ರಾಯಚೂರು: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ್ ಕಿಡಿ

By Ravi JanekalFirst Published Dec 24, 2023, 7:29 PM IST
Highlights

ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಯವರು ಹಳ್ಳಿ ಹಳ್ಳಿಗೆ ಅಲೆಯುತ್ತಾ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ರಾಯಚೂರು (ಡಿ.24): ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಯವರು ಹಳ್ಳಿ ಹಳ್ಳಿಗೆ ಅಲೆಯುತ್ತಾ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಇಂದು ರಾಯಚೂರು ಜಿಲ್ಲೆಯ ಯರಡೋಣಿ ಗ್ರಾಮದಲ್ಲಿ ನಡೆದ ಪಂಚಮಸಾಲಿ ‌ಮೀಸಲಾತಿ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಕೆಲ ಸ್ವಾಮೀಜಿಗಳ ಬಗ್ಗೆ ವ್ಯಂಗ್ಯ ಮಾಡಿದರು.

ಇವತ್ತು ದಾವಣಗೆರೆಯಲ್ಲಿ ಬಿಎಸ್‌ವೈ ಸಮ್ಮೇಳನ ನಡೆದಿದೆ. ಎಂ.ಬಿ.ಪಾಟೀಲ್, ಶಿವಶಂಕರಪ್ಪ, ಯಡಿಯೂರಪ್ಪ ಬರ್ರಿ ಬರ್ರಿ ಅಂತ ಕರೆದು ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದಾರೆ. ಅಪ್ಪ ಮಕ್ಕಳನ್ನ ಎಂದೂ ನಂಬಬೇಡಿ. ಇಬ್ಬರು ನನಗೆ ಬಾಳ ಕಾಡಿದ್ದಾರೆ. ನನಗೆ ಹೊರಹಾಕಿದ್ರೆ ಹಾಕಲಿ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ವಿರುದ್ಧ ಹರಿಹಾಯ್ದರ.

ಹಿಂದಿನ ಜಾತಿಗಣತಿ ವ್ಯವಸ್ಥಿತವಾಗಿ ನಡೆದಿಲ್ಲ; ಹೊಸದಾಗಿ ಸಮೀಕ್ಷೆ ಆಗಬೇಕು: ಬಿಎಸ್ ಯಡಿಯೂರಪ್ಪ

 ಎಲ್ಲಾ ಸಮಾಜದಲ್ಲೂ ಬಡತನವಿದೆ. ನೌಕರಿ ಮತ್ತು ಶಿಕ್ಷಣಕ್ಕಾಗಿ ನಾವು ಮೀಸಲಾತಿ ಕೇಳುತ್ತಿದ್ದೇವೆ. ಹಾಲುಮತಕ್ಕೆ ಎಸ್ ಟಿ ಕೊಡಿ ನಮಗೆ 2ಎಗೆ ಕೊಡಿ. ಕಲ್ಯಾಣ ಕರ್ನಾಟಕದಲ್ಲಿ 26 ಸಾವಿರ ಹುದ್ದೆ ಖಾಲಿ ಇವೆ. ಮೊದಲು ಅವುಗಳನ್ನ ಭರ್ತಿ ಮಾಡಿ ಆ ನಂತರ ಮೋದಿ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾಸಭಾ ನಿರ್ಣಯಗಳಿಗೆ ಜಯಮೃತ್ಯುಂಜಯಶ್ರೀ ಸ್ವಾಗತ:

ಕಳೆದ ಮೂರು ವರ್ಷಗಳಿಂದ ಪಂಚಮಸಾಲಿಗೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದೇವೆ. ನಮ್ಮ ಹೋರಾಟಕ್ಕೆ ತಡವಾಗಿ ಆದ್ರೂ ವೀರಶೈವ ಮಹಾಸಭಾ ಲಿಂಗಾಯತರಿಗೆ ಒಬಿಸಿ ಸೇರ್ಪಡೆ ಮಾಡಲು ಶಿಫಾರಸು ಮಾಡಿದೆ. ಇದು ಒಳ್ಳೆಯ ಬೆಳವಣಿಗೆ ನಿಜಲಿಂಗಪ್ಪನವರ ಮನೆ ಸ್ಮಾರಕ ಮಾಡಲು ನಿರ್ಣಯ ಮಾಡಿದ್ದು ಖುಷಿ ತಂದಿದೆ. ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.

ಜಾತಿ ಗಣತಿ ವಿರೋಧಿಸಿ ಸಹಿ ಹಾಕಿದ್ದೇವೆ: ಮಾಜಿ ಸಚಿವ ಸಿ.ಸಿ.ಪಾಟೀಲ್‌

ನಾನು ಇನ್ನೂ ಎರಡು ನಿರ್ಣಯಗಳ ಬಗ್ಗೆ ಒತ್ತಾಯ ಮಾಡುವೆ. ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕಾಗಿತ್ತು. ಲಿಂಗಾಯತ ಧರ್ಮ ಗುರು ಬಸವಣ್ಣವೆಂದು ಘೋಷಣೆ ಮಾಡಬೇಕಾಗಿತ್ತು. ನಮ್ಮ ಹೋರಾಟದ  ಫಲವಾಗಿ ಲಿಂಗಾಯತವೆಂದು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಧರ್ಮ ಗ್ರಂಥವೂ ಒಪ್ಪಿಕೊಳ್ಳುತ್ತಾರೆವೆಂದು ಭರವಸೆ ವ್ಯಕ್ತಪಡಿಸಿದ ಸ್ವಾಮೀಜಿ

click me!