ಅಂತ್ಯಕ್ರಿಯೆಗೆ ಇನ್ನು ಐವರಿಗೆ ಮಾತ್ರ ಅವಕಾಶ

By Kannadaprabha News  |  First Published Apr 26, 2021, 11:59 AM IST

20 ಜನರು ಸೇರುವಂತಿಲ್ಲ| ಹೊಸ ಮಾರ್ಗಸೂಚಿ ಪ್ರಕಟ| ಭಾನುವಾರ ಹೊಸ ಆದೇಶ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್| 


ಬೆಂಗಳೂರು(ಏ.26): ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಆದೇಶವನ್ನು ಕೊಂಚ ಪರಿಷ್ಕರಿಸಿರುವ ರಾಜ್ಯ ಸರ್ಕಾರ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರ ಬದಲು ಕೇವಲ ಐದು ಜನರು ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದೆ.

ರಾಜ್ಯವನ್ನು ಭೀಕರವಾಗಿ ಕಾಡುತ್ತಿರುವ ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಏ.21ರಿಂದ ನೈಟ್‌ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಆದೇಶ ಮಾಡಿತ್ತು.

Latest Videos

undefined

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಈ ಆದೇಶದಲ್ಲಿ ಯಾವುದೇ ಮೃತ ವ್ಯಕ್ತಿಗಳ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈಗ ಅದನ್ನು ಮಾರ್ಪಡಿಸಿ ಕೇವಲ ಐದು ಜನರಿಗೆ ಮಿತಿಗೊಳಿಸಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಭಾನುವಾರ ಆದೇಶ ಹೊರಡಿಸಿದ್ದಾರೆ.
 

click me!