ವಿಎಚ್‌ಪಿ ಕಾರ್ಯಕರ್ತರು ಪೋಲಿ, ಪುಂಡರಲ್ಲ: ಪೇಜಾವರ ಶ್ರೀ| ಎಚ್‌ಡಿಕೆ ಆರೋಪಗಳಿಗೆ ತಿರುಗೇಟು| ವಿಹಿಂಪದಿಂದ ಅಧಿಕೃತವಾಗಿಯೇ ದೇಣಿಗೆ ಸಂಗ್ರಹ
ಉಡುಪಿ(ಫೆ.18): ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟನ್ನು ಬೇನಾಮಿ ಟ್ರಸ್ಟ್ ಎಂದೂ, ರಾಮಮಂದಿರಕ್ಕಾಗಿ ನಿಧಿ ಸಂಗ್ರಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರನ್ನು ಪೋಲಿ, ಪುಂಡರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವುದಕ್ಕೆ ಟ್ರಸ್ಟ್‌ನ ವಿಶ್ವಸ್ಥ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರಸ್ಟ್ ಬಗ್ಗೆ ಮತ್ತು ಅದರ ನಿಧಿ ಸಂಗ್ರಹದ ಬಗ್ಗೆ ಸಂಶಯಗಳಿದ್ದರೆ ಕೇಳಿ ಪರಿಹರಿಸಿಕೊಳ್ಳಲಿ. ಅದನ್ನು ಬಿಟ್ಟು ಸಂಶಯಗಳಿಂದ ಆರೋಪ ಮಾಡುವುದು ಮಾತ್ರ ಸರಿಯಲ್ಲ. ಆರೋಪಕ್ಕೆ ಪ್ರತ್ಯಾರೋಪಗಳೇ ಉತ್ತರವಾಗುತ್ತವೆ ಎಂದಿದ್ದಾರೆ.
ಕೇದಾರನಾಥ ಸೇರಿ 15 ದೇಗುಲ ನಿರ್ವಹಣೆ ಸರ್ಕಾರದ ಕೈಗೆ: ವಿಎಚ್‌ಪಿ ವಿರೋಧ
ನೋಂದಾಯಿತ ಸಂಸ್ಥೆ:
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾನೂನಿನಡಿ ನೋಂದಾಯಿತ ಸಂಸ್ಥೆಯಾಗಿದೆ. ಆದ್ದರಿಂದ ಈ ಸಂಸ್ಥೆ ಬೇನಾಮಿ ಎಂಬುದು ಶುದ್ಧ ಸುಳ್ಳು. ಈ ಸಂಸ್ಥೆಗೆ ಹಣ ಸಂಗ್ರಹಕ್ಕೆ ಅಧಿಕಾರ ಕೊಟ್ಟವರು ಯಾರೂ ಎಂಬ ಪ್ರಶ್ನೆಯೇ ಬರುವುದಿಲ್ಲ, ನೋಂದಣಿ ಕಾನೂನೇ ಅದಕ್ಕೆ ಅಧಿಕಾರ ನೀಡಿದೆ. ಸಂಸ್ಥೆ ಸಂವಿಧಾನಬದ್ಧವಾಗಿದೆ ಎಂದು ಶ್ರೀಗಳು ತಿರುಗೇಟು ನೀಡಿದಾರೆ.
ಪಾರದರ್ಶಕತೆ ಬೇಕು ಎಂದು ಹೇಳುತ್ತಿದ್ದಾರೆ. ಖಂಡಿತವಾಗಿಯೂ ಪಾರದರ್ಶಕತೆ ಬೇಕೇಬೇಕು. ಅದಕ್ಕಾಗಿ ಟ್ರಸ್ಟಿನ ವ್ಯವಹಾರಗಳನ್ನು ಲೆಕ್ಕಪರಿಶೋಧನೆಗೊಳಿಸಲಾಗುತ್ತದೆ. ಸಂಶಯ ಇದೆ ಎಂದು ಹೇಳುತ್ತಿದ್ದಾರೆ, ಸಂಶಯಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು. ಲೆಕ್ಕಪರಿಶೋಧನೆಯ ದಾಖಲೆಗಳು ಸಿಗುತ್ತವೆ, ಟ್ರಸ್ಟಿನ ವ್ಯವಹಾರದಲ್ಲಿ ಯಾವ ಮುಚ್ಚುಮರೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೂಗಳ ಭಾವನೆ ಪುರಸ್ಕರಿಸಿದ ರಾಜ್ಯ ಸರ್ಕಾರ...!
ಪುಂಡರ ಸಂಸ್ಥೆಯಲ್ಲ, ಇಂಥ ಮಾತು ಸರಿಯಲ್ಲ
ಪ್ರತಿಯೊಂದು ಗ್ರಾಮದಲ್ಲಿಯೂ ಅಲ್ಲಿನ ವಿಹಿಂಪ ಮುಖ್ಯಸ್ಥರ ನೇತೃತ್ವದಲ್ಲಿಯೇ ಕಾರ್ಯಕರ್ತರು ನಿಧಿ ಸಂಗ್ರಹಿಸುತಿದ್ದಾರೆ. ವಿಹಿಂಪ ಪೋಲಿ ಪುಂಡರ ಸಂಸ್ಥೆಯಲ್ಲ. ಅದು ಅಧಿಕೃತವಾಗಿ ರಾಮಮಂದಿರಕ್ಕೆ ನಿಧಿ ಸಂಗ್ರಹಕ್ಕೆ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಈ ಸಂಘಟನೆಯ ಬಗ್ಗೆ ಇಂತಹ ಮಾತು ಸರಿಯಲ್ಲ ಎಂದು ತಿಳಿಸಿದ್ದಾರೆ.