ರಾಯಚೂರು ಪಂಚಮಸಾಲಿ ಮೀಸಲಾತಿ ಸಮಾವೇಶ: ಭಾಷಣದುದ್ದಕ್ಕೂ ಬಿಎಸ್‌ವೈ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್!

Published : Dec 24, 2023, 08:28 PM IST
ರಾಯಚೂರು ಪಂಚಮಸಾಲಿ ಮೀಸಲಾತಿ ಸಮಾವೇಶ: ಭಾಷಣದುದ್ದಕ್ಕೂ ಬಿಎಸ್‌ವೈ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್!

ಸಾರಾಂಶ

ಯಡಿಯೂರಪ್ಪ‌ ನಿನ್ನ ಇಳಿಸಿದ ಮ್ಯಾಲ ನಾನು ಮೀಸಲಾತಿ ತಗೋತಿನಿ ಅಂತ ನೇರವಾಗಿ ಹೇಳಿದೆ. ನಂತರ ಬೊಮ್ಮಾಯಿಗೂ ಹೇಳಿದೆ. ಆತ ಒಮ್ಮೆ ಯಡಿಯೂರಪ್ಪ ಮಾತು ಕೇಳ್ತಿದ್ದ, ಒಮ್ಮೆ ನನ್ ಮಾತು ಕೇಳ್ತಿದ್ದ. ಹಾಗಾಗಿ ಆತನಿಗೂ ನಾನು ಸರಿಯಾಗಿ ಹೇಳಿದಿನಿ. ಅಪ್ಪಗ ಅಣ್ಣಾ ಅಂತಾನೇ ವಿಜಯೇಂದ್ರ. ನಾವು ಯಾವ ಸಮಾಜದವರ ಮೀಸಲಾತಿಯನ್ನೂ ಕಸಗೊಂಡಿಲ್ಲ.. ಸಮಾವೇಶದಲ್ಲಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್.

ರಾಯಚೂರು (ಡಿ.24) : ಇಂದಿನ ಸ್ವಾಮೀಜಿಗಳು ಮಾರೀಸಿಸ್, ಸಿಂಗಾಪೂರ, ಲಂಡನ್ ಹೋಗ್ತಾರೆ. ಆದರೆ ಕೂಡಲಸಂಗಮ‌ ಸ್ವಾಮೀಜಿ ಹಾಗಲ್ಲ. ನಾನು ಈ ಸಮಾಜದಲ್ಲಿ ಮೂವರು  ಸ್ವಾಮೀಜಿಗಳನ್ನ‌ ಮಾತ್ರ ನಂಬುತ್ತೇನೆ. ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಮೃತ್ಯುಂಜಯ ಸ್ವಾಮಿಯನ್ನ. ಮತ್ತೊಬ್ಬ ಸ್ವಾಮಿಜಿ ಇದಾರೆ ಚೈನಿ ಸ್ವಾಮೀಜಿ. ಈ ಮೊದಲು ಯಡಿಯೂರಪ್ಪ ಹಿಂದೆ ಓಡಾಡ್ತಿದ್ದ. ಈಗ ಸಿದ್ದರಾಮಯ್ಯ  ಹಿಂದೆ ಓಡಾಡ್ತಿದಾನೆ ಎಂದ ವಚನಾನಂದ‌ ಸ್ವಾಮೀಜಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಯತ್ನಾಳರು.

ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಟೀಕೆ

ಸಮಾಜಗಳಿಗೆ ಆಸೆ ಹಚ್ತಾರೆ ಅಪ್ಪ -ಮಗ ಬಿ.ಎಸ್. ಯಡಿಯೂರಪ್ಪ, ಮಗ ವಿಜಯೇಂದ್ರ ಬಗ್ಗೆ ಪರೋಕ್ಷವಾಗಿ ಟೀಕಿಸಿದರು. ವಿಧಾನಸಭೆಯಲ್ಲಿ ಪಂಚಮಸಾಲಿ ಜನಾಂಗಕ್ಕೆ‌ ಮಾತ್ರ ಮೀಸಲಾತಿ ಕೊಡಿ ಎಂದಿಲ್ಲ. ದಾವಣಗೆರೆಯಲ್ಲಿ ಬಿಎಸ್ ವೈ ಸಮಾವೇಶ ನಡೆಯುತ್ತಿದೆ. ಅದು ಬಿಎಸ್ ವೈ ಸಮಾವೇಶವಾಗಿದೆ ಯಡಿಯೂರಪ್ಪ, ಖಂಡ್ರೆ, ಶಿವಶಂಕ್ರಪ್ಪ ಸಮಾವೇಶ ಅದು. ಪಂಚಮಸಾಲಿ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿಸಿದ್ದೆವು. ಈ ಮೂರು ಜನ ಸೇರಿ ಮೂವತ್ತು ಸಾವಿರ ಜನ ಸೇರಿಸಿದಾರೆ.‌ ಮೀಸಲಾತಿ ಹೋರಾಟ  ಯಾರ ಆಸ್ತಿಯನ್ನೂ ಕಸಿದುಕೊಳ್ಳುತ್ತಿಲ್ಲ. ಮುಖ್ಯಮಂತ್ರಿ ಪದವಿ ಇಳಿಸ್ತಾರೆ ಎನ್ನುವ ಕಾರಣಕ್ಕೆ ಹಿಂದಿನ ರಾತ್ರಿ ಒಂದಷ್ಟು ಜನ ಲಿಂಗಾಯತ ಶಾಸಕರನ್ನು ಕರೆದು ನಾಳೆ ನಾನು ಅಸೆಂಬ್ಲಿಯಲ್ಲಿ ಮೀಸಲಾತಿ ಬಗ್ಗೆ ದ್ವನಿ ಎತ್ತುತ್ತೇನೆ. ನೀವು ಬೆಂಬಲಿಸಿ ಅಂತಾ ಕೇಂದ್ರದವರನ್ನು ಬ್ಲಾಕ್ ಮಾಡಲಿಕ್ಕೆ ನಾಟಕ‌ ಮಾಡಿದ್ರು. ಪರೋಕ್ಷವಾಗಿ ಯಡಿಯೂರಪ್ಪರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್.

24ನೇ ವೀರಶೈವ ಲಿಂಗಾಯತ ಅಧಿವೇಶನ; ಮಹಾಸಭಾ ಮಂಡಿಸಿದ 8 ನಿರ್ಣಯಗಳೇನು?

ವೀರಶೈವ ಲಿಂಗಾಯತರಲ್ಲಿ ಇನ್ನೂ ಜಗಳ ಇದೆ. ಪಂಚಪೀಠದವರು ಬಸವಣ್ಣನನ್ನ ಸ್ವೀಕಾರ ಮಾಡೋದಿಲ್ಲ, ವೀರಶೈವರಲ್ಲಿ ಕೆಲವರು ಪಂಚಪೀಠದವರನ್ನು ಸ್ವೀಕಾರ ಮಾಡೋದಿಲ್ಲ. ಗಣಪತಿ ಪೂಜೆ ಮಾಡಬಾರದು ಎಂದು ಒಬ್ಬ ಹೇಳಿದ್ರೆ, ಮತ್ತೊಬ್ಬ ಲಕ್ಷ್ಮಿ ಬ್ಯಾಡ ಅನ್ನುವವರು. ಹಸುವಿನ ಸಗಣಿಯಲ್ಲಿ ವಿಭೂತಿ ಯಾಕೆ‌ ಮಾಡಬೇಕು ಎಂದು ಒಬ್ಬ ಸ್ವಾಮಿ ಕೇಳ್ತಾನೆ. ಅರೆ ನಾಯಿ ಸಗಣಿ‌ ಹಚ್ಕೋ ಯಾರು ಬ್ಯಾಡ ಅಂತಾರೆ? ಎಂದು ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಪ್ಪ ಮಕ್ಕಳು ಅಡ್ಜಸ್ಟ್ ಮೆಂಟ್ ರಾಜಕಾರಣ:

ಯಡಿಯೂರಪ್ಪ‌ ನಿನ್ನ ಇಳಿಸಿದ ಮ್ಯಾಲ ನಾನು ಮೀಸಲಾತಿ ತಗೋತಿನಿ ಅಂತ ನೇರವಾಗಿ ಹೇಳಿದೆ. ನಂತರ ಬೊಮ್ಮಾಯಿಗೂ ಹೇಳಿದೆ. ಆತ ಒಮ್ಮೆ ಯಡಿಯೂರಪ್ಪ ಮಾತು ಕೇಳ್ತಿದ್ದ, ಒಮ್ಮೆ ನನ್ ಮಾತು ಕೇಳ್ತಿದ್ದ. ಹಾಗಾಗಿ ಆತನಿಗೂ ನಾನು ಸರಿಯಾಗಿ ಹೇಳಿದಿನಿ. ಅಪ್ಪಗ ಅಣ್ಣಾ ಅಂತಾನೇ ವಿಜಯೇಂದ್ರ. ನಾವು ಯಾವ ಸಮಾಜದವರ ಮೀಸಲಾತಿಯನ್ನೂ ಕಸಗೊಂಡಿಲ್ಲ. ರಾಜೂಗೌಡನೂ ವಾಲ್ಮೀಕಿ ಸಮುದಾಯಕ್ಕೆ‌ ಮೀಸಲಾತಿ ಕೇಳುವಾಗ ನಾನು ಕೇಳು ಅಂದಾಗಲೇ ಎದ್ದು‌ ನಿಂತು ಕೇಳಿದ. ಕಾಂಗ್ರೆಸ್ ನ 12 ಜನ ಶಾಸಕರಲ್ಲಿ ಇಬ್ಬರು ಮಂತ್ರಿಗಳಾಗ್ಯಾರ. ಅವರ ಕೊಡುಗೆ ಏನೂ ಇಲ್ಲ ಸಮಾಜಕ್ಕೆ. ರಣಭೇಟೆಗಾರರು ಏನು ಇದ್ರಲ್ಲ. ನಾನು ವಿರೋಧ ಪಕ್ಷದಲ್ಲಿದ್ದಾಗ ಅವರ ಡೈಲಾಗ್ ನೋಡಬೇಕು. ಯಾವ ಯಾವ ಎಮ್ಮೆಲ್ಲೆಗಳದ್ದು ಏನೇನು ಬೈಲಾಟ ಎಂಬುದು ನಾವು ನೋಡಿದ್ದೇವೆ. ವಿರೋಧ ಪಕ್ಷ ಅಂದ್ರೆ ನಾನು, ಮುಖ್ಯಮಂತ್ರಿ ಅಂದ್ರೆ ಸಿದ್ಧರಾಮಯ್ಯ. ಅಶೋಕ‌ ಪಿಶೋಕ, ಯಾರದ್ದೂ‌ ಏನೂ ನಡೆಯೋದಿಲ್ಲ. ಉಳಿದವರದ್ದೆಲ್ಲ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಾರೆ. ಅವರ ಮಗನಿಗೆ ಇವರು ಸಹಾಯ, ಇವರ ಮಗನಿಗೆ ಅವರ ಸಹಾಯ ಮಾಡ್ತಾರೆ. ಸುಮ್ನೆ ಎಲ್ಲಾ ಡ್ರಾಮಾ.. ಉಗ್ರವಾಗಿ ಖಂಡಿಸ್ತೇನೆ , ಏನೂ ಉಗ್ರ ಇಲ್ಲ ಎಂಥದ್ದೂ ಇಲ್ಲ. ಉಗ್ರವಾಗಿ ಖಂಡಿಸುತ್ತೇವೆ ಅಂದ್ರೆ ಏನು ಚಂಡು ಖಂಡಿಸಿದ್ರು. ಅಪ್ಪ- ಮಕ್ಕಳನ್ನ ಎಂದೂ ನಂಬಬೇಡಿ ಎಂದು ನೇರವಾಗಿ ಬಿಎಸ್ ವೈ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಪಂಚಮಸಾಲಿ‌ ಸಮಾವೇಶಕ್ಕೆ ಯಡಿಯೂರಪ್ಪ ಮಗ ಪರಮಿಶನ್ ಕೊಡಬ್ಯಾಡ್ರಿ ಅಂತ ಹೇಳಿದ್ದರಂತೆ. ಅಪ್ಪ ಮಕ್ಕಳನ್ನು ಎಂದೂ ನಂಬಬೇಡಿ. ನಮ್ಮನ್ನು ಹೊರಗ ಹಾಕಿದ್ರೆ ಹಾಕೊಲ್ರ್ಯಾಕ. 40 ರೂ. ಮಾಸ್ಕ, 400 ರೂಪಾಯಿ‌ ಮಾಡಿ ತಿಂದಾರ. ಬಡವರ ಹೆಣದ ಮೇಲೆ ರೊಕ್ಕ ಮಾಡ್ಯಾರಾ. ಎಂದು ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದರು. ಭಾಷಣದ್ದಕ್ಕೂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧವೇ ಟೀಕಿಸಿದರು.

ನನ್ನ ಸೋಲಿಸಲು ಯತ್ನಿಸಿದವರು ಇವರೇ!

ನನ್ನನ್ನು ಮೊನ್ನೆ ಸೋಲಿಸೋದಕ್ಕೆ ಪ್ರಯತ್ನಿಸಿದವರೆಲ್ಲ ಬಿಜೆಪಿ ಪದಾಧಿಕಾರಿಗಳೇ. ನಮ್ಮ ಬಿಜಾಪುರದಲ್ಲಿ ರೊಕ್ಕ ತಗೊಂಡ್ರು. ಓಟು ಮಾತ್ರ ನನಗೆ ಹಾಕಿದ್ರು. ಬಿಎಸ್ವೈ ಕಂಪನಿ ಮೊದಲು ಪಂಚಮಸಾಲಿಗೆ‌ ಮೀಸಲಾತಿ ಕೊಡ್ರಿ. ನಾಳೆ ಎಪ್ರಿಲ್ ಮೇ ದಲ್ಲಿ‌ ಲೋಕಸಭೆ ಎಲೆಕ್ಷನ್ ಬರ್ತವೆ. ಇವರೆಲ್ಲ ನಮ್ಮನ್ನ ಕರೀಲಿಲ್ಲ ಅಂದ್ರೆ ಜನೆವರಿ 20ರ ಗಡುವು ಮುಗಿದ ಮೇಲೆ, ಫೆಬ್ರುವರಿ 10ರ ಬಳಿಕ ಪುನಃ 10 ಲಕ್ಷ ಜನ ಸೇರಿ ಶಕ್ತಿ ಪ್ರದರ್ಶನ ಮಾಡೋಣ. ಆಯ್ಕೆಯಾಗಿ‌ ಮನೆಯಲ್ಲಿ ಕುಳಿತಿರುವ ಶಾಸಕ‌ ಸಂಸದರು ತಾವಾಗಿಯೇ ಅಲ್ಲಿಗೆ ಬರುವ ಹಾಗೆ ಮಾಡೋಣ ಎನ್ನುವ ಮೂಲಕ ಮತ್ತೊಂದು ಶಕ್ತಿ‌ಪ್ರದರ್ಶನಕ್ಕೆ ಪಂಚಮಸಾಲಿ‌ ಸಮುದಾಯಕ್ಕೆ ಯತ್ನಾಳ್ ಕರೆ ನೀಡಿದರು.

ರಾಯಚೂರು: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ್ ಕಿಡಿ

ತುಮಕೂರಿನಲ್ಲಿ ಜಯಮೃತ್ಯಂಜಯ ಸ್ವಾಮೀಜಿಗಳಿಗೆ 50 ಲಕ್ಷ ರೂ. ಲೇಟರ್ ತಂದುಕೊಟ್ಟಿದ್ರು..  ಅಪ್ಪ - ಮಗ ಇಡೀ‌ ಲಿಂಗಾಯತರನ್ನ ಖರೀದಿ ಮಾಡಿದವರಂಗ ಮಾತನಾಡುತ್ತಾರೆ. ಇವರ ಮನೆಯಲ್ಲೇ ಲಿಂಗಾಯತರು ಹುಟ್ಟಿದಾರೆ ಅನ್ನೋ ಹಾಗೆ ಮಾತಾಡ್ತಾರೆ. ಸಮಾವೇಶದ ಉದ್ದಕ್ಕೂ ಯಡಿಯೂರಪ್ಪ & ವಿಜೆಯೇಂದ್ರನ ವಿರುದ್ಧ ಯತ್ನಾಳ್ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ