
ಬೆಂಗಳೂರು(ಆ.25): ಅಪರಾಧ ಕಾನೂನುಗಳ ಸುಧಾರಣೆ ಸಂಬಂಧ ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯನ್ನು ವಿರೋಧಿಸಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು (ಎನ್‌ಎಲ್‌ಎಸ್‌ಐಯು)ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಶುರುವಾಯ್ತು #UninstallPhonePay ಆಂದೋಲನ; ಆತಂಕದಲ್ಲಿ ಬೆಂಗಳೂರು ಕಂಪನಿ!
ಸಮಿತಿಯಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಸುಧಾರಣೆಗಳು ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆಯೋ ಆ ಸಮುದಾಯಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವರ್ಗಗಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕುರಿತು ತಜ್ಞರ ಸಮಾಲೋಚನೆಯನ್ನು ಮುಂದೂಡಲು ಸಹ ಸಮಿತಿಯನ್ನು ಒತ್ತಾಯಿಸಲಾಗಿದೆ ಎಂದು ಅಭಿಯಾನದ ಪ್ರಮುಖ ಸಂಘಟಕ ಡಿ.ಮಂಥನ್ ತಿಳಿಸಿದ್ದಾರೆ.
ಚುನಾವಣೆ ಗೆಲ್ಲಲು ಮೋದಿ ವಿಡಿಯೋಗೆ ಟ್ರಂಪ್ ಮೊರೆ!
ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಕ್ಷೇಪಣೆಗಳಿದ್ದರೆ ಲೀಲ್ ಸರ್ವಿಸಸ್ ಕ್ಲಿನಿಕ್ ಸಂಪರ್ಕಿಸಬಹುದಾಗಿದೆ. ಕಾನೂನು ನೆರವು ಮತ್ತು ಸಮಾಲೋಚನೆಗೆ ಲೀಗಲ್ ಸೆಲ್ ಮಧ್ಯಸ್ಥಿಕೆ ವಹಿಸುತ್ತದೆ. ಈ ಬಗ್ಗೆ ನೆರವಿಗೆ 7019373502 (ಡಿ.ಮಂಥನ್) ಅಥವಾ ಐs್ಚಃ್ಞಜಿs.a್ಚ.ಜ್ಞಿ ಸಂಪರ್ಕಿಸಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ