
ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಸೆ.30): ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ದೋಸ್ತಿ ಹಿನ್ನಲೆ, ಎಚ್‌ಡಿಕೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೈತ್ರಿ ವಿರೋಧಿಸಿ ಜೆಡಿಎಸ್ ತೊರೆಯಲು ಹಲವು ನಾಯಕರು ಮುಂದಾಗಿದ್ದಾರೆ. ಇತ್ತ ಇದನ್ನೇ ಎನ್ ಕ್ಯಾಶ್ ಮಾಡಿಕೊಂಡಿರೋ ಡಿಕೆ ಬ್ರದರ್ಸ್ ಎಚ್‌ಡಿಕೆ ಸ್ವಕ್ಷೇತ್ರದಲ್ಲೇ ಆಪರೇಷನ್ ಹಸ್ತಕ್ಕೆ ಪ್ಲಾನ್ ಮಾಡಿದ್ದಾರೆ.
ಮೈತ್ರಿ ವಿರೋಧಿಸಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಕೈ ಸೇರ್ಪಡೆಗೆ ಸಜ್ಜು?
ರಾಜ್ಯ ರಾಜಕಾರಣದಲ್ಲಿ ಸದ್ಯ ಜೆಡಿಎಸ್ -ಬಿಜೆಪಿ ಮೈತ್ರಿ(BJP JDS Alliance)ಯದ್ದೇ ದೊಡ್ಡಮಟ್ಟದ ಸದ್ದು, ಲೋಕಸಮರ(Loksabha election) ತಯಾರಿಯಲ್ಲಿರೋ ಮಾಜಿ ಸಿಎಂ ಹೆಚ್ ಡಿಕೆ(HD Kumaraswamy)ಗೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ಬಿಗ್ ಶಾಕ್ ಎದುರಾಗಿದೆ. ಜೆಡಿಎಸ್ ನ ಮಾಜಿ ಶಾಸಕ ಹೆಚ್ ಡಿಕೆ ಅತ್ಯಾಪ್ತ ಎಂ.ಸಿ ಅಶ್ವಥ್ ಜೆಡಿಎಸ್ ತೊರೆದು ಕೈ ಸೇರಲು ಸಿದ್ದವಾಗಿದ್ದಾರೆ.
ಡಿ.ಕೆ.ಸಹೋದರರ ದಬ್ಬಾಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ: ಎಚ್‌ಡಿಕೆ
ಇಂದು ತಮ್ಮ ನಿವಾಸದಲ್ಲಿ ಆಪ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದ ಅಶ್ವಥ್ ನಿವಾಸಕ್ಕೆ ಸಂಸದ ಡಿಕೆ ಸುರೇಶ್(MP DK Suresh) ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಲೋಕಸಭಾ ಚುನಾವಣಾ ತಯಾರಿಯಲ್ಲಿರೋ ಡಿಕೆ ಸುರೇಶ್ ಹೆಚ್ ಡಿಕೆಗೆ ಸ್ವಕ್ಷೇತ್ರದಲ್ಲೇ ಟಕ್ಕರ್ ಕೊಡುವ ಮೂಲಕ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿದ ಡಿಕೆ ಸುರೇಶ್, ಕಳೆದ ಹಲವು ವರ್ಷಗಳಿಂದ ಅಶ್ವಥ್ ನಮ್ಮ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಕಳೆದ ಹಲವು ಬಾರಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದೆ. ಆದ್ರೆ ಜೆಡಿಎಸ್ ಬಿಟ್ಟು ಬರೋದಿಲ್ಲ ಅಂತಾ ಹೇಳಿದ್ರೂ, ಅಧಿಕಾರದ ಲಾಭವೋ, ರಾಜಕೀಯದ ಧ್ರುವೀಕರಣವೋ ಗೊತ್ತಿಲ್ಲ ಅಶ್ವಥ್ ತಮ್ಮ ಅಪಾರ ಬೆಂಬಲಿಗರ ಜೊತೆ ಇದೇ ಅಕ್ಟೋಬರ್ 2 ರಂದು ಕೆಪಿಸಿಸಿ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ.
ಇನ್ನೂ ಜೆಡಿಎಸ್- ಬಿಜೆಪಿ ಮೈತ್ರಿ ಹಾಗೂ ಕುಮಾರಸ್ವಾಮಿಯ ನಡೆಯಿಂದ ಬೇಸತ್ತಿರೋ ಚನ್ನಪಟ್ಟಣ ಜೆಡಿಎಸ್ ನ ಅಲ್ಪ ಸಂಖ್ಯಾತ ಮುಖಂಡರು ಜೆಡಿಎಸ್ ತೊರೆದು ಕೈ ಸೇರಲು ಸಿದ್ದರಾಗಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ತುಂಬಾ ಹಗುರವಾಗಿ ಮಾತಾಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆಲ್ಲಲು ಅಲ್ಪಸಂಖ್ಯಾತ ಸಮುದಾಯ ದೊಡ್ಡ ಮಟ್ಟದಲ್ಲಿ ಕುಮಾರಸ್ವಾಮಿ ಕೈ ಹಿಡಿದಿದ್ದಾರೆ. ಇದೀಗ ತಮ್ಮ ರಾಜಕೀಯ ಲಾಭಕ್ಕಾಗಿ ಮುಸ್ಲಿಮರ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕುಮಾರಸ್ವಾಮಿಗೆ ಉತ್ತರ ನೀಡಲಿದ್ದಾರೆ. ನಾವೆಲ್ಲರೂ ಡಿಸಿಎಂ, ಡಿಕೆಶಿ ಹಾಗೂ ಸಂಸದ ಡಿಕೆ ಸುರೇಶ್ ಅವರ ಕಾರ್ಯವೈಖರಿಗೆ ಮೆಚ್ಚಿ ಕಾಂಗ್ರೆಸ್ ಸೇರುತ್ತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಡಿಕೆ ಸುರೇಶ್ ಗೆಲ್ಲಲು ಶ್ರಮಿಸುತ್ತೇವೆ ಎಂದರು
ಡಿಕೆ ಸಹೋದರರಿಂದ ಕಳ್ಳ ಮಾರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಳಾಂತರ: ಅಶ್ವತ್ಥ ನಾರಾಯಣ
ಒಟ್ಟಾರೆ ಜೆಡಿಎಸ್- ಬಿಜೆಪಿ ದೋಸ್ತಿ ಬೆನ್ನಲ್ಲೇ ಜೆಡಿಎಸ್ ನಲ್ಲಿ ದೊಡ್ಡ ಮಟ್ಟದ ಅಸಮಾಧಾನ ಭುಗಿಲೆದ್ದಿದ್ದು, ಸ್ವಕ್ಷೇತ್ರದಲ್ಲೇ ಎಚ್‌ಡಿಕೆಗೆ ಮುಜುಗರ ಉಂಟು ಆಗಿದ್ದು, ಯಾವ ರೀತಿ ಡ್ಯಾಮೇಜ್ ಕಂಟ್ರೋಲ್ ಮಾಡ್ತಾರೆ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ