
ಬೆಂಗಳೂರು(ಸೆ.22): ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ಲಡ್ಡುವಿನಲ್ಲಿ ಹಂದಿ, ದನ ಸೇರಿದಂತೆ ಇತರೆ ಪ್ರಾಣಿಗಳ ಕೊಬ್ಬು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸುವಂತೆ ಆದೇಶಿಸಿದೆ.
ಶನಿವಾರ ಈ ಕುರಿತು ಇಲಾಖೆಯ ಎಲ್ಲಾ ಜಿಲ್ಲಾ ಅಂಕಿತಾಧಿಕಾರಿಗಳು ಪ್ರತಿ ಜಿಲ್ಲೆಗೆ ತಲಾ 5ರಂತೆ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಸರ್ಕಾರಿ ಪ್ರಯೋಗಾಲಯಗಳಿಗೆ ಗುಣಮಟ್ಟದ ಪರೀಕ್ಷೆಗೆ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ.
ಶೀಘ್ರವೇ ತಿರುಪತಿ ದೇಗುಲ ಶುದ್ಧೀಕರಣ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಎಲ್ಲ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಮಾದರಿಯನ್ನು ಎರಡು ದಿನಗಳೊಳಗೆ ಕಳುಹಿಸಬೇಕು. ಆಹಾರ ಮಾದರಿಯ ಸಂಗ್ರಹಣೆಯ ವಿವರಗಳನ್ನು ಪ್ರಯೋಗಾಲಯದ ಹೆಸರಿನೊಂದಿಗೆ ‘ಫುಡ್ ಸೇಫ್ಟಿ ಕಂಪ್ಲೈನ್ಸ್ ಥ್ರೂ ರೆಗ್ಯೂಲರ್ ಇನ್ಸ್‌ಪೆಕ್ಷನ್ ಆ್ಯಂಡ್ ಸ್ಯಾಂಪ್ಲಿಂಗ್’ನಲ್ಲಿ ದಾಳಿ ನಡೆಸುವಂತೆ ಸೂಚಿಸಲಾಗಿದೆ. ಈ ಕಾರ್ಯದ ಮೇಲ್ವಿಚಾರಣೆಯನ್ನು ಆಯಾ ಜಿಲ್ಲಾ ಅಂಕಿತಾಧಿಕಾರಿಗಳು ನಡೆಸಿ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ