌ನ ದೊಡ್ಡ ಸಾಧನೆಯಾಗಿದೆ. ಈವರೆಗೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹಾಗೂ ಐಆರ್‌ಎಸ್‌ ಸೇರಿದಂತೆ ಪಿಇಎಸ್‌ನಿಂದ ಈವರೆಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ: ಪಿಇಎಸ್‌ ವಿವಿ ಕುಲಪತಿ ಡಾ. ಎಂ.ಆರ್‌.ದೊರೆಸ್ವಾಮಿ|
 

ಬೆಂಗಳೂರು(ಆ.09): ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ಸಿಎಸ್‌ಇ ಬ್ರಾಂಚ್‌ನ ಬಿ.ಕೃತಿ (297ನೇ ರ‌್ಯಾಂಕ್), ಸ್ಪರ್ಶಾ ನೀಲಂಗಿ (443ನೇ ರ‌್ಯಾಂಕ್‌), ಎಚ್‌.ಬಿ.ವಿವೇಕ್‌ (444ನೇ ರ‌್ಯಾಂಕ್‌), ಸವಿತಾ ಗೊಟ್ಯಾಲ್‌ (626ನೇ ರ‌್ಯಾಂಕ್‌) ಹಾಗೂ ಇಸಿಇ ಬ್ರಾಂಚ್‌ನ ಎಚ್‌.ಎನ್‌.ಮಿಥುನ್‌ 359ನೇ ರ‌್ಯಾಂಕ್ ಪಡೆದಿದ್ದಾರೆ.

ವಿಜಯಪುರ: UPSC ಪರೀಕ್ಷೆಯಲ್ಲಿ ಹೆಣ್ಮಕ್ಕಳ ಸಾಧನೆ, ಅಕ್ಕ ಐಪಿಎಸ್‌, ತಂಗಿ ಐಎಎಸ್‌ ಅಧಿಕಾರಿ..!

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್‌.ದೊರೆಸ್ವಾಮಿ ಅವರು, ಇದು ಪಿಇಎಸ್‌ನ ದೊಡ್ಡ ಸಾಧನೆಯಾಗಿದೆ. ಈವರೆಗೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹಾಗೂ ಐಆರ್‌ಎಸ್‌ ಸೇರಿದಂತೆ ಪಿಇಎಸ್‌ನಿಂದ ಈವರೆಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಕೆಲವು ವಿದ್ಯಾರ್ಥಿಗಳು ರಾಜ್ಯ ಸೇವೆಗಳಾದ ಕೆಎಎಸ್‌, ಕೆಎಸ್‌ಪಿಗೂ ಆಯ್ಕೆಯಾಗಿದ್ದಾರೆ. ಪ್ರತಿ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಪ್ರತಿವರ್ಷ ಪಿಇಎಸ್‌ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗುತ್ತಿದ್ದಾರೆ. ಅದೇ ರೀತಿ ಈ ಬಾರಿಯೂ ಐವರು ತೇರ್ಗಡೆಗೊಂಡಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂದು ಅಭಿನಂದಿಸಿದ್ದಾರೆ.
 

click me!