ಕರ್ನಾಟಕದಲ್ಲಿ ಕೊರೋನಾ ಕ್ಷೀಣ: ಸೋಮವಾರ ದಾಖಲೆಯ ಅತೀ ಕಡಿಮೆ ಕೇಸ್ ಪತ್ತೆ

By Suvarna NewsFirst Published Nov 30, 2020, 8:46 PM IST
Highlights

ಕರ್ನಾಟಕದಲ್ಲಿ ಕೊರೋನಾ ಹಂತ-ಹಂತವಾಗಿ ಕ್ಷೀಣಿಸುತ್ತಿದ್ದು, ಸೋಮವಾರ ರಾಜ್ಯದಲ್ಲಿ ದಾಖಲೆಯ ಅತೀ ಕಡಿಮೆ ಕೇಸ್ ಪತ್ತೆಯಾಗಿರುವುದೇ ಸಾಕ್ಷಿ...

ಬೆಂಗಳೂರು, (ನ.30): ರಾಜ್ಯದಲ್ಲಿ ಇಂದು (ಸೋಮವಾರ) ಕೇವಲ 998 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,84,897ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 13 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿನಿಂದ 11,778 ಮಂದಿ ಬಲಿಯಾಗಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಡಿ.31ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಇಂದು 2,209 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ 8,49,821 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು 23,279 ಸಕ್ರೀಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರಿನಲ್ಲಿ ಸೋಮವಾರ 444 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,69,734ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟಾರೆ 4,137 ಮಂದಿ ಬಲಿಯಾಗಿದ್ದಾರೆ.

ಕೊರೋನಾ ಕ್ಷೀಣ
ಹೌದು...ಇಂದಿನ ಕೊರೋನಾ ಸಂಖ್ಯೆ ನೋಡಿದ್ರೆ ತಿಳಿಯುತ್ತೆ ರಾಜ್ಯದಲ್ಲಿ ಕೊರೋನಾ ಕ್ಷೀಣಿಸಿದೆ ಅಂತ. ಮೊದಲೇಲ್ಲ ದಿನಕ್ಕೆ  8 ರಿಂದ 9 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದ್ರೆ, ಅದರ ಸಂಖ್ಯೆ ಇದೀಗ ಸಾವಿರಕ್ಕಿಂತ ಕಡಿಮೆಯಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಕೊರೋನಾ ಕಡಿಮೆಯಾಗಿದೆ ಅಂತ ನಿರ್ಲಕ್ಷ್ಯ ಬೇಡ. ಮಾಸ್ಕ್ ಹಾಕಿಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಇದು ನಿಮ್ಮಗೆ ಒಳ್ಳೆಯದು...

click me!