ಬಿಜೆಪಿಯಿಂದ ದೇಶಭಕ್ತಿ ಕಲಿಬೇಕಿಲ್ಲ; ಕಾಂಗ್ರೆಸ್ ಪಕ್ಷಕ್ಕೆ ಬಹಳ ಸ್ಪಷ್ಟ ನಿಲುವಿದೆ: ಬಿಕೆ ಹರಿಪ್ರಸಾದ್

Published : Apr 29, 2025, 01:46 PM ISTUpdated : Apr 29, 2025, 02:20 PM IST
ಬಿಜೆಪಿಯಿಂದ ದೇಶಭಕ್ತಿ ಕಲಿಬೇಕಿಲ್ಲ; ಕಾಂಗ್ರೆಸ್ ಪಕ್ಷಕ್ಕೆ ಬಹಳ ಸ್ಪಷ್ಟ ನಿಲುವಿದೆ: ಬಿಕೆ ಹರಿಪ್ರಸಾದ್

ಸಾರಾಂಶ

'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಬಿಜೆಪಿಯವರ ಟೀಕೆಗೆ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ತೀವ್ರವಾಗಿ ಖಂಡಿಸಿದ್ದಾರೆ. ಆರು ತಿಂಗಳ ಹಿಂದಿನ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಅವರು, ಬಿಜೆಪಿಯವರು ಸೋಷಿಯಲ್ ಮೀಡಿಯಾ ರಾಜಕಾರಣಕ್ಕೆ ಒತ್ತು ನೀಡಿ, ಸ್ಲೋಗನ್‌ಗಳ ಮೂಲಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು (ಏ.29): 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಬಿಜೆಪಿಯವರ ಟೀಕೆಗೆ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ತೀವ್ರವಾಗಿ ಖಂಡಿಸಿದ್ದಾರೆ. ಆರು ತಿಂಗಳ ಹಿಂದಿನ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಅವರು, ಬಿಜೆಪಿಯವರು ಸೋಷಿಯಲ್ ಮೀಡಿಯಾ ರಾಜಕಾರಣಕ್ಕೆ ಒತ್ತು ನೀಡಿ, ಸ್ಲೋಗನ್‌ಗಳ ಮೂಲಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಯವರು ಘೋಷಣಾ ವೀರರು, ಸ್ಲೋಗನ್‌ಗಳೇ ಅವರ ಗೊಬ್ಬರ ಮತ್ತು ಊಟ ಎಂದು ವ್ಯಂಗ್ಯವಾಡಿದ ಹರಿಪ್ರಸಾದ್‌, ಕೇಂದ್ರ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದರು. ಭಾರತೀಯರ ಮೇಲಿನ ಉಗ್ರ ದಾಳಿಗಳ ವಿರುದ್ಧ ಕಾಂಗ್ರೆಸ್‌ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕೇಂದ್ರದ ನಾಯಕರು ಸಾಂತ್ವನ ಹೇಳಲು ಹೋಗದಿರುವುದು, ಸರ್ವಪಕ್ಷ ಸಭೆಗಳಿಂದ ಮೋದಿ ತಪ್ಪಿಸಿಕೊಳ್ಳುವುದು ಏಕೆ? ತುರ್ತು ಸಂಸತ್ ಅಧಿವೇಶನ ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ, ಮಿಕ್ಕವರಿಗೆ ಕೇಳಿದ್ದು ಹೌದು: ಪಲ್ಲವಿ

ನಾಗಪುರ್ ಮತ್ತು ವಾಟ್ಸಾಪ್ ಯೂನಿವರ್ಸಿಟಿಗಳಿಂದ ದೇಶ ಹಾಳಾಗುತ್ತಿದೆ ಎಂದು ಆರೋಪಿಸಿದ ಅವರು, ಪಹಲ್ಗಾಂ ದಾಳಿಯಿಂದ ಇಡೀ ದೇಶ ದುಃಖದಲ್ಲಿರುವಾಗ ಐಪಿಎಲ್ ಪಂದ್ಯಗಳನ್ನ ಏಕೆ ನಿಲ್ಲಿಸುತ್ತಿಲ್ಲ? ಎಂದು ಪ್ರಶ್ನಿಸಿದ ಬಿಕೆ ಹರಿಪ್ರಸಾದ್ ಅವರು, ಅಮಿತ್ ಶಾ ಅವರ ಮಗನಿಗೆ ತೊಂದರೆಯಾಗಬಾರದು ಎಂಬ ಕಾರಣವಿದೆ ಎಂದು ಕಿಡಿಕಾರಿದರು.

26/11 ದಾಳಿಯ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರವೇ ತಪ್ಪೊಪ್ಪಿಕೊಂಡಿದೆ ಎಂದಿರುವ ಹರಿಪ್ರಸಾದ್‌, ಲೋಕಸಭೆ ಮತ್ತು ರಾಜ್ಯಸಭೆಯ ತುರ್ತು ಅಧಿವೇಶನ ಕರೆದು ಎಲ್ಲವನ್ನೂ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವು ಸ್ಪಷ್ಟವಾಗಿದೆ, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?
ನಾನೆಲ್ಲೂ 2.5 ವರ್ಷಕ್ಕೆ ಸಿಎಂ ಎಂದು ಹೇಳಿಕೊಂಡಿಲ್ಲ, ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ-ಸಿದ್ದರಾಮಯ್ಯ!