ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ ಮಹಾಮಾರಿ ಹರಡುವ ವೇಗ ಕೊಂಚ ನಿಧಾನವಾಗಿದೆ. ಹರಡುವ ವೇಗದ ಗತಿ ಕಡಿಮೆಯಾಗಿದೆ.
ವರದಿ : ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಆ.25): ರಾಜ್ಯದಲ್ಲಿ ಕೊರೋನಾ ಸೋಂಕು ದ್ವಿಗುಣ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜೂನ್ ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಸೋಂಕಿನ ವೇಗ ತುಸು ಕಡಿಮೆಯಾಗಿದ್ದು, ಆಗಸ್ಟ್ 1 ರಂದು ಪ್ರತಿ 13 ದಿನಕ್ಕಿದ್ದ ದ್ವಿಗುಣ ದರ ಪ್ರಸ್ತುತ 20 ದಿನಕ್ಕೆ ಏರಿಕೆಯಾಗಿದೆ.
ಸದ್ಯ ಸೋಂಕು ಹರಡುವಿಕೆ ಪ್ರಮಾಣ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಸೆಪ್ಟೆಂಬರ್ ಕೊನೆಯ ವಾರದ ವೇಳೆಗೆ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು ಐದು ಲಕ್ಷ ಗಡಿ ದಾಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗುಡ್ ನ್ಯೂಸ್: ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು..!...
ರಾಜ್ಯದಲ್ಲಿ ಆ.23ರ ವೇಳೆಗೆ 2.77 ಲಕ್ಷ ಮಂದಿಗೆ ಸೋಂಕು ಉಂಟಾಗಿದ್ದು 4,683 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಶೇ.1.98ರಷ್ಟಿದ್ದ ಸಾವಿನ ದರ ಈಗ ಶೇ.1.68ಕ್ಕೆ ಇಳಿಕೆಯಾಗಿದೆ. ಇನ್ನು ಈವರೆಗೆ ಒಟ್ಟು 24 ಲಕ್ಷ ಪರೀಕ್ಷೆ ನಡೆಸಿದ್ದು ಪರೀಕ್ಷೆಗೆ ಒಳಪಟ್ಟಸರಾಸರಿ 11.5 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಸೋಂಕಿನ ವೇಗದ ಮಾನದಂಡವಾಗಿರುವ ದ್ವಿಗುಣ ದರ ಆಗಸ್ಟ್ ತಿಂಗಳಲ್ಲಿ ಇಳಿಕೆಯಾಗಿದೆ. ಆ.3ರಂದು 1.34 ಲಕ್ಷದಷ್ಟಿದ್ದ ಸೋಂಕು ದ್ವಿಗುಣಗೊಳ್ಳಲು 20 ದಿನ ತೆಗೆದುಕೊಂಡಿದೆ. ಆ.1ಕ್ಕೆ ಪ್ರತಿ 13 ದಿನಗಳಿಗೆ ದ್ವಿಗುಣಗೊಳ್ಳುತ್ತಿದ್ದ ಸೋಂಕು ಪ್ರಸ್ತುತ ಪ್ರತಿ 20 ದಿನಗಳಿಗೆ ದ್ವಿಗುಣಗೊಳ್ಳುತ್ತಿದೆ. ಇನ್ನು ಈ ಪ್ರಮಾಣ ಇಳಿಮುಖವಾಗುವ ಮುನ್ಸೂಚನೆ ಲಭಿಸಿದ್ದು, ಮುಂದಿನ ಒಂದು ತಿಂಗಳಲ್ಲಿ ದ್ವಿಗುಣ ದರ 30 ದಿನಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಟಾಸ್ಕ್‌ಫೋರ್ಸ್ ಸದಸ್ಯರೂ ಆದ ತಜ್ಞರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಅಂತರ್ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ
ಈ ತಿಂಗಳಾಂತ್ಯಕ್ಕೆ 3 ಲಕ್ಷ ಕೇಸ್: ಸೋಂಕಿನ ದ್ವಿಗುಣ ಸಮಯ ಹೆಚ್ಚಾಗುವ ಮೂಲಕ ಸೋಂಕಿನ ವೇಗ ತಗ್ಗಿದರೂ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸೋಂಕಿತರ ಪ್ರಮಾಣ 5 ಲಕ್ಷ ಗಡಿ ದಾಟಲಿದೆ. ಆಗಸ್ಟ್ ಅಂತ್ಯಕ್ಕೆ 3 ಲಕ್ಷ ಗಡಿ ದಾಟಲಿದೆ. ಸೋಂಕು ಪರೀಕ್ಷೆಗಳ ಪ್ರಮಾಣ ಹೆಚ್ಚಳ ಮಾಡಿದ್ದು, ಸೋಂಕಿನ ಭೀತಿಯಲ್ಲಿರುವ ಸಾರ್ವನಿಕರು ಮುಕ್ತವಾಗಿ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಗಳು ಹೆಚ್ಚಾದಷ್ಟೂಸೋಂಕಿತರನ್ನುಸಮುದಾಯದಿಂದ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಅವರಿಂದ ಬೇರೆಯವರಿಗೆ ಹರಡದಂತೆ ತಡೆಯಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಪರೀಕ್ಷೆಯೊಂದೇ ಮಾರ್ಗ: ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಕೊರೋನಾ ನಿಯಂತ್ರಣದ ಮೂಲ ಮಂತ್ರವೇ ಹೆಚ್ಚೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಪ್ರತ್ಯೇಕಗೊಳಿಸುವುದು. ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದ್ದು, ಇದನ್ನು ವಿಶ್ವ ಸಂಸ್ಥೆಯೂ ದೃಢಪಡಿಸಿದೆ. ಹೀಗಾಗಿಯೇ ರಾಜ್ಯದಲ್ಲಿ ಹೆಚ್ಚೆಚ್ಚು ರಾರಯಪಿಡ್ ಆಂಟಿಜೆನ್ ಪರೀಕ್ಷೆ ನಡೆಸುತ್ತಿದ್ದೇವೆ. ಪರೀಕ್ಷೆಗಳ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಡದೆ ಸಾರ್ವನಿಕರು ಪರೀಕ್ಷೆಗೆ ಒಳಪಡಬೇಕು ಎಂದರು.