
ಮೈಸೂರು (ಮೇ.3): ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಪ್ರಜೆಗಳು ಭಾರತ ತೊರೆಯುವ ವಿಚಾರವಾಗಿ ಗಡಿ ದಾಟಲಾಗದೆ ಮೈಸೂರಿನ ಮುಸ್ಲಿಂ ಮಹಿಳೆ ಪರದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಪ್ಡೇಟ್ ಸಿಕ್ಕಿದೆ. ಪಾಕಿಸ್ತಾನಕ್ಕೆ ಹೋಗಲಾಗದೆ ವಾಘಾ ಗಡಿಯಿಂದ ಮುಸ್ಲಿಂ ಮಹಿಳೆ ಹಾಗೂ ಮೂರು ಮಕ್ಕಳು ಮೈಸೂರು ಮನೆಗೆ ವಾಪಸ್ ಆಗಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ತಾಯಿ ಮನೆ ಇದ್ದು. 10 ವರ್ಷಗಳ ಹಿಂದೆ ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈಕೆಯ ಮೂರು ಮಕ್ಕಳು ಪಾಕಿಸ್ತಾನದಲ್ಲಿ ಜನಿಸಿದ ಕಾರಣ ಪಾಕಿಸ್ತಾನ ಪೌರತ್ವ ಹೊಂದಿದ್ದರು. ಹೆಣ್ಣು ಮಗುವಿಗೆ 8 ವರ್ಷ ಮತ್ತು 4 ಹಾಗೂ 2.5 ವರ್ಷದ ಗಂಡು ಮಕ್ಕಳು ವಿಸಿಟರ್ ವೀಸಾದೊಂದಿಗೆ ಭಾರತಕ್ಕೆ ಬಂದು ಮೈಸೂರಿನಲ್ಲಿದ್ದರು.
ಕೇಂದ್ರದ ಆದೇಶದ ಹಿನ್ನೆಲೆ ಏಪ್ರಿಲ್ 29 ರಂದು ವಾಘಾ ಗಡಿ ಮೂಲಕ ಪಾಕಿಸ್ತಾನದ ತಲುಪಲು ನಾಲ್ವರು ಹೊರಟಿದ್ದರು. ಗಡಿಗೆ ಮಕ್ಕಳ ತಂದೆ ಬಾರದ ಹಿನ್ನೆಲೆ ಅಲ್ಲಿಂದಲೇ ಪೋನ್ ಕರೆಗೆ ಪ್ರಯತ್ನಿಸಲಾಗಿತ್ತು. ಸದ್ಯ ಮಕ್ಕಳ ಅಪ್ಪ ಪೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ. ಪಾಕಿಸ್ತಾನದ ರಾಯಭರಿಗಳಿಂದಲೂ ಯಾವುದೇ ಸಹಕಾರ ಸಿಕ್ಕದ ಹಿನ್ನೆಲೆ ತಾಯಿ ಮಕ್ಕಳು ಮೈಸೂರಿಗೆ ವಾಪಸ್ ಬಂದಿದ್ದಾರೆ. ಸದ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳ ಜೊತೆಗೆ ಮಹಿಳೆ ಪಾಕಿಸ್ತಾನದ ಗಂಡನನ್ನು ಬಿಟ್ಟು ವರ್ಷಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದಳು. ಈಗ ಪಾಕಿಸ್ತಾನದ ಪ್ರಜೆಗಳು ಭಾರತ ತೊರೆಯಲೇ ಬೇಕಾದ ಅನಿವಾರ್ಯತೆ ಕಾರಣ ಮಕ್ಕಳ ಜೊತೆ ಗಡಿ ದಾಟಿಸಲು ಮೈಸೂರು ಮಹಿಳೆ ವಾಘಾ ಗಡಿ ತಲುಪಿದ್ದಳು. ಆದರೆ ಚಿಕ್ಕ ಮಕ್ಕಳಾದ ಕಾರಣ ತಂದೆ ಮನೆಯಿಂದ ಸ್ಪಂದನೆ ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಗಡಿಯಲ್ಲಿ ನಿಂತು ಎಷ್ಟೇ ಕರೆ ಮಾಡಿದರೂ ಮಕ್ಕಳ ಅಪ್ಪನಾಗಲಿ, ಮನೆಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಗಂಡನ ಮನೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮಹಿಳೆ ತನ್ನ ಮಕ್ಕಳ ಜೊತೆಗೆ ಮೈಸೂರಿಗೆ ವಾಪಸ್ ಬಂದಿದ್ದು, ಪಾಕಿಸ್ತಾನ ವಿಸಾ ಗಾಗಿ ಮತ್ತೆ ಎಫ್.ಆರ್.ಆರ್.ಓ ಮುಂದೆ ಅರ್ಜಿ ಸಲ್ಲಿಸಿದ್ದಾಳೆ.
ಕೊನೆಗೂ ವಾಘಾ ಗಡಿಯಲ್ಲಿ ಸಿಲುಕಿದ್ದ ತನ್ನ ನಾಗರಿಕರಿಗೆ ತವರಿಗೆ ಮರಳಲು ಅವಕಾಶ ನೀಡಿದ ಪಾಕಿಸ್ತಾನ
ಭಾರತ ವೀಸಾ ಸ್ಥಗಿತ ನಿಯಮವನ್ನು ಸಡಿಲಿಸಿದ ಬಳಿಕ, ವಾಘಾ ಗಡಿಯಲ್ಲಿ ಸಿಲುಕಿದ್ದ ತಮ್ಮ ನಾಗರಿಕರು ತವರಿಗೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ. ಏಪ್ರಿಲ್ 30ರೊಳಗೆ ವಿವಿಧ ಪ್ರಕಾರದ ವೀಸಾ ಹೊಂದಿರುವವರು ಪಾಕಿಸ್ತಾನಕ್ಕೆ ಮರಳಬೇಕೆಂಬ ನಿಯಮವನ್ನು ಭಾರತ ಸಡಿಲಿಸಿದ ಹಿನ್ನೆಲೆಯಲ್ಲಿ, 70ಕ್ಕೂ ಅಧಿಕ ಪಾಕಿಸ್ತಾನಿ ಪ್ರಜೆಗಳು ಗುರುವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ಮರಳಲು ಆಗಮಿಸಿದ್ದರು. ಆದರೆ ಪಾಕಿಸ್ತಾನ ತನ್ನ ಕಡೆಯ ಗಡಿಯ ಬಾಗಿಲು ಮುಚ್ಚಿದ್ದ ಕಾರಣ, ಅವರು ಸುಮಾರು 24 ಗಂಟೆಗಳ ಕಾಲ ಗಡಿಯಲ್ಲೇ ಕಾದು ತನ್ನ ದೇಶಕ್ಕೆ ಹೋಗಲು ನಿರೀಕ್ಷಿಸುತ್ತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಎಚ್ಚರಗೊಂಡಿದ್ದು, ಗಡಿಯ ಬಾಗಿಲು ತೆರದು ತಮ್ಮ ನಾಗರಿಕರನ್ನು ಕರೆಸಿಕೊಳ್ಳುವುದಾಗಿ ತಿಳಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು, "ಅಟ್ಟಾರಿಯಲ್ಲಿ ಕೆಲ ಪಾಕಿಸ್ತಾನಿ ಪ್ರಜೆಗಳು ಸಿಲುಕಿರುವ ವರದಿಗಳನ್ನು ನಾವು ಗಮನಿಸಿದ್ದೇವೆ. ಭಾರತೀಯ ಅಧಿಕಾರಿಗಳು ನಮ್ಮ ನಾಗರಿಕರಿಗೆ ಗಡಿದಾಟಲು ಅವಕಾಶ ನೀಡಿದಲ್ಲಿ, ಅವರನ್ನು ಸ್ವೀಕರಿಸಲು ನಾವು ಸಿದ್ಧರಾಗಿದ್ದೇವೆ. ಭವಿಷ್ಯದಲ್ಲಿಯೂ ವಾಪಸ್ ಮರಳಲು ಬಯಸುವ ಪಾಕಿಸ್ತಾನಿ ನಾಗರಿಕರಿಗೆ ವಾಘಾ ಗಡಿ ತೆರೆದೇ ಇರುತ್ತದೆ" ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ