ಬೆಂಗಳೂರಿಂದ ಹೈದರಾಬಾದ್, ಕೇರಳ, ಗೋವಾ, ಮಂಗಳೂರು, ಕುಂದಾಪುರಕ್ಕೆ ಸಂಚಾರ, ಸುಖಕರ ಪ್ರಯಾಣ ನೀಡುವ ಮಲ್ಟಿಆ್ಯಕ್ಸೆಲ್ ಬಸ್ಸುಗಳು, ಹೊಸ ವಿನ್ಯಾಸದಿಂದ ಬಸ್ ಆಕರ್ಷಕ, ಮಂಗಳೂರಿಂದ ಪುಣೆಗೂ ಸಂಚಾರ, ಕೆಎಸ್ಸಾರ್ಟಿಸಿ ವೋಲ್ವೋ ಬಸ್‌ಗಳಿಗಿಂತ ಶೇ.13ರಷ್ಟು ಹೆಚ್ಚು ದರ.
ಬೆಂಗಳೂರು(ಫೆ.22): ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವೋಲ್ವೋ ಬಿಎಸ್6-9600 ಮಾದರಿಯ ಮಲ್ಟಿಆ್ಯಕ್ಸೆಲ್ ‘ಅಂಬಾರಿ ಉತ್ಸವ’ ಬ್ರ್ಯಾಂಡ್ ಹೆಸರಿನಲ್ಲಿ ‘ಸಂಭ್ರಮದ ಪ್ರಯಾಣ’ ಟ್ಯಾಗ್‌ಲೈನ್‌ನೊಂದಿಗೆ 15 ಹೊಸ ವೋಲ್ವೋ ಸ್ಲೀಪರ್ ಬಸ್‌ಗಳ ಕಾರ್ಯಾಚರಣೆಯನ್ನು ಮಂಗಳವಾರದಿಂದ ಆರಂಭಿಸಿದೆ. ಈ ವಾಹನವು 15 ಮೀಟರ್ ಉದ್ದವಿದ್ದು 40+2 ಆಸನವನ್ನು ಹೊಂದಿದೆ. ಒಂದು ಕಡೆ 2 ಮತ್ತು ಇನ್ನೊಂದು ಕಡೆ 1 ಆಸನ ಹೊಂದಿದೆ. ಪ್ರಯಾಣಿಕರು ಮಲಗಲು ಮತ್ತು ಕುಳಿತುಕೊಳ್ಳುವಂತಹ ವ್ಯವಸ್ಥೆಯನ್ನು ಒಳಗೊಂಡಿದೆ.
ಎಲ್ಲಿ ಸಂಚಾರ?:
‘ಅಂಬಾರಿ ಉತ್ಸವ’ ಬಸ್‌ಗಳು ಮೊದಲ ಹಂತವಾಗಿ ಬೆಂಗಳೂರಿನಿಂದ ಸಿಕಂದರಾಬಾದ್, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರಂ, ತ್ರಿಶ್ಶೂರು, ಪಣಜಿ ಹಾಗೂ ಕುಂದಾಪುರ ಮತ್ತು ಮಂಗಳೂರು-ಪುಣೆ ನಡುವೆ ಕಾರ್ಯಾಚರಣೆ ನಡೆಸಲಿವೆ.
KSRTC: ಸರ್ಕಾರದ ವಿರುದ್ಧ ಮತ್ತೆ ಸಾರಿಗೆ ನೌಕರರ ಸಮರ: ಮಾರ್ಚ್ 1ರಿಂದ ಬಸ್ ಬಂದ್ ಸಾಧ್ಯತೆ
ಶೇ.13ರಷ್ಟು ಹೆಚ್ಚು ದರ:
ಈಗಾಗಲೇ ಕಾರ್ಯಾಚರಣೆಯಲ್ಲಿರುವ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳಿಗಿಂತ ಈ ನೂತನ ‘ಅಂಬಾರಿ ಉತ್ಸವ’ ಬಸ್‌ಗಳಲ್ಲಿ ಶೇ.13ರಷ್ಟು ಟಿಕೆಟ್ ದರ ಹೆಚ್ಚಳ ಇರಲಿದೆ. ಅಂಬಾರಿ ಉತ್ಸವ ಬಸ್‌ನಲ್ಲಿ ಬೆಂಗಳೂರು-ಪಣಜಿ ಟಿಕೆಟ್ ದರ 2 ಸಾವಿರ ರು.ಗಳು, ಬೆಂಗಳೂರು-ಸಿಕಂದರಾಬಾದ್ 1750 ರು., ಬೆಂಗಳೂರು-ತ್ರಿಶ್ಶೂರು 1600 ರು. ನಿಗದಿಪಡಿಸಲಾಗಿದೆ.
KSRTC : ಬಸ್ ಕಂಡಕ್ಟರ್ ಹುದ್ದೆಯಲ್ಲಿ ಮೋಸ: ಫಿಸಿಕಲ್ ಟೆಸ್ಟ್‌ನಲ್ಲಿ ಕಬ್ಬಿಣದ ರಾಡ್ ಕಟ್ಟಿಕೊಂಡ ಆಕಾಂಕ್ಷಿಗಳು
ಯೂರೋಪಿಯನ್ ತಂತ್ರಜ್ಞಾನ (ಸ್ಕಾ್ಯಂಡಿನೇವಿಯನ್) ಬಳಸಿ ಬಸ್ ವಿನ್ಯಾಸ ಮಾಡಿದ್ದು ಪರಿಸರ ಸ್ನೇಹಿಯಾಗಿ ರಚಿಸಲಾಗಿದೆ. ವಾಹನದ ಮುಂಭಾಗ ಏರೋಡೈನಾಮಿಕ್ ಆಕೃತಿ ಹೊಂದಿದ್ದು ವೇಗವಾಗಿ ಸಂಚರಿಸುವಾಗ ಗಾಳಿಯ ಎಳೆತ ಕಡಿಮೆ ಮಾಡಲು ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಇಂಧನದ ಉಳಿತಾಯವೂ ಆಗಲಿದೆ.
ಹೊಸದಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿದ್ದು ವಾಹನದ ಹೊರಭಾಗದ ಹೆಡ್‌ಲೈಟ್‌ಗಳನ್ನು ವಿ ಆಕಾರವಾಗಿ ವಿನ್ಯಾಸಗೊಳಿಸಲಾಗಿದ್ದು ಬಸ್ ಆಕರ್ಷಣೆ ಹೆಚ್ಚಿಸಿದೆ. ಸುಧಾರಿತ ಪಿಎಕ್ಸ್ ಸಸ್ಪೆನ್ಷನ್ ಸ್ಟೀರಿಂಗ್ ಉತ್ತಮ ನಿರ್ವಹಣೆಗೆ ಸಹಕಾರಿಯಾಗಿದೆ. ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಚ್ ನೆರವು, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಹೊಂದಿದೆ.