5 ಸಾವಿರ ಮಂದಿಯಲ್ಲಿ 'Vaccinate Karnataka' ಅಭಿಯಾನ ಗೆದ್ದ 10 ವರ್ಷದ ಬಾಲಕ!

Published : Jun 21, 2021, 03:30 PM ISTUpdated : Jun 21, 2021, 03:43 PM IST
5 ಸಾವಿರ ಮಂದಿಯಲ್ಲಿ 'Vaccinate Karnataka' ಅಭಿಯಾನ ಗೆದ್ದ 10 ವರ್ಷದ ಬಾಲಕ!

ಸಾರಾಂಶ

* ಕರ್ನಾಟಕ ಕಾಂಗ್ರೆಸ್‌ನಿಂದ 'Vaccinate Karnataka' ಅಭಿಯಾನ * ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಅಭಿಯಾನ * ಐದು ಸಾವಿರ ಮಂದಿ ಹಿಂದಿಕ್ಕಿ ಮೊದಲ ವಿನ್ನರ್ ಆದ ಉಜಿರೆಯ ಬಾಲಕ

ಬೆಂಗಳೂರು(ಜೂ.21): ದೇಶಾದ್ಯಂತ ಜನರಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕದಲ್ಲೂ ಜೂನ್ 19ರಿಂದ ಇಂತಹುದ್ದೊಂದು ಅಭಿಯಾನ ಆರಂಭಗೊಂಡಿತ್ತು. ಹೀಗಿರುವಾಗ ಅನೇಕ ಮಂದಿ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂನಂತಹ ಸಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸುಮಾರು ಐದು ಸಾವಿರ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಐದನೇ ತರಗತಿ ಬಾಲಕ ಅಖಿಲೇಶ್ ಡಿ. ಜೈನ್ ಜಯಶಾಲಿಯಾಗಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬ್ಗಗೆ ಟ್ವೀಟ್ ಮಾಡಿದ್ದು, ಐದನೇ ತರಗತಿ ಬಾಲಕ Vaccinate Karnatakaದ ಮೊದಲ ವಿಜೇತನಾಗಿದ್ದಾನೆ. ಉಜಿರೆಯ ಬಾಲಕನ ವಿಡಿಯೋ ಆಕರ್ಷಕವಾಗಿದೆ ಎಂದಿದ್ದಾರೆ. ಅಲ್ಲದೇ ಇನ್ನೂ 99 ಮಕ್ಕಳಿಗೆ ಜಯಶಾಲಿಗಳಾಗಿ ಟ್ಯಾಬ್‌ ಗೆಲ್ಲುವ ಅವಕಾಶ ಇದೆ ಎಂದಿದ್ದಾರೆ. ಐದು ಸಾವಿರ ಮಂದಿ ಪಾಲ್ಗೊಂಡ ಈ ಅಭಿಯಾನದಲ್ಲಿ ಅಖಿಲೇಶ್ ಮೊದಲ ವಿನ್ನರ್ ಆಗಿದ್ದಾರೆ.

ಕಾಂಗ್ರೆಸ್‌ನಿಂದ ಜಾಗೃತಿ ಅಭಿಯಾನ

ಜನರಲ್ಲಿ ಕೊರೋನಾ ನಿರ್ಮೂಲ ನನಗೆ ಲಸಿಕೆ ಹಾಕಿಸಲು ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷ 'ವ್ಯಾಕ್ಸಿನೇಟ್ ಕರ್ನಾಟಕ' ಅಬಿಯಾನನ ಆರಂಭಿಸಿದೆ. ಇದರಲ್ಲಿ ಹಿರಿಯರಿಗೆ ಲಸಿಕೆ ಹಾಕಿಸಲು ಕ್ರಿಯಾತ್ಮಕವಾಗಿ ಪ್ರೋತ್ಸಾಹಿಸಲು ಹೇಳಲಾಗಿದೆ. 

ನೀವೂ ಭಾಗವಹಿಸಿ:

ಇನ್ನೂ 99 ಮಂದಿ ಈ ಅಭಿಯಾನದಲ್ಲಿ ಗೆಲುವಿನ ನಗೆ ಬೀರುವ ಸಾಧ್ಯತೆಗಳಿವೆ. ಇದಕ್ಕಾಗಿ ಲಸಿಕೆ ಪರ ಜಾಗೃತಿ ಮೂಡಿಸುವ ವಿಡಿಯೋ ಮಾಡಿ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ #VaccinateKarnataka ಎಂಬ ಹ್ಯಾಷ್‌ ಟ್ಯಾಗ್‌ನಡಿ ಪೋಸ್ಟ್ ಮಾಡಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ