ವನ್ಯಜೀವಿ ಮಂಡಳಿ ಸಭೆಯಲ್ಲಿ ಮತ್ತೆ ಮಹದಾಯಿ ಚರ್ಚೆ?

By Kannadaprabha NewsFirst Published Sep 18, 2024, 1:00 PM IST
Highlights

ಮಹದಾಯಿ ಯೋಜನೆಗಾಗಿ ಹುಲಿ ಸಂರಕ್ಷಿತಾರಣ್ಯದ ಭೂಮಿ ನೀಡದಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಾಗಲೇ ಖಂಡಿಸಿದೆ. ಅದಕ್ಕಾಗಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆಯೂ ನಿರ್ಧರಿಸಲಾಗಿದೆ.

ಬೆಂಗಳೂರು(ಸೆ.18): ಉತ್ತರ ಕರ್ನಾಟಕದ 3 ಜಿಲ್ಲೆಗಳ ನೀರಿನ ಸಮಸ್ಯೆ ನೀಗಿಸುವ ಮಹದಾಯಿ ಯೋಜನೆ ಕಾಮಗಾರಿಯನ್ನು ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆಸುವುದಕ್ಕೆ ಸಂಬಂಧಿಸಿದ ವಿಚಾರ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮುಂದಿನ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಕುಡಿಯುವ ನೀರು ಪೂರೈಸಲು ಕಳಸಾ- ಬಂಡೂರಿ ನಾಲೆ ಮೂಲಕ ಮಹದಾಯಿ ನದಿ ನೀರನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿದೆ. 

ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ 2022ರಲ್ಲಿ ಅನುಮತಿ ನೀಡಿದ್ರು, ಕಾಮಗಾರಿ ಆರಂಭವಾಗಬೇಕಿದೆ. ಯೋಜನೆಗಾಗಿ ಒಟ್ಟು 26 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯ ಭೂಮಿ ಬೇಕಾಗಲಿದ್ದು, ಅದರಲ್ಲಿ 10.68 ಹೆಕ್ಟೇ‌ರ್ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ್ದಾಗಿದೆ. ಈ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಮಗಾರಿ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಿಗದ ಕಾರಣದಿಂದಾಗಿ, ಯೋಜನೆಗೆ ಹಿನ್ನಡೆಯಾಗಿದೆ. ಆದರೆ, ಮಂಡಳಿ ಕಳೆದ 2-3 ಸಭೆಗಳಿಂದಲೂ ತಾತ್ಕಾಲಿಕವಾಗಿ ಅನುಮತಿ ತಡೆ ಹಿಡಿದಿದ್ದು, ಮಂಡಳಿ ಮುಂದಿನ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 

Latest Videos

ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು

ಪರಿಶೀಲನೆ ನಡೆಸಿರುವ ಎನ್‌ಟಿಸಿಎ: 

ರಾಷ್ಟ್ರೀಯ ಹುಲಿ ಸಂರಕಣಾ ಪ್ರಾಧಿಕಾರ (ಎನ್ ಟಿಸಿಎ) ನೇಮಿಸಿದ ಸಮಿತಿಯು ಮಹದಾ ಯೋಜನೆ ಯೋಜನೆ ಕಾಮಗಾರಿ ನಡೆಯಲಿ ರುವ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತಾ ರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಕಳೆದ ತಿಂಗಳು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚೆಯಾಗಿದೆ. ಯೋಜನೆ ವಿಚಾರವು ಸುಪ್ರೀಂಕೋರ್ಟ್ ಹಂತದಲ್ಲಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆಯೂ ತಿಳಿಸಲಾ ಎಂದು ಚರ್ಚೆ ವೇಳೆ ಉಲ್ಲೇಖಿಸಲಾಗಿದೆ. ಅಲ್ಲದೆ, ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 38 (1)(ಜಿ)ಗೆ ಅನುಗುಣವಾಗಿ ಎನ್ ಟಿಸಿಎ ನೀಡುವ ಅಭಿಪ್ರಾಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. 

ಗೋವಾದಿಂದಲೇ ಅನುಮತಿ ವಿಳಂಬ: 

ಮಹದಾಯಿ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಗೋವಾ, ಯೋಜನೆ ವಿರುದ್ಧವಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಪ್ರಕರಣ ಸುಪ್ರೀಂಕೋರ್ಟ್‌ಲ್ಲಿರುವ ಕಾರಣ ರಾಷ್ಟ್ರೀಯ ವನ್ಯಜೀವಿ ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಂಡರೂ -ಜ್ಯುಡಿಸ್)ಗೆ ಅಡ್ಡಿಪಡಿಸಿದಂತಾಗಲಿದೆ. ಹೀಗಾಗಿಯೇ ಮಹದಾಯಿ ಯೋಜನೆಗೆ ಅಗತ್ಯವಿರುವ ಹುಲಿ ಸಂರಕ್ಷಿತಾರಣ್ಯದ 10,68 ಹೆಕ್ಟೇರ್ ಭೂಮಿ ಬಳಕೆಗೆ ಅನುಮತಿ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಿಳಿಸಿದೆ. ಇದು ತಾತ್ಕಾಲಿಕ ನಿರ್ಧಾರ ಮುಂದಿನ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಮತ್ತೆ ಚರ್ಚೆ ನಡೆಸುವ ಸಾಧ್ಯತೆಗಳಿದೆ.

ಮಹದಾಯಿ ಹಿನ್ನಡೆಗೆ ಕಾಂಗ್ರೆಸ್ ನಾಯಕರೇ ಕಾರಣ : ಬಸವರಾಜ ಬೊಮ್ಮಾಯಿ

ರಾಜ್ಯದಿಂದ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ  

ಮಹದಾಯಿ ಯೋಜನೆಗಾಗಿ ಹುಲಿ ಸಂರಕ್ಷಿತಾರಣ್ಯದ ಭೂಮಿ ನೀಡದಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಾಗಲೇ ಖಂಡಿಸಿದೆ. ಅದಕ್ಕಾಗಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆಯೂ ನಿರ್ಧರಿಸಲಾಗಿದೆ.

ಯಾವೆಲ್ಲ ಕಾಮಗಾರಿಗೆ ಅರಣ್ಯ ಭೂಮಿ ಅವಶ್ಯ? 

ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಯಂತೆ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯಗಳಲ್ಲಿನ 10.68 ಹೆಕ್ಟೇರ್ ಭೂಮಿಯು ಹುಲಿ ಕಾರಿಡಾರ್‌ ವ್ಯಾಪ್ತಿಗೆ ಬರಲಿದೆ. ಈ ಪ್ರದೇಶವು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕಂಬ ಸೇರಿದಂತೆ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿದೆ. ಈ ಪ್ರದೇಶದಲ್ಲಿ ಮಹದಾಯಿ ಯೋಜನೆಯ ಕಳಸಾ ನಾಲಾದ ಜ್ಯಾಕ್ ವೆಲ್ ಪಂಪ್ ಹೌಸ್, ಎಲೆಕ್ಟಿಕಲ್ ಸಬ್ ಸ್ಟೇಷನ್, ಪೈಪ್‌ಲೈನ್, ಕಾಮಗಾರಿಗಳನ್ನು ನಡೆಸಲಾಗುತ್ತದೆ. 

click me!