
ಕಾರವಾರ (ಮೇ.08): ಪಹಲ್ಗಾಂ ಘಟನೆಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿದ ವಾಯು ದಾಳಿಯಿಂದ ಯುದ್ಧ ಉನ್ಮಾದ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನದ ಹಡಗುಗಳಿಗೆ ಭಾರತದ ಯಾವುದೇ ಬಂದರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಒಂದು ವೇಳೆ ಪಾಕಿಸ್ತಾನದ ಸಿಬ್ಬಂದಿ ಸಿಂಗಪುರ, ಮಲೇಷ್ಯಾ ಅಥವಾ ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರು ಹಡಗಿಂದ ಕೆಳಕ್ಕಿಳಿಯುವಂತಿಲ್ಲ. ಹಡಗಿನಲ್ಲೇ ಇರಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಾಣಿಜ್ಯ ಬಂದರಿನ ಭದ್ರತಾ ಅಧಿಕಾರಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೈಗಾ ಅಣುಸ್ಥಾವರ, ಐಎನ್ಎಸ್ ಕದಂಬ ನೌಕಾನೆಲೆಗೆ ಭದ್ರತೆ ಬಿಗಿಗೊಳಿಸಲಾಗಿದೆ. ಈ ಸಂಸ್ಥೆಗಳಿಗೆ ಅವರದ್ದೇ ಆದ ಭದ್ರತಾ ಸಿಬ್ಬಂದಿ ಇದ್ದು, ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ. ಮೀನುಗಾರಿಕಾ ಬೋಟಿನಲ್ಲಿ ಅಪರಿಚಿತರು ನುಸುಳಿ ಬರಬಹುದು ಎಂದು ಕರಾವಳಿ ಕಾವಲು ಪಡೆ ಮೀನುಗಾರಿಕಾ ಬೋಟ್‌ನವರಿಗೆ ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ. ಪರಿಶೀಲನೆಯನ್ನೂ ನಡೆಸಿದೆ.
ರೈತರಿಗೆ ಬೆಣ್ಣೆ ತೋರಿಸಿ, ಸುಣ್ಣ ತಿನ್ನಿಸಿದ ಸರ್ಕಾರ: ಭೂಸ್ವಾಧೀನ ಸಭೆಯಲ್ಲಿ ಆಗಿದ್ದೇನು?
ಪಾಕಿಸ್ತಾನಿಯರು ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರಿಗೆ ಹಡಗಿನಿಂದ ಕೆಳಕ್ಕಿಳಿಯಲು ಅವಕಾಶ ಇಲ್ಲ. ಪಾಕ್ ಹಡಗುಗಳಂತೂ ಈಗ ಬಂದರುಗಳಿಗೆ ಪ್ರವೇಶಿಸುವಂತಿಲ್ಲ.
- ರಾಜಕುಮಾರ ಹೆಡೆ, ಬಂದರು ಅಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ