ಬ್ರಿಟನ್‌ಗೆ ಹೋಗದವರಿಗೂ ಅಂಟಿತು ‘ಹೈಸ್ಪೀಡ್‌ ವೈರಸ್‌’, ಭಾರೀ ಆತಂಕ!

By Suvarna NewsFirst Published Jan 2, 2021, 7:19 AM IST
Highlights

ಬ್ರಿಟನ್‌ಗೆ ಹೋಗದವರಿಗೂ ಅಂಟಿತು ‘ಹೈಸ್ಪೀಡ್‌ ವೈರಸ್‌’!| ಬ್ರಿಟನ್ನಿಂದ ಮರಳಿದ ಮಹಿಳೆಯ ತಾಯಿಗೂ ಸೋಂಕು| ರಾಜ್ಯದಲ್ಲಿ ಮತ್ತೆ ಮೂವರಿಗೆ ವೈರಸ್‌| ಸಂಖ್ಯೆ 10ಕ್ಕೇರಿಕೆ| 29 ಕೇಸ್‌: ದೇಶಾದ್ಯಂತ ಈವರೆಗೆ ಬ್ರಿಟನ್‌ ಸೋಂಕು ತಗುಲಿದವರು| 10 ಕೇಸ್‌: ದೇಶದಲ್ಲೇ ಅತಿ ಹೆಚ್ಚು ಪ್ರಕರಣ (10) ಕರ್ನಾಟಕದಲ್ಲಿ

ಬೆಂಗಳೂರು(ಜ.02): ರಾಜ್ಯದಲ್ಲಿ ಮತ್ತೆ ಮೂರು ಮಂದಿಯಲ್ಲಿ ಬ್ರಿಟನ್‌ನ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಈ ಪೈಕಿ, ಬ್ರಿಟನ್‌ಗೆ ತೆರಳದಿದ್ದರೂ ಒಬ್ಬರು ಸ್ಥಳೀಯರಿಗೆ ಇದೇ ಮೊದಲ ಬಾರಿ ರೂಪಾಂತರಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲೂ ಬ್ರಿಟನ್‌ನ ಹೈಸ್ಪೀಡ್‌ ಸೋಂಕಿನ ಸ್ಥಳೀಯ ಹರಡುವಿಕೆ ಆರಂಭವಾಗಿರುವ ಆತಂಕ ಸೃಷ್ಟಿಸಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಒಟ್ಟಾರೆ ಬ್ರಿಟನ್‌ನ ರೂಪಾಂತರಿ ವೈರಸ್‌ ಸೋಂಕಿತರ ಸಂಖ್ಯೆ 10ಕ್ಕೇರಿದೆ.

ಕೊರೋನಾ 2ನೇ ಅಲೆ ಹಬ್ಬುವ ಸಾಧ್ಯತೆ ಹೆಚ್ಚು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿವೃತ್ತ ವೈರಾಣು ತಜ್ಞ

ಮೂವರೂ ಬೆಂಗಳೂರಿಗರು:

ಶುಕ್ರವಾರ ಸೋಂಕು ದೃಢಪಟ್ಟಿರುವ ಮೂರು ಮಂದಿ ಪೈಕಿ ಒಬ್ಬರು ಬೆಂಗಳೂರಿನ ಬೊಮ್ಮನಹಳ್ಳಿ ವಲಯ ಹಾಗೂ ಮತ್ತಿಬ್ಬರು ಪಶ್ಚಿಮ ವಲಯದ ರಾಜಾಜಿನಗರ ನಿವಾಸಿಗಳಾಗಿದ್ದಾರೆ. ರಾಜಾಜಿನಗರ 1ನೇ ಬ್ಲಾಕ್‌ ಮೂಲದ 40 ವರ್ಷದ ಪುತ್ರಿ ಡಿ.19 ರಂದು ಬ್ರಿಟನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯ ಆರೋಗ್ಯ ವಿಚಾರಿಸಲು ಬಂದ ಪುತ್ರಿಯಿಂದ ಅವರ ತಾಯಿಗೆ ಕೊರೋನಾ ಸೋಂಕು ಉಂಟಾಗಿತ್ತು. ಡಿ.24ರಂದು ಪುತ್ರಿ ಹಾಗೂ ಡಿ.25 ರಂದು ತಾಯಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಹೀಗಾಗಿ ಇಬ್ಬರ ಮಾದರಿಗಳನ್ನೂ ಜೆನೆಟಿಕ್‌ ಸೀಕ್ವೆನ್ಸ್‌ ಪರೀಕ್ಷೆಗೆ ರವಾನಿಸಿದ್ದು ಶುಕ್ರವಾರ ಇಬ್ಬರಿಗೂ ಬ್ರಿಟನ್‌ ವೈರಸ್‌ ದೃಢಪಟ್ಟಿದೆ. ಹೀಗಾಗಿ ಬ್ರಿಟನ್‌ನಿಂದ ವಾಪಸಾಗಿದ್ದ ಮಗಳಿಗೆ ಪ್ರಾಥಮಿಕ ಸಂಪರ್ಕಿತೆಯಾಗಿದ್ದ ತಾಯಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ ಸ್ಥಳೀಯರಿಗೆ ಮೊದಲ ಬಾರಿಗೆ ಬ್ರಿಟನ್‌ ಸೋಂಕು ಉಂಟಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ತಳಿ ಕೊರೋನಾತಂಕದ ನಡುವೆಯೇ ಮತ್ತೊಂದು ಶಾಕ್ ಕೊಟ್ಟಿದೆ ಏಮ್ಸ್ ನಿರ್ದೇಶಕರ ಹೇಳಿಕೆ!

ದೇಶದಲ್ಲೇ ಅತಿ ಹೆಚ್ಚು!:

ರಾಜ್ಯದಲ್ಲಿ ಈವರೆಗೂ ಬ್ರಿಟನ್‌ ವೈರಸ್‌ನ 10 ಸೋಂಕಿತರು ಪತ್ತೆಯಾಗಿದ್ದು ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ದೆಹಲಿ (10) ಜೊತೆ ಪ್ರಥಮ ಸ್ಥಾನ ಹಂಚಿಕೊಂಡಿದೆ.

ಬ್ರಿಟನ್‌ ಸೋಂಕಿತರು ಹಾಗೂ ಸಂಪರ್ಕಿತ ಸೋಂಕಿತರು ಸೇರಿ ಶುಕ್ರವಾರ 12 ಮಂದಿಯ ಪಾಸಿಟಿವ್‌ ಮಾದರಿಯನ್ನು ನಿಮ್ಹಾನ್ಸ್‌ ಪ್ರಯೋಗಾಲಯದಲ್ಲಿ ಜೆನೆಟಿಕ್‌ ಸೀಕ್ವೆನ್ಸ್‌ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಸಂಪರ್ಕಿತರೊಬ್ಬರು ಸೇರಿ ಮೂರು ಮಂದಿಗೆ ಬ್ರಿಟನ್‌ ಮೂಲದ ಸೋಂಕು ದೃಢಪಟ್ಟಿದೆ. ಈ ಮೂಲಕ ಈವರೆಗೆ ಒಟ್ಟು 27 ಮಂದಿಯ ಪರೀಕ್ಷೆ ಮುಗಿದಿದ್ದು ಇನ್ನೂ ಒಂಬತ್ತು ಮಂದಿಯ ಮಾದರಿಗಳ ಪರೀಕ್ಷೆ ಬಾಕಿ ಉಳಿದಿದೆ. ಈ ಒಂಬತ್ತರಲ್ಲಿ ಮೂರು ಮಂದಿ ಶಿವಮೊಗ್ಗ ಮೂಲದ ಬ್ರಿಟನ್‌ ಸೋಂಕಿತರ ಪ್ರಾಥಮಿಕ ಸಂಪರ್ಕಿತರು. ಈ ಮೂವರಲ್ಲಿ ಯಾರಿಗಾದರೂ ಬ್ರಿಟನ್‌ ಸೋಂಕು ದೃಢಪಟ್ಟರೆ ಸ್ಥಳೀಯವಾಗಿ ಬ್ರಿಟನ್‌ ಸೋಂಕು ಹರಡಿರುವ ಶಂಕೆಗೆ ಮತ್ತಷ್ಟುಪುಷ್ಟಿದೊರೆಯುವ ಸಾಧ್ಯತೆ ಇದೆ.

click me!