ಚಾಲೇಂಜ್ ಹಾಕಿದ ಸಾಹುಕಾರ್ : ನನ್ನ ರಾಜೀನಾಮೆ ಖಚಿತ ಎಂದ ರಮೇಶ್ ಜಾರಕಿಹೊಳಿ

By Suvarna NewsFirst Published Nov 30, 2020, 1:43 PM IST
Highlights

ಒಂದು ವೇಳೆ ಆರೋಪ ಸಾಬೀತಾದಲ್ಲಿ ನನ್ನ ರಾಜೀನಾಮೆ ಖಚಿತ ಎಂದು ನೀರಾವರಿ ಖಾತೆ ಸಚಿವ ರಮೇಶ್ ಜಾರಕಿಹೊಳಿ ಚಾಲೇಂಜ್ ಮಾಡಿದ್ದಾರೆ. 

ಬೆಳಗಾವಿ (ನ.30):  ಮಹದಾಯಿ ವಿಚಾರದಲ್ಲಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಗೋವಾ ಸಿಎಂ ಆಹ್ವಾನ ಕೊಡುತ್ತೇನೆ. ಅವರ ಆರೋಪ ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಗ್ರಾಪಂ ಚುನಾವಣೆ ‌ಘೋಷಣೆ ಮಾಡಿರುವುದರಿಂದ ನಮ್ಮ ಇಲಾಖೆಯ ಸಭೆಯನ್ನು ಮುಂದೂಡಲಾಗಿದೆ. ಆದ್ದರಿಂದ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಸಂತಸದ ಸಂಗತಿ ಎಂದರು.

ಬಿಜೆಪಿಯಲ್ಲಿ ಅಸಮಾಧಾನ; ಪ್ರಶಿಕ್ಷಣ ವರ್ಗ ಪ್ರಶ್ನಿಸಿ ಸಂಘದ ಪ್ರಮುಖರಿಗೆ ಕಾರ್ಯಕರ್ತರ ಪತ್ರ ...

22 ಜಿಪಂ ನನ್ನ ಕಂಟ್ರೋಲ್ ನಲ್ಲಿವೆ. ಅದರಲ್ಲಿ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಶಂಕರಗೌಡ, ರಮೇಶ ಗೋರಲ ಅವರು ನನ್ನ ಬೆಂಬಲಿಗರು. ನಾನು ಕೃಷ್ಣಾ ಅನಗೋಳ್ಕರ್ ಯಾಕೆ ರಾಜೀನಾಮೆ ಕೊಟ್ಟ ಎಂದು ತಿಳಿಯುತ್ತಿಲ್ಲ. ಅವನು ಸಹ ನನ್ನ ಬೆಂಬಲಿ ಎಂದು ಹೇಳಿದರು.

ಮಹದಾಯಿ ವಿಚಾರವಾಗಿ ಗೋವಾದವರು ಒಂದು ಗೋಡೆಯನ್ನು ಮುಟ್ಟಿದ್ದರು ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಗೋವಾ ಸಿಎಂಗೂ ಆಹ್ವಾನ ಕೊಡುತ್ತೇನೆ ಅಲ್ಲಿ ಗೋಡೆ ಮುಟ್ಟಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡಿಸಲು ನಾನು ಪ್ರಯತ್ನಿಸುತ್ತೇನೆ. 17 ಜನ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಅನ್ಯಾಯ ಮಾಡುವುದಿಲ್ಲ ಎನ್ನುವ ವಿಶ್ವಾಸ ಇದೆ ಎಂದರು.

ನಾನು ದೆಹಲಿಗೆ ಹೋಗಿದ್ದು ಇಲಾಖೆಯ ಸಂಬಂಧಿಸಿದ ಕುರಿತು. ವಿನಾಕಾರಣ ‌ಮಾಧ್ಯಮದಲ್ಲಿ ತಪ್ಪು ಸಂದೇಶ ನೀಡುತ್ತಿವೆ. ನಾನು ಎಂದೂ ಗುಂಪುಗಾರಿಕೆ ಮಾಡಿಲ್ಲ. ಮೂಲ, ವಲಸೆ ಎಂದು ಬಿಜೆಪಿಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!