ಬೆಂಗಳೂರು (ಜೂ.11): ರಾಜ್ಯದಲ್ಲಿ ಕೊರೋನಾ ಕೊಂಚ ಇಳಿಕೆಯಾದ ಹಿನ್ನೆಲೆ ಅನ್‌ಲಾಕ್ ಮಾಡಿದ್ದು, ಆದರೂ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್ ಅನ್ ಲಾಕ್ ಮಾಡಿದರೂ ಎಚ್ಚರಿಕೆ ಮಾತ್ರ ತಪ್ಪಬಾರದು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಟ 70% ಡೋಸ್ ಲಸಿಕೆ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು ಎಂದರು.
ಕೊರೋನಾ ಕಾಟ: 8 ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್‌ಡೌನ್
ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರು ಮೈ ಮರೆಯಬೇಡಿ. ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದೆ. ಈಗಾಗಿ ಕೆಲ ವಿನಾಯಿತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳ ಆದರೆ ಮತ್ತೆ ಕಠಿಣ ಕ್ರಮ ಗ್ಯಾರಂಟಿ ತೆಗೆದುಕೊಳ್ಳುತ್ತೇವೆ ಎಂದು ಸುಧಾಕರ್ ಹೇಳಿದರು.
10% ಹೆಚ್ಚು ಸೋಂಕು ಇರುವ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. 5% ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು. ಅಂತರ ರಾಜ್ಯ, ಹೊರ ದೇಶದಿಂದ ಬರುವವರಿಗೆ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಆಗಬೇಕು ಎಂದು ಸಚಿವರು ಸೂಚಿಸಿದರು.
ಬ್ರೇಕಿಂಗ್: 11 ಜಿಲ್ಲೆಗಳಲ್ಲಿ ಲಾಕ್ ಮುಂದುವರಿಕೆ, ಉಳಿದೆಡೆ ಸಡಿಲಿಕೆ, ಸಮಯ ವಿಸ್ತರಣೆ ...
ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು. ಗ್ರಾಮ ಭಾಗದಲ್ಲಿ ಸೋಂಕು ಬಂದ ವ್ಯಕ್ತಿಯನ್ನ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು. ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದರೆ ನನಗೂ ಭಯ ಆಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ಇದರಿಂದ ಜನ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಅಲ್ಲದೇ 3-4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತದೆ. ಅಲ್ಲಿಯವರೆಗೂ ಎಲ್ಲರೂ ಎಚ್ಚರವಾಗಿ ನಿಯಮ ಪಾಲನೆ ಮಾಡಬೇಕು ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು.