ಜನರ ಹಣ ಲೂಟಿ ಕೈಬಿಟ್ಟ ರಾಜ್ಯ ಸರ್ಕಾರ, ಮಾಸ್ಕ್ ಹಾಕದವರಿಗೆ ವಿಧಿಸುವ ದಂಡ ಇಳಿಕೆ

By Suvarna NewsFirst Published Oct 7, 2020, 3:51 PM IST
Highlights

ಮಾಸ್ಕ್‌ ನೆಪ ಇಟ್ಟುಕೊಂಡು ದುಬಾರಿ ದಂಡ ವಿಧಿಸುವ ಮೂಲಕ ಜನರಿಗೆ ಕಿರುಕುಳ ನೀಡುತ್ತಿದ್ದ ರಾಜ್ಯ ಕೊನೆಗೂ ಎಚ್ಚೆತ್ತುಕೊಂಡಿದ್ದು,  ಮಾಸ್ಕ್ ಹಾಕದವರಿಗೆ ವಿಧಿಸುತ್ತಿದ್ದ ದಂಡದ ಧರ ಇಳಿಕೆ ಮಾಡಿದೆ.

ಬೆಂಗಳೂರು, (ಅ.07): ಮಾಸ್ಕ್ ಧರಿಸದವರಿಗೆ 1000 ರೂ ವರೆಗೆ ದಂಡ ವಿಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಭಾರೀ ವಿರೋಧ ಕೇಳಿಬಂದ ಹಿನ್ನೆಲೆ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡವನ್ನು ಇಳಿಕೆ ಮಾಡಿದೆ.

"

ನಗರ ಪ್ರದೇಶಗಳಲ್ಲಿ ನಿಗದಿ ಮಾಡಲಾಗಿದ್ದ 1000 ರೂ.ನಿಂದ 250 ರೂ.ಗೆ ಇಳಿಸಿದೆ.  ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 500 ರೂ.ನಿಂದ 100 ರೂ.ಗೆ ಇಳಿಸಿ ರಾಜ್ಯ ಸರ್ಕಾರ  ಇಂದು (ಬುಧವಾರ) ಆದೇಶ ಹೊರಡಿಸಿದೆ.

ಸಾರ್ವಜನಿಕರೇ, ಮಾಸ್ಕ್ ಹಾಕದೇ ಓಡಾಡಬೇಡಿ, ಬೀಳುತ್ತೆ ಭಾರೀ ದಂಡ!

ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿಎಂ ಬಿಎಸ್​ ಯಡಿಯೂರಪ್ಪ, ಪ್ರಧಾನಿಗಳು ಹೇಳಿರುವಂತೆ ಜೀವ ಮತ್ತು ಜೀವನ ಎರಡೂ ಮುಖ್ಯ. ಸಾರ್ವಜನಿಕರು ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಇದ್ದರೆ ಅಂತವರಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಸರ್ಕಾರದ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.  ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಜನರಿದ್ದು ಇಂತಹ ಸಂದರ್ಭದಲ್ಲಿ ದುಬಾರಿ ದಂಡ ಸರಿಯಲ್ಲ. ರಾಜ್ಯ ಸರ್ಕಾರದ ಬೊಕ್ಕಸ ತುಂಬಲ ಜನಸಾಮಾನ್ಯರಲ್ಲಿ ಲೂಟಿ ಮಾಡುತ್ತಿದೆ ಅಂತೆಲ್ಲಾ ಆಕ್ರೋಶಗಳು ವ್ಯಕ್ತವಾಗಿದ್ದವು.

ಅಲ್ಲದೇ ದಂಡ ಕಟ್ಟಲು ಹಣವಿಲ್ಲದೇ ಕಣ್ಣೀರು ಹಾಕಿರು ಪ್ರಸಂಗಗಳು ನಡೆದಿವೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಈ ತೀರ್ಮಾನವನನ್ಉ ಪ್ರಕಟಿಸಿದೆ.

click me!