ಮದ್ವೆ ಸಮಾರಂಭಗಳಿಗೆ ಮತ್ತೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ

By Suvarna NewsFirst Published May 8, 2021, 11:12 PM IST
Highlights

* ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮತ್ತಷ್ಟು ಕಠಿಣ ರೂಲ್ಸ್
* ಮದ್ವೆ ಸಮಾರಂಭಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ
* ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಜನರ ಸಂಖ್ಯೆಯನ್ನೂ ನಿಗದಿಪಡಿಸಿದ ರಾಜ್ಯ ಸರ್ಕಾರ
* ಕಟ್ಟುನಿಟ್ಟಾಗಿ ಪಾಲಿಸುವಂತೆ  ಸರ್ಕಾರ ಖಡಕ್ ಸೂಚನೆ.

ಬೆಂಗಳೂರು, (ಮೇ.08): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತಷ್ಟು ಕೆಲ ಕಠಿಣ ನಿಯಮಗಳನ್ನು ಕೈಗೊಳ್ಳುತ್ತಿದೆ.

ಅದರಲ್ಲೂ ಈಗ ಸೀಜನ್ ಇರುವುದರಿಂದ ಒಂದೇ ಕಡೆ ಹೆಚ್ಚು ಜನರು ಗುಂಪು-ಗುಂಪಾಗಿ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಜನರ ಸಂಖ್ಯೆಯನ್ನು ಸಹ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಮದುವೆಗೆ ಬಂದ ಅತಿಥಿಗಳಿಗೆ ಲಾಠಿ ಭೋಜನ.. ಹೆಚ್ಚಿನ ಜನ ಸೇರಿದ್ರೆ!

ಮದುವೆ ಸಮಾರಂಭದಲ್ಲಿ ಭಾಗಿಯಾಗಲು  50 ಜನರಿಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು. ಆದ್ರೆ, ಇದೀಗ ಇದನ್ನು 40ಕ್ಕೆ ಇಳಿಸಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. 

ಹೌದು... ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಸರ್ಕಾರ ಕೇವಲ 40 ಜನರಿಗಷ್ಟೇ ಅವಕಾಶ ಕಲ್ಪಿಸಿ ಇಂದು (ಶನಿವಾರ) ಹೊಸ ಆದೇಶ ಹೊರಡಿಸಿದೆ. ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಲು ಸರ್ಕಾರ ಅನುಮತಿ ನಿರಾಕರಿಸಿದ್ದು, ಕೇವಲ ಮನೆಗಳಲ್ಲಿ ಮಾತ್ರ ಮದುವೆ ಸಮಾರಂಭ ನಡೆಸಲು ಪರಿಷ್ಕೃತ ಆದೇಶದಲ್ಲಿ ಉಲ್ಲೇಖಿಸಿದೆ.

 ಇನ್ನು ಮುಖ್ಯವಾಗಿ ಮದುವೆಗೆ ಹೋಗಬೇಕಾದರೆ ಪಾಸ್ ಕಡ್ಡಾಯವಾಗಿದ್ದು, ಆಹ್ವಾನ ಪತ್ರಿಕೆ ತೋರಿಸಿ ಬಿಬಿಎಂಪಿ ಅಥವಾ ಆಯಾ ತಾಲೂಕಿ ತಹಶೀಲ್ದಾರ್ ರಿಂದ ಅನುಮತಿ ಪಡೆದು ಮದುವೆ ಕಾರ್ಯಕ್ರಮಕ್ಕೆ ತೆರಳಬೇಕು.

ರಾಜ್ಯದಲ್ಲಿ ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತಿರುವುದರಿಂದ ಬಿಎಸ್‌ವೈ ಸರ್ಕಾರ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

click me!