ಕೋವಿಡ್ : ಲಾಕ್‌ಡೌನ್ ಮುಂದುವರಿಸುವ ಸುಳಿವು ನೀಡಿದ ಸಚಿವರು

By Suvarna NewsFirst Published May 19, 2021, 4:00 PM IST
Highlights
  • ದಿನದಿನವೂ ಕೊರೋನಾ ಪ್ರಕರಣಗಳು ಏರಿಕೆ
  • ಲಾಕ್ ಡೌನ್ ಮುಂದುವರಿಸುವ ಬಗ್ಗೆ ಸುಳಿವು ನೀಡಿದ ಸಚಿವರು
  • ಜನ ಕೈ ಜೋಡಿಸಬೇಕು, ಎಲ್ಲರೂ ಕೂಡಿ ಮಾಡಿದರೆ ಪರಿಸ್ಥಿತಿ ಹತೋಟಿ

ಬಾಗಲಕೋಟೆ (ಮೇ.19): ರಾಜ್ಯದಲ್ಲಿ ದಿನದಿನವೂ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಜನರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಇಲ್ಲವಾದಲ್ಲಿ ಲಾಕ್‌ಡೌನ್ ಮುಂದುವರಿಸಲಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. 

ಬಾಗಲಕೋಟೆಯಲ್ಲಿಂದು ಮಾತನಾಡಿದ  ಸಚಿವ ಉಮೇಶ ಕತ್ತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಸುಳಿವು ನೀಡಿದ್ದಾರೆ.  ರಾಜ್ಯದಲ್ಲಿ 3 ದಿನ ಲಾಕ್ ಡೌನ್ ಮಾಡಬೇಕೆನ್ನುವ ವಿಚಾರ ಮಾಡಿದ್ದಾರೆ. ಸೋಮವಾರ, ಬುಧುವಾರ ಮತ್ತು ಶುಕ್ರವಾರ ಪುಲ್ ಲಾಕ್ ಡೌನ್ ಘೋಷಣೆಯಾಗುತ್ತದೆ ಎಂದರು.

ಜನ ಅಥ೯ ಮಾಡಿಕೊಳ್ಳದೇ ಬರೀ ಸಕಾ೯ರ ಮಾಡಲು ಸಾಧ್ಯವಿಲ್ಲ.  ಜನ ಕೈ ಜೋಡಿಸಬೇಕು, ಎಲ್ಲರೂ ಕೂಡಿ ಮಾಡಿದರೆ ಸರಿ ಹೋಗುತ್ತದೆ  ಎಂದರು. 

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಲು ಪ್ರಧಾನ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದಾರೆ. ಸರ್ಕಾರ-ಜನರು ಸೇರಿಯೇ ಕೊರೋನಾ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕಿದೆ. ರಾಜಕಾರಣಿಗಳು, ಡೀಸಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಸೇರಿ ಇವತ್ತು ಸೂಕ್ತ ಕ್ರಮ ಕೈಗೊಂಡು ಪ್ರಧಾನಿ ಅವರ ಮಾತಿನಂತೆ ಮುನ್ನಡೆಯುತ್ತೇವೆ ಎಂದರು.

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?  

ಡಿಕೆಶಿಗೆ  ಸವಾಲ್ :  2ನೇ ಅಲೆಯಲ್ಲಿ ಸಚಿವರಿಂದ ಕೊವಿಡ್ ನಿವ೯ಹಣೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದ ಡಿಕೆಶಿ ಆರೋಪಕ್ಕೆ ಸಚಿವ ಕತ್ತಿ ತಿರುಗೇಟು ನೀಡಿದ್ದು, ಮಾನ್ಯ ಡಿ.ಕೆ. ಶಿವಕುಮಾರ್ ಅವರು ಮಂತ್ರಿ ಆಗಿದ್ದವರು, ಅವರನ್ನು ನಾನು ಕೇಳೋಕೆ ಇಷ್ಟಪಡುತ್ತೇನೆ.  ಅವರ ಕಾಲದ ಕಮಿಷನ್ ದಂಧೆ ಅವರಿಗೆ ಈಗ ನೆನಪಾಗಿರಬಹುದು. ಅದಕ್ಕಾಗಿ ಹಾಗೆ ಹೇಳುತ್ತಿದ್ದಾರೆ ಎಂದರು.

ಕಮಿಷನ್ ತೆಗೆದುಕೊಳ್ಳುವಂತಹ ಮಂತ್ರಿಗಳ್ಯಾರು ನಮ್ಮಲ್ಲಿಲ್ಲ. ಅಂತಹದ್ದೇನಾದರೂ ಇದ್ದರೆ ಬಹಿರಂಗಪಡಿಸಲಿ, ಕೋಟ್೯ಗೆ ಹೋಗಲಿ, ಬೇಕಿದ್ದರೆ ಪೋಲಿಸ್ ಕಂಪ್ಲೆಂಟ್ ಕೊಡಲಿ.
ಸಾಕಷ್ಟು ಕಾನೂನಗಳಿವೆ, ಕ್ರಮ ತೆಗೆದುಕೊಳ್ಳಲಿ. ಬರೀ ಬಾಯಿ ಮಾತಲ್ಲೆ ಹೇಳೋದು ಸರಿಯಲ್ಲ. ತಾವೊಬ್ಬ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಖಚಿತ ಮಾಹಿತಿಯೊಂದಿಗೆ ಮಾತನಾಡೋದು ಒಳ್ಳೆಯದು.  ಈ ಹಿಂದೆ ಡಿಕೆಶಿ ಮಂತ್ರಿಯಾಗಿದ್ದವರು, ಅವರ ಕಮಿಷನ್ ತೆಗೆದುಕೊಂಡಿದ್ದಾರೆ ಎಂದೇ ಅನೇಕ ತನಿಖೆಗಳಾಗಿವೆ ಎಮದು ತೊರುಗೇಟು ನಿಡಿದರು. 

ಆಸ್ಪತ್ರೆಯಲ್ಲಿ ಹೆಚ್ಚು ಬಿಲ್ :  ಬಾಗಲಕೋಟೆ ಜಿಲ್ಲೆಯಲ್ಲಿ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚೆಚ್ಚು ಹಣ ವಸೂಲಿ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಅಂತಹ ಆಸ್ಪತ್ರೆಗಳನ್ನು ಸೀಜ್ ಮಾಡಲು ಮುಂದಾಗಿದ್ದೇವೆ.  ಎಷ್ಟು ಸಾಧ್ಯವಿದೆಯೋ ಅಷ್ಟು ಕ್ರಮಕೈಗೊಳ್ಳುತ್ತೇವೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!